ಶ್ರೀನಗರ(ಜ.01): ಜಮ್ಮು ಮತ್ತು ಕಾಶ್ಮೀರದ ಮೇಲಿನ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಇದೀಗ ದಶಕಗಳಿಗೆ ಕಣಿವೆ ರಾಜ್ಯದಲ್ಲಿ ಹಲವು ಕಾರಣಗಳಿಂದ ನೆಲೆಸಿರುವ ಇತರ ರಾಜ್ಯದವರಿಗೆ ಸ್ಥಳೀಯ ನಿವಾಸಿ ಪ್ರಮಾಣ ಪತ್ರ ಸಿಗುತ್ತಿದೆ. ಹೀಗೆ ಕಳೆದ 4 ದಶಕಗಳಿಂದ ಶ್ರೀನಗರದಲ್ಲಿ ಆರಭಣ ವ್ಯಾಪಾರ ಮಾಡುತ್ತಿದ್ದ ಪಂಜಾಬಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.

ಜಮ್ಮು - ಕಾಶ್ಮೀರದಲ್ಲಿ ಎಲ್ಲಾ ಭಾರತೀಯರಿಗೆ ಭೂಮಿ ಖರೀದಿಗೆ ಅವಕಾಶ, ಕೇಂದ್ರದ ಮಹತ್ವದ ಹೆಜ್ಜೆ!.

ಪಂಜಾಬ್ ಮೂಲಕ ಆಭರಣ ವ್ಯಾಪಾರಿ ಸತ್ಪಾಲ್ ನಿಶ್ಚಲ್ ಮಳಿಗೆಯತ್ತ ಬೈಕ್‌ನಲ್ಲಿ ಬಂದ ಉಗ್ರರು ಗುಂಡಿ ದಾಳಿ ನಡೆಸಿದ್ದಾರೆ. ಪರಿಣಾಮ ಸತ್ಯಾಪಾಲ್ ಸಾವನ್ನಪ್ಪಿದ್ದಾರೆ. ಈ ಘಟನೆಯ ಹೊಣೆ ಹೊತ್ತುಕೊಂಡಿರುವ ಪಾಕಿಸ್ತಾನ ಪೋಷಿತ ಅಮೃತಸರದಲ್ಲಿ ಬೇರೋರಿವು TRF ಉಗ್ರ ಸಂಘಟನೆ ಆಘಾತಕಾರಿ ಮಾಹಿತಿ ಹೊರಹಾಕಿದೆ.

ಕಾಶ್ಮೀರ ಜನತೆ ಭಾರತಕ್ಕಿಂತ ಚೀನಾ ಆಳ್ವಿಕೆ ಬಯಸುತ್ತಾರೆ: ಫಾರೂಖ್ ಅಬ್ದುಲ್ಲಾ !.

ಕಾಶ್ಮೀರ ನಮ್ಮದು, ಇಲ್ಲಿ ಯಾರು ಯಾವ ಕಾನೂನು ಜಾರಿಗೆ ತಂದರೂ, ನಮ್ಮವರಿಗಲ್ಲದೆ ಇತರರಿಗೆ ಅವಕಾಶವಿಲ್ಲ. ಹೀಗಾಗಿ ಕೊಲ್ಲಲಾಗಿದೆ ಎಂದು ಉಗ್ರ ಸಂಘಟನೆ ಹೇಳಿಕೊಂಡಿದೆ.  ನಮ್ಮವರಲ್ಲದೇ ಇತರ ಯಾರೂ ಕೂಡ ಕಾಶ್ಮೀರದಲ್ಲಿ ಇರಬಾರದು, ಹಕ್ಕು ಪತ್ರಗಳನ್ನು ಪಡೆಯಬಾರದು ಎಂದು ಎಚ್ಚರಿಕೆ ನೀಡಿದೆ ಎಂದು ಫೇಸ್‌ಬುಕ್ ಮೂಲಕ ಟಿಆರ್‌ಎಫ್ ಅಧೀಕೃತ ಖಾತೆಯಲ್ಲಿನ ಪತ್ರ ಹರಿದಾಡುತ್ತಿದೆ.

ಸತ್ಯಾಪಲ್ ನಿಶ್ಚಲ್ ಆಭರಣ ವ್ಯಾಪರಕ್ಕಾಗಿ ಮಳಿಗೆ ಖರೀದಿಸಿದ್ದರು. ಇನ್ನು ಶ್ರೀಗರದಲ್ಲಿ ಮನೆಯನ್ನು ಖರೀದಿಸಿದ್ದರು. ಸತ್ಯಾಪಾಲ್‌ಗೆ ಹೊಸ ನೀತಿಯ ಅನ್ವಯ ಹಕ್ಕುಪತ್ರಗಳನ್ನು ನೀಡಲಾಗಿತ್ತು.