Asianet Suvarna News Asianet Suvarna News

ಕಾಶ್ಮೀರದ ಭೂಹಗರಣದಲ್ಲಿ ಫಾರೂಕ್‌, ಒಮರ್‌ ಹೆಸರು!

 ಸರ್ಕಾರದ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿಕೊಂಡು ಅದರಲ್ಲಿ ನಿವಾಸ ನಿರ್ಮಿಸಿದ್ದಾರೆ ಎಂಬ ಆರೋಪ| ಕಾಶ್ಮೀರದ ಭೂಹಗರಣದಲ್ಲಿ ಫಾರೂಕ್‌, ಒಮರ್‌ ಹೆಸರು!

Farooq Abdullah named in Jammu and Kashmir Roshni land scam accused of illegally acquiring govt land pod
Author
Bangalore, First Published Nov 26, 2020, 11:19 AM IST

ಜಮ್ಮು(ನ.26): ಸರ್ಕಾರದ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿಕೊಂಡು ಅದರಲ್ಲಿ ನಿವಾಸ ನಿರ್ಮಿಸಿದ್ದಾರೆ ಎಂಬ ಆರೋಪಿತರ ಪಟ್ಟಿಯೊಂದನ್ನು ಜಮ್ಮು-ಕಾಶ್ಮೀರದ ಆಡಳಿತ ಮಂಗಳವಾರ ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಫಾರೂಖ್‌ ಅಬ್ದುಲ್ಲಾ ಮತ್ತು ಒಮರ್‌ ಅಬ್ದುಲ್ಲಾ ಅವರ ಹೆಸರುಗಳು ಸಹ ಸೇರಿಕೊಂಡಿವೆ. ಆದರೆ, ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿವಾಸ ನಿರ್ಮಿಸಲಾಗಿದೆ ಎಂಬ ತಮ್ಮ ವಿರುದ್ಧದ ಆರೋಪವನ್ನು ಉಭಯ ನಾಯಕರು ಅಲ್ಲಗಳೆದಿದ್ದಾರೆ.

ಪಾಕ್ ಮೂಲದ ಉಗ್ರರ ಹೊಡೆದುರುಳಿಸಿದ ಸೇನೆಗೆ ಮೋದಿ ಸಲಾಂ!

ಅಕ್ರಮ ಮತ್ತು ಅಸಾಂವಿಧಾನಿಕ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ವಿವಾದಾತ್ಮಕ ರೋಶನಿ ಜಮೀನು ಯೋಜನೆಯಡಿ ಸಾರ್ವಜನಿಕ ಜಮೀನು ಪಡೆದವರ ಪಟ್ಟಿತಯಾರಿಸಿ ಅದನ್ನು ಸಾರ್ವಜನಿಕಗೊಳಿಸುವಂತೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಕಾಶ್ಮೀರದ 7 ಪಕ್ಷಗಳ ಕೂಟಕ್ಕೆ ಫಾರೂಖ್‌ ಅಬ್ದುಲ್ಲಾ ಮುಖ್ಯಸ್ಥ

ಸಂವಿಧಾನದ 370ನೇ ವಿಧಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಜಮ್ಮು- ಕಾಶ್ಮೀರದ ಏಳು ಪ್ರಮುಖ ರಾಜಕೀಯ ಪಕ್ಷಗಳು ಒಕ್ಕೂಟಕ್ಕೆ ರಚಿಸಿಕೊಂಡಿವೆ. ಪೀಪಲ್ಸ್‌ ಅಲಯನ್ಸ್‌ ಫಾರ್‌ ಗುಪ್ಕರ್‌ ಡಿಕ್ಲೆರೇಷನ್‌ (ಪಿಎಜಿಡಿ) ಮೈತ್ರಿಕೂಟಕ್ಕೆ ನ್ಯಾಷನಲ್‌ ಕಾನ್ಫೆರೆನ್ಸ್‌ ಮುಖಂಡ ಫಾರೂಖ್‌ ಅಬ್ದುಲ್ಲಾ ಮುಖ್ಯಸ್ಥರಾಗಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಉಪಾಧ್ಯಕ್ಷೆ ಆಗಿ ಆಯ್ಕೆ ಆಗಿದ್ದಾರೆ. 

Follow Us:
Download App:
  • android
  • ios