Asianet Suvarna News Asianet Suvarna News

ಹುಟ್ಟುಹಬ್ಬ ಆಚರಿಸಿದ ಮನೆ ಮಂದಿ: ಭಾವುಕಳಾದ ಮನೆ ಕೆಲಸದಾಕೆ... ವಿಡಿಯೋ ವೈರಲ್

ಮನೆಯವರು ಮನೆ ಕೆಲಸಕ್ಕೆ ಬರುವ ಮಹಿಳೆಯ ಹುಟ್ಟುಹಬ್ಬ ಆಚರಿಸಿದ್ದು, ಇದರಿಂದ ಆಕೆ ತೀವ್ರ ಭಾವುಕಳಾಗಿ ಕಣ್ಣೀರಿಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Family members celebrate birthday of their house maid, after watching cake she got emotional video goes viral in social Media akb
Author
First Published Oct 31, 2022, 6:23 PM IST | Last Updated Oct 31, 2022, 6:23 PM IST

ಮುಂಬೈ: ಸಾಮಾನ್ಯವಾಗಿ ಮನೆ ಕೆಲಸದವರಿಗೆ ಸಂಬಳ ನೀಡಿದರೆ ಮುಗಿಯಿತು ಅವರ ಬಗ್ಗೆ ಯಾವುದೇ ಭಾವನಾತ್ಮಕ ಕಾಳಜಿ ಇರುವುದು ಬಹಳ ಕಡಿಮೆ. ನಗರ ಪ್ರದೇಶಗಳಲ್ಲಿ ಸಾಕಷ್ಟು ಮಹಿಳೆಯರು ಮನೆ ಕೆಲಸದವರಾಗಿ ಹಲವು ಮನೆಗಳಲ್ಲಿ ದುಡಿಯುತ್ತಾರೆ. ಆದರೆ ಅವರ ಕಷ್ಟಸುಖವನ್ನು ಮನೆ ಮಾಲೀಕರು ಕೇಳಿ ವಿಚಾರಿಸಿಕೊಳ್ಳುವವರು ತೀರಾ ಕಡಿಮೆ. ಆದರೆ ಇಲ್ಲೊಂದು ಕಡೆ ಮನೆಯವರು ಮನೆ ಕೆಲಸಕ್ಕೆ ಬರುವ ಮಹಿಳೆಯ ಹುಟ್ಟುಹಬ್ಬ ಆಚರಿಸಿದ್ದು, ಇದರಿಂದ ಆಕೆ ತೀವ್ರ ಭಾವುಕಳಾಗಿ ಕಣ್ಣೀರಿಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವೈರಲ್ ಭಯಾನಿ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ (Instagram Page) ಈ ವಿಡಿಯೋವನ್ನು ಅಪ್‌ಲೋಡ್ (Upload) ಮಾಡಲಾಗಿದೆ. ಈ ವಿಡಿಯೋವನ್ನು ಒಂಭತ್ತು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಮನೆ ಮಂದಿಯ ಈ ಮನ ತುಂಬಿದ ಕಾರ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ. 

 

ವಿಡಿಯೋದಲ್ಲಿ ಕಾಣಿಸುವಂತೆ ಕಡು ಹಸಿರು ಬಣ್ಣದ ಸೀರೆಯುಟ್ಟ ಮನೆ ಕೆಲಸದ ಮಹಿಳೆಯೊಬ್ಬರು (House Maid) ಇದ್ದು, ತಮ್ಮ ಹುಟ್ಟುಹಬ್ಬಕ್ಕೆ ಅವರು ಕೆಲಸಕ್ಕಿದ್ದ ಮನೆಯ ಮಂದಿ ಕೇಕ್ ತರಿಸಿದ್ದನ್ನು ನೋಡಿ ಬಹಳ ಭಾವುಕರಾಗಿದ್ದಾರೆ. ಕೇಕ್ ನೋಡಿ ತಲೆಗೆ ಎರಡು ಕೈಗಳನ್ನು ಇಡುವ ಅವರು ತಮ್ಮ ಮನೆಯೊಡತಿಯೊಂದಿಗೆ ಕೇಕ್ ಕತ್ತರಿಸುತ್ತಾರೆ. ಅಲ್ಲದೇ ಮನೆ ಮಂದಿಯೇ ಅಂದು ಆಕೆಗೆ ಟೀ ಮಾಡಿ ನೀಡುತ್ತಾರೆ. ಸದಾ ತಾನು ಮಾಡಿದ ಟೀ ಕುಡಿಯುವ ಮನೆ ಮಂದಿ ಇಂದು ತನಗೆ ಟೀ ಮಾಡಿ ಕೊಟ್ಟಿದ್ದು ನೋಡಿ ಅವರು ಭಾವುಕರಾಗಿ ಕಣ್ಣೀರಿಡುತ್ತಾರೆ. 

ಮನೆ ಕೆಲಸದಾಕೆಗೆ ಕ್ವೀನ್‌ ತರ ಟ್ರೀಟ್‌ : ವಿಡಿಯೋ ವೈರಲ್

ಅವರು ಉಡುಗೊರೆಯನ್ನು (Gift) ಬಯಸುವುದಿಲ್ಲ, ವಿಶೇಷ ದಿನದಂದು ಕೇವಲ ಪ್ರೀತಿ ಹಾಗೂ ಸಂತಸ ಅವರ ದಿನವನ್ನು ಖುಷಿಯಾಗಿಸುವುದು, ಅಂತಹ ವಿಶೇಷ ದಿನ. ನಾವು ಆಕೆಯ ಮೊಗದಲ್ಲಿ ನಗು ತರಿಸಲು ಬಯಸಿದೆವು. ಆಕೆ ತನ್ನ ಗಂಡನೊಂದಿಗೆ ನಗರದಲ್ಲಿ ಬದುಕುತ್ತಿದ್ದು, ಆಕೆಯ ಹುಟ್ಟುಹಬ್ಬದ ಬಗ್ಗೆ ಉತ್ಸಾಹದಿಂದಳು. ನಮ್ಮ ಮಾವ ಆಕೆಯ ಹುಟ್ಟುಹಬ್ಬದಂದು (Birthday) ಕೇಕೊಂದನ್ನು ತರಿಸಿದರು ಹಾಗೂ ನಾವು ಜೊತೆಯಾಗಿ ಆಕೆಯ ಹುಟ್ಟುಹಬ್ಬವನ್ನು ಆಚರಿಸಿದೆವು. ಕೆಲವೊಮ್ಮೆ ಬೇರೆಯವರ ಮೊಗದಲ್ಲಿ ನಗು ತರಿಸುವ ಸುಲವಾಗಿ ನಾವು ಮಾಡುವ ಸಣ್ಣ ಕಾರ್ಯಗಳು ಶಾಶ್ವತವಾಗಿ ಉಳಿಯುವವು. ಪ್ರತಿದಿನ ನಿದ್ದೆಗೆ ಜಾರುವ ಮೊದಲು ಯಾರಿಗಾದರೂ  ಏನಾದರೂ ಒಳ್ಳೆಯದ್ದನ್ನು ಮಾಡಿ, ಈ ರೀತಿಯ ಒಳ್ಳೆಯ ಕೆಲಸಗಳು ನಿಮ್ಮನ್ನು ಜೀವಂತವಾಗಿರಿಸುತ್ತವೆ. ಹುಟ್ಟುಹಬ್ಬದ ಶುಭಾಶಯಗಳು ಮೌಶಿ, ನಮ್ಮ ಮನೆಯನ್ನು ಸದಾ ಕಾಲ ಸ್ವಚ್ಛ ಹಾಗೂ ಅಚ್ಚುಕಟ್ಟಾಗಿ ಇರಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

theft: ಉಂಡ ಮನೆಗೆ ಕನ್ನ... ಮನೆಯವರಿಗೆ ಮತ್ತು ಪದಾರ್ಥ ನೀಡಿ ಮನೆ ದರೋಡೆ

ಅನೇಕರು ಈ ವಿಡಿಯೋಗೆ ಸಂತಸ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಮನೆ ಕೆಲಸದಾಕೆಯ ಹುಟ್ಟುಹಬ್ಬ ಆಚರಿಸಿದಕ್ಕೆ ಆ ಕುಟುಂಬವನ್ನು ನೆಟ್ಟಿಗರು ಹರಸುತ್ತಿದ್ದಾರೆ. ನಿಜವಾಗಿಯೂ ಇದೊಂದು ಸುಂದರವಾದ ಕ್ಷಣ. ಅವರು ನಿಜವಾಗಿಯೂ ವಾಸ್ತವವಾಗಿ ನಮ್ಮ ಕುಟುಂಬದ ಸದಸ್ಯರಾಗಿರುತ್ತಾರೆ. ಅವರು ನಮ್ಮ ಕಷ್ಟ ಹಾಗೂ ಸುಖದಲ್ಲಿ ಸದಾ ಜೊತೆಯಾಗಿರುತ್ತಾರೆ ಎಂಬುದನ್ನು ಪ್ರತಿಯೊಬ್ಬರು ನೆನಪಿನಲ್ಲಿರಿಸಿಕೊಳ್ಳಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 
 

Latest Videos
Follow Us:
Download App:
  • android
  • ios