ಆರ್ಥಿಕ ಸಂಕಷ್ಟದ ನಡುವೆ ಮಗನ ಬಹುದಿನಗಳ ಬಿರಿಯಾನಿ ಕನಸು ಈಡೇರಿಸಿದ ತಂದೆ, ಜನ ಭಾವುಕ, ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಬಿರಿಯಾನಿ ಬೆಲೆಯಿಂದ ಖರೀದಿ ಸಾಧ್ಯವಾಗಿರಲಿಲ್ಲ. ಮಗನ ಖುಷಿ, ತಂದೆ ಸಾರ್ಥಕತೆಯ ಭಾವಕ್ಕೆ ಹಲವರು ಕಮೆಂಟ್ ಮಾಡಿದ್ದಾರೆ.
ಕೋಲ್ಕತಾ (ಏ.18) ಮಕ್ಕಳು ಬಿರಿಯಾನಿ ಸೇರಿದಂತೆ ಏನಾದರು ತಿನ್ನಬೇಕು ಎಂದರೆ ಪೋಷಕರು ಉಪವಾಸ ಕುಳಿತಾದರೂ ಖರೀದಿಸುತ್ತಾರೆ. ಆದರೆ ಇಲ್ಲೊಂದು ಕುಟುಂಬಕ್ಕೆ ಉಪವಾಸ ಕುಳಿತರೂ 200 ರಿಂದ 300 ರೂಪಾಯಿ ಬಿರಿಯಾನಿ ಖರೀದಿಸಲು ಸಾಧ್ಯವಾಗಿರಲಿಲ್ಲ. ಮಗ ಪ್ರತಿ ದಿನ ಬಿರಿಯಾನಿ ತಿನ್ನಬೇಕು ಎಂದರೂ ಖರೀದಿ ಸಾಧ್ಯವಾಗಿರಲಿಲ್ಲ. ಆದರೆ ದಿಢೀರ್ ಆಗಿ ಆಫರ್, ವೀಕ್ ಡೇ ಕಾರಣ ಬಿರಿಯಾನಿ ಬೆಲೆ ಕಡಿಮೆಯಾಗಿತ್ತು. ಹೀಗಾಗಿ ಮಗನ ಆಸೆಯಂತೆ ಖರೀದಿಸಿ ತಂದಿದ್ದಾರೆ. ಮಗನ ಜೊತೆಗೆ ತಂದೆ ಕೂಡ ಬಿರಿಯಾನಿ ಸವಿದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಪಶ್ಚಿಮ ಬಂಗಾಳದ ಬಗುಲಾ ಪಟ್ಟಣದ ನಾರಾಯಣ ಸರ್ಕಾರ್ ಯೂಟ್ಯೂಬರ್ ಆಗಿದ್ದಾರೆ. ಕಾರ್ಮಿಕನಾಗಿ ಇತರ ಸಣ್ಣ ಪುಟ್ಟ ಕೆಲಸ ಮಾಡುತ್ತಿರುವ ನಾರಾಯಣ ಸರ್ಕಾರ್ ಇತರ ಕಮಿಟ್ಮೆಂಟ್, ಸಾಲದ ಇಎಂಐ ಸೇರಿದಂತೆ ಹಲವು ಕಾರಣಗಳಿಂದ ಪ್ರಯಾಸದ ಜೀವನ ಸಾಗಿಸುತ್ತಿದ್ದರು. ಇದರ ನಡುವೆ ನಾರಾಯಣ್ ಸರ್ಕಾರ್ ಮಗ ಬಿರಿಯಾನಿ ತಿನ್ನುವ ಆಸೆ ವ್ಯಕ್ತಪಡಿಸಿದ್ದ. ಆದರೆ ಹೊಟೆಲ್‌ನಿಂದ ಬಿರಿಯಾನಿ ಖರೀದಿ ನಾರಾಯಣ್‌ಗೆ ಪ್ರಯಾಸವಾಗಿತ್ತು. ಆರ್ಥಿಕ ಪರಿಸ್ಥಿತಿ ಇದಕ್ಕೆ ಅನುವು ಮಾಡುತ್ತಿರಲಿಲ್ಲ.
ಮಗನ ಆಸೆ ಈಡೇರಿಸಿದ ತಂದೆ
ಮಗ ಹಲವು ದಿನಗಳಿಂದ ಬಿರಿಯಾನಿ ತಿನ್ನವ ಆಸೆ ವ್ಯಕ್ತಪಡಿಸಿದ್ದರೂ ಖರೀದಿ ಸಾಧ್ಯವಾಗಿರಲಿಲ್ಲ. ಆದರೆ ಬೇರೆ ಕಾರಣಕ್ಕಾಗಿ ಮಾರುಕಟ್ಟೆಗೆ ತೆರಳಿದ್ದ ನಾರಾಯಣ್ ಸರ್ಕಾರಗೆ ಬಿರಿಯಾನಿ ಆಫರ್ ಕಣ್ಣಿಗೆ ಬಿದ್ದಿದೆ. ವೀಕ್ ಡೇ ಹಾಗೂ ಇಥರ ಕಾರಣಗಳಿಂದ ಆಫರ್ ನೀಡಲಾಗಿತ್ತು. ಬಿರಿಯಾನಿ ಕಡಿಮೆ ಬೆಲೆಯಲ್ಲಿ ಲಭ್ಯವಿತ್ತು. ಹೀಗಾಗಿ ಮೂರು ಪ್ಯಾಕೆಟ್ ಬಿರಿಯಾನಿ ಖರೀದಿಸಿ ಮನೆಗೆ ಬಂದ ತಂದೆ ಮಗನ ಮುಂದಿಟ್ಟಿದ್ದಾರೆ. ಮಗನ ಖುಷಿ, ಸಂಭರಮ ಕಂಡು ತಂದೆ ಕೂಡ ಭಾವುಕರಾಗಿದ್ದಾರೆ.
ಯೂಟ್ಯೂಬರ್ ಆಗಿರುವ ನಾರಾಯಣ ಸರ್ಕಾರ್ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಘಟನೆಯನ್ನು ಬೆಂಗಾಲಿಯಲ್ಲಿ ವಿವರಿಸಿದ್ದಾರೆ. ಬಿರಿಯಾನಿ ತಟ್ಟೆಯಲ್ಲಿ ಹಾಕಿರುವ ಮಗ ಅತ್ಯಂತ ಖುಷಿಯಿಂದ ಸವಿದಿದ್ದಾರೆ. ತಂದೆ ಮಗನ ಪ್ರೀತಿ ಹಾಗೂ ಆರ್ಥಿಕ ಸಂಕಷ್ಟದ ನಡುವೆಯೂ ಮಗನಿಗಾಗಿ ಬಿರಿಯಾನಿ ತಂದ ತಂದೆ ಕುರಿತು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನಾರಾಯಣ್ ಸರ್ಕಾರ್ ಕುಟುಂಬದ ಸಂಕಷ್ಟಗಳು ಬೇಗನೆ ನಿವಾರಣೆಯಾಗಲಿ, ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿ ಎಂದು ಹಲವರು ಶುಭಕೋರಿದ್ದಾರೆ. ಈ ವಿಡಿಯೋ ನಾರಾಯಣ್ ಸರ್ಕಾರಗೆ ಭರ್ಜರಿ ಲೈಕ್ಸ್ ಹಾಗೂ ಕಮೆಂಟ್ಸ್ ನೀಡಿದೆ.


