ನವದೆಹಲಿ(ನ.20): ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದಲ್ಲಿ ವಿದ್ವಂಸಕ ಕೃತ್ಯಕ್ಕೆ ರೆಡಿಯಾಗಿದ್ದ ಪಾಕಿಸ್ತಾನ ಮೂಲದ ಉಗ್ರರ ಹೆಡೆಮುರಿ ಕಟ್ಟಲಾಗಿದೆ. ಭಾರತೀಯ ಸೇನೆ ಹೋರಾಟದಿಂದ ಶಸ್ತ್ರಸಜ್ಜಿತ ನಾಲ್ವರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ.  ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿರುವ ನಾಗ್ರೋಟ ಟೋಲ್ ಪ್ಲಾಜಾ ಬಳಿ ನಡೆದ ಈ ಹೋರಾಟದಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆ ಧೈರ್ಯ ಹಾಗೂ ವೃತ್ತಿಪರತೆಗೆ ಸಲಾಂ ಹೇಳಿದ್ದಾರೆ.

ಜಮ್ಮು ಹೆದ್ದಾರಿಯಲ್ಲಿ ಉಗ್ರರ ಮೇಲೆ ಗುಂಡಿನ ಸುರಿಮಳೆ; ಮೈ ಜುಮ್ಮೆನಿಸುವ ವಿಡಿಯೋ!

ಸರಕು ಸಾಗಾಣೆಯ ಟ್ರಕ್ ಮೂಲಕ ಅಡಗಿ ಕುಳಿತಿದ್ದ ಉಗ್ರರು ನಾಗ್ರೋಟಾ ಟೋಲ್ ಪ್ಲಾಜಾ ಬಳಿ ಗುಂಡಿನ ದಾಳಿ ಆರಂಭಿಸಿದ್ದಾರೆ. ತಕ್ಷಣವೇ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಭಾರತೀಯ ಸೇನೆ ಪ್ರತಿ ದಾಳಿ ನೆಡೆಸಿದೆ. ಉಗ್ರರಿಗೆ ಶರಣಾಗುವಂತೆ ಮೈಕ್ ಮೂಲಕ ಸೂಚನೆ ನೀಡಲಾಯಿತು. ಆದರೆ ಉಗ್ರರು ಮತ್ತೆ ದಾಳಿಗೆ ಮುಂದಾಗಿದ್ದಾರೆ. ಮಿಂಚಿನ ಕಾರ್ಯಚರಣೆ ನಡೆಸೋ ಮೂಲಕ ನಾಲ್ವರು ಉಗ್ರರನ್ನು ಹೊಡೆದುರಳಿಸಲಾಗಿದೆ. ಈ ಘಟನೆ ಕುರಿತು ಮೋದಿ ಟ್ವೀಟ್ ಮೂಲಕ ಭಾರತದ ಯಶಸ್ವಿ ಕಾರ್ಯಚರಣೆಯಿಂದ ಪಾಕಿಸ್ತಾನ ಪೋಷಿತ ವಿದ್ವಂಸಕ ಕೃತ್ಯ ಸಂಚು ವಿಫಲವಾಗಿದೆ ಎಂದಿದ್ದಾರೆ.

 

ಭಾರಿ ಶಸ್ತ್ರಾಸ್ತ್ರ, ಸ್ಫೋಟಕ ಲಾರಿಯಲ್ಲಿ ತುಂಬಿಕೊಂಡು ಭಾರತಕ್ಕೆ ಅತೀ ದೊಡ್ಡ ಹಾನಿ ಮಾಡಲು ಸಂಚು ರೂಪಾಸಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ಸೇರಿದ ನಾಲ್ವರು ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ. ಈ ಮೂಲಕ ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗುವ ಬಹುದೊಡ್ಡ ಪ್ಲಾನ್ ವಿಫಲಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ಸೇನೆ ಹಾಗೂ ಜಮ್ಮ ಮತ್ತು ಕಾಶ್ಮೀರ ಪೊಲೀಸ್ ಸೇರಿದಂತೆ ಭದ್ರತಾ ಪಡೆ ಧೈರ್ಯ ಹಾಗೂ ವೃತ್ತಿಪರತೆಯನ್ನು ಪ್ರದರ್ಶಿಸಿದೆ. ಭದ್ರತಾ ಪಡೆಯ ವೃತ್ತಿಪರತೆ, ಜಾಗರೂಕತಗೆ ಧನ್ಯವಾದಗಳು.  ಜಮ್ಮ ಮತ್ತು ಕಾಶ್ಮೀರದಲ್ಲಿ ಪ್ರಭಾಪ್ರಭುತ್ವಕ್ಕೆ ಅಡ್ಡಿಪಡಿಸುತ್ತಿರುವ ಈ ಉಗ್ರರಿಗೆ ತಕ್ಕ ಶಾಸ್ತಿ ಮಾಡಿರುವುದಕ್ಕೆ ಧನ್ಯವಾದ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.