ಪ್ರತಿಭಟನಾ ನಿರತ ರೈತರ ಒಂದು ನಿರ್ಧಾರ, ಸಂಕಷ್ಟದಲ್ಲಿ ಒಂದು ರಾಜ್ಯದ ಜನ!

ರೈತರ ಪ್ರತಿಭಟನೆ ಹಾದಿ ತಪ್ಪಿದೆ, ಉದ್ದೇಶ ಬೇರೆಯಾಗಿದೆ ಅನ್ನೋ ಆರೋಪ ಬಲಗೊಳ್ಳುತ್ತಿರುವ ವೇಳೆ ಇದೀಗ ರೈತರ ಒಂದು ನಡೆಯಿಂದ ರಾಜ್ಯದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಅಷ್ಟಕ್ಕೂ ಪ್ರತಿಭಟನಾ ನಿರತ ರೈತರ ನಿರ್ಧಾರ, ಇಡೀ ರಾಜ್ಯಕ್ಕೆ ತಂದಿಟ್ಟ ಸಂಕಷ್ಟವೇನು? ಇಲ್ಲಿದೆ ವಿವರ.

Telecom services disrupted in Punjab after protesting farmers vandalise mobile tower ckm

ಪಂಜಾಬ್(ಡಿ.28): ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪು ಇದೀಗ ಜಿಯೋದಿಂದ ಎರ್‌ಟೆಲ್‌ಗೆ ಪ್ರೋರ್ಟ್ ಚಳುವಳಿಯೂ ನಡೆಯುತ್ತಿದೆ. ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಪಂಜಾಬ್ ರೈತರು ಜಿಯೋ ಟವರ್‌ಗಳನ್ನು ಧ್ವಂಸಗೊಳಿಸಿದ್ದಾರೆ. ಸುಮಾರು 1,500 ಮೊಬೈಲ್ ಟವರ್‌ ಕೇಬಲ್ ಸೇರಿದಂತೆ ಹಲವು ರೀತಿಯ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ಪಂಜಾಬ್ ರಾಜ್ಯದಲ್ಲಿ ಜಿಯೋ ಟೆಲಿಕಾಂ ಸೇವೆ ಸ್ಥಗಿತಗೊಂಡಿದೆ.

ರೈತರ ಆಕ್ರೋಶ, 1300 ಜಿಯೋ ಮೊಬೈಲ್ ಟವರ್ ಧ್ವಂಸ!

ರೈತರ ಒಂದು ನಿರ್ಧಾರದಿಂದ ಇದೀಗ ಪಂಜಾಬ್ ರಾಜ್ಯದ ಹಲವು ಜಿಯೋ ಸಂಪರ್ಕ ಪಡೆದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಯೋ ಕನೆಕ್ಷನ್ ಮೂಲಕ ನಡೆಯುತ್ತಿದ್ದ ಕೆಲಸ ಕಾರ್ಯಗಳು ಸ್ಥಗಿತಗೊಂಡಿದೆ. ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಹಿಡಿ ಶಾಪ ಹಾಕುತ್ತಿದ್ದಾರೆ.

ನೂತನ ಕೃಷಿ ಕಾಯ್ದೆ ಅಂಬಾನಿ ಅದಾನಿಗೆ ಹೆಚ್ಚಿನ ಪ್ರಯೋಜನವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ತಪ್ಪು ಮಾಹಿತಿ ರೈತರನ್ನು ಮತ್ತಷ್ಟು ಆಕ್ರೋಶರನ್ನಾಗಿ ಮಾಡಿತ್ತು. ಹೀಗಾಗಿ 1,467 ಜಿಯೋ ಟವರ್ ಧ್ವಂಸ ಮಾಡಿದ್ದಾರೆ.  ಕೊರೋನಾ ಸಮಯದಲ್ಲಿ ಹೆಚ್ಚಿನ ಕೆಲಸಗಳು ಟಿಲಕಾಂ ಮೇಲೆ ಅವಲಂಬಿತವಾಗಿದೆ. 

ಆದರೆ ಇದ್ಯಾವುದನ್ನು ಪರಿಗಣಿಸಿದ, ಆಲೋಚಿಸಿದ ರೈತ ಪ್ರತಿಭಟನಾ ಕಾರರು ಮೊಬೈಲ್ ಟವರ್ ನಾಶ ಮಾಡಿ ಇತರ ಗ್ರಾಹಕರಿಗೆ ಸಮಸ್ಯೆ ಮಾಡಿದ್ದಾರೆ. 
 

Latest Videos
Follow Us:
Download App:
  • android
  • ios