ಹರ್ಯಾಣ (ಡಿ.  01)  ಲೂಧಿಯಾನದ 55 ವರ್ಷದ ರೈತ ಗಜ್ಜಾನ್ ಸಿಂಗ್  ರೈತರ ಪ್ರತಿಭಟನೆ ವೇಳೆ ಮೃತನಾಗಿದ್ದು ಹರ್ಯಾಣ ಸರ್ಕಾರವೇ ಇದಕ್ಕೆಲ್ಲ ಕಾರಣ ಎಂದು ಆರೋಪಿಸಲಾಗಿದೆ.

ರೈತನ ಕುಟುಂಬ ಮತ್ತು ರೈತ ಮುಖಂಡರು ಆರೋಪ ಮಮಾಡಿದ್ದು ಪೊಲೀಸರು ಬಳಸಿದ್ದ ಜಲಫಿರಂಗಿ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದಿದ್ದಾರೆ.  ಜಲಫಿರಂಗಿ ಕಾರಣ ಸಿಂಗ್ ಆರೋಗ್ಯ ಹದಗೆಟ್ಟಿತ್ತು ಪರಿಣಾಮ  ನಿಧನರಾಗಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ.  ಸೋಮವಾರ ರೈತರ ಪಾರ್ಥಿವ ಶರೀರವನ್ನು ಪಡೆಯಲು ಹಿಂದೇಟು ಹಾಕಿದ್ದು ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಪಟ್ಟು ಹಿಡಿದಿದ್ದರು.

Fact Check; ದೆಹಲಿ ಪ್ರತಿಭಟನೆಗೆ ಬಂದಿದ್ದ ಮಹಿಳೆಯೇ ಇಲ್ಲಿ ರೈತಳಾಗಿದ್ದಳ!

ಭಾನುವಾರ ಸಂಜೆ ನೆಲಕ್ಕೆ ಕುಸಿದ ರೈತ ಸಿಂಗ್ ರನ್ನು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.  ಮೃತಪಟ್ಟ ರೈತನಿಗೆ ವಿವಾಹ ಆಗಿಲ್ಲ. ಮೂವರು ಸಹೋದರರಿದ್ದು ಖತ್ರಾ ಹಳ್ಳಿಯಲ್ಲಿ ಮೂರು  ಏಕರೆ ಜಮೀನಿದೆ.

ದೆಹಲಿ ಚಲೋ ರೈತರ ಪ್ರತಿಭಟನೆಯಲ್ಲಿ ಸಿಂಗ್ ಸೇರಿದಂತೆ ಮೂವರು ರೈತರು ಮೃತಪಟ್ಟಂತೆ ಆಗಿದೆ. ಧನ್ನಾ ಸಿಂಗ್ ರಸ್ತೆ ಅಪಘಾತದಲ್ಲಿ ಮೃತರಾಗಿದ್ದರು.  ಜನಕ್ ರಾಜ್ ಸಿಂಗ್ ಎಂಬುವರು ರಾತತ್ರಿ ಕಾರಿನಲ್ಲಿ ನಿದ್ರೆ ಮಾಡುತ್ತಿರುವಾಗಲೇ ಮೃತಪಟ್ಟಿದ್ದರು.