76 ವರ್ಷದ ತಂದೆ ಮರು ಮದುವೆಯಾಗಲು ತಯಾರಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ 56 ವರ್ಷದ ಮಗ ವಿರೋಧಿಸಿದ್ದಾನೆ. ಜಗಳ ಶುರುವಾಗಿದೆ. ಕೊನೆಗೆ ಮರು ಮದುವೆಯೂ ಆಗಲಿಲ್ಲ, ಇತ್ತ ಮಗನೂ ಬದುಕುಳಿಯಿಲ್ಲ.
ರಾಜ್‌ಕೋಟ್(ಮಾ.11) ಕುಟುಂಬ ಸದಸ್ಯರ ನಡುವಿನ ಜಗಳ ತಾರಕಕ್ಕೇರಿ ಅನಾಹುತಗಳು ಸಂಭವಿಸಿದೆ. ಇಡೀ ಕುಟುಂಬವೇ ನಿರ್ನಾಮಾದ ಘಟನೆಗಳು ನಡೆದಿದೆ. ಇಲ್ಲೊಂದು ಕುಟುಂಬ ಇದೇ ರೀತಿ ಕುಟುಂಬದ ಜಗಳದಲ್ಲಿ ಬಡವಾಗಿದೆ. 75 ವರ್ಷದ ತಂದೆಗೆ ಮರು ಮದುವೆಯಾಗುವ ಬಯಕೆ. ಮರು ಮದುವೆಗೆ ಎಲ್ಲಾ ತಯಾರಿಯೂ ಆಗಿದೆ. 2ನೇ ಮದುವೆಗೆ ಮಹಿಳೆಯೊಬ್ಬರು ಒಪ್ಪಿಕೊಂಡಿದ್ದಾರೆ. ಎಲ್ಲವೂ ಒಕೆ. ಆದರೆ ಮನೆಯಲ್ಲೇ ನಾಟ್ ಒಕೆ. ಕಾರಣ 56 ವರ್ಷದ ಮಗ ತಂದೆಯ ಮರು ಮದುವೆ ವಿರೋಧಿಸಿದ್ದಾನೆ. ಈ ಜಗಳ ಕೊನೆಗೆ ದುರಂತದಲ್ಲಿ ಅಂತ್ಯಗೊಂಡಿದೆ.
ಏನಿದು ಘಟನೆ?
ರಾಜ್‌ಕೋಟ್ ಜಿಲ್ಲೆಯ ಜಸ್ದಾನ್ ಪಟ್ಟಣದ ನಿವಾಸಿಯಾಗಿದ್ದ 76 ವರ್ಷ ರಾಮ್ ಬೊರಿಚಾ, 20 ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದಾರೆ. ಕಳೆದ 20 ವರ್ಷದಲ್ಲಿ ರಾಮ್ ಬರೋಚಿ ತನ್ನ ಮಗನ ಜೊತೆ ವಾಸವಿದ್ದಾರೆ. ರಾಮ್ ಬೊರಿಚಾ ಪುತ್ರ 52 ವರ್ಷದ ಪ್ರತಾಪ್ ಬೊರಿಚಾ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಮಕ್ಕಳಿದ್ದಾರೆ. ಹೆಚ್ಚಿನ ಸಮಸ್ಯೆಗಳಿಲ್ಲದ ಇವರ ಕುಟುಂಬ ಸಂಸಾರ ಸಾಗಿತ್ತು.
ನಾಲ್ವರು ಹೆಂಡ್ತಿಯರಿದ್ರೂ 5ನೇ ಮದುವೆ ಆಸೆ ಹೇಳಿಕೊಂಡ ವ್ಯಕ್ತಿಗೆ ಮೌಲಾನಾ ಕೊಟ್ಟ ಸಲಹೆ ಏನು?
ಇದರ ನಡುವೆ ಇತ್ತೀಚೆಗೆ 76ರ ಹರೆಯದ ರಾಮ್ ಬೊರಿಚಾಗೆ ಪ್ರೀತಿ ಶುರುವಾಗಿದೆ. ಮಹಿಳೆಯೊಬ್ಬರ ಮದುವೆಗೂ ಒಪ್ಪಿಕೊಂಡಿದ್ದಾರೆ. ತಮ್ಮ 76ನೇ ವಯಸ್ಸಿನಲ್ಲಿ ರಾಮ್ ಬರೋಚಾ ಮದುವೆಯಾಗಲು ಬಯಸಿದ್ದಾರೆ. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಕೊನೆಯದಾಗಿ ಕುಟುಂಬದಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಪ್ರತಾಪ್ ಬೊರಿಚಾ ಸುತಾರಾಂ ಒಪ್ಪಿಲ್ಲ. ಇಷ್ಟೇ ಅಲ್ಲ ಕುಟುಂಬದ ಇತರ ಸದಸ್ಯರಿಂದಲೂ ವಿರೋಧ ವ್ಯಕ್ತವಾಗಿದೆ.
ಪ್ರತಾಪ್ ಬೊರಿಚಾ ಮಾತ್ರ ಯಾವುದೇ ಕಾರಣಕ್ಕೂ ಈ ಮದುವೆ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾನೆ. ಕುಟುಂಬ ಮರ್ಯಾದೆ ಮೂರು ಕಾಸಿಗೆ ಹರಾಜಾಗಲಿದೆ. 76ನೇ ವಯಸ್ಸಿಗೆ ಮದುವೆಯಾಗಲು ಬಯಿಸಿದ್ದು ಸರಿಯಲ್ಲ ಎಂದು ಮಗ ಹೇಳಿದ್ದಾನೆ. ಕುಟುಂಬ ಸದಸ್ಯರ ಮನವೊಲಿಸುವ ಪ್ರಯತ್ನ ಮಾಡಲು ರಾಮ್ ಬೊರಿಚಾ ಮುಂದಾಗಲಿಲ್ಲ. ಇದೇ ಕಾರಣದಿಂದ ವಾಗ್ವದಗಳು ಶುರುವಾಗಿದೆ. ಜಗಳ ತಾರಕ್ಕೇರಿದೆ.
ಕುಟುಂಬದ ಇತರ ಸದಸ್ಯರು ತೆರಳಿದ ಬಳಿಕವೂ ಪುತ್ರ ಪ್ರತಾಪ್ ತಂದೆಯ ನಿರ್ಧಾರವನ್ನು ವಿರೋಧಿಸಿದ್ದಾರೆ. ಇದು ರಾಮ್ ಬರೋಚಿರಾನ್ನು ಮತ್ತಷ್ಟು ಕೆರಳಿಸಿದೆ. ಮದುವೆಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದ ರಾಮ್ ಬರೋಚಾ ತಾಳ್ಮೆ ಕಳೆದುಕೊಂಡಿದ್ದಾರೆ. ಪಿಸ್ತೂಲ್ ಹೊರತೆಗೆದು ತೀರಾ ಹತ್ತಿರದಿಂದಲೇ ಮಗನ ಮೇಲೆ ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿದ ಪ್ರತಾಪ್ ಬೊರಿಚಾ ಅಲ್ಲೇ ಕುಸಿದು ಬಿದ್ದಿದ್ದಾರೆ.
ಈ ವೇಳೆ ಮನೆಯಿಂದ ಕೆಲ ದೂರದಲ್ಲಿದ್ದ ಪ್ರತಾಪ್ ಪತ್ನಿ ಜಯಾ ಗುಂಡಿನ ಶಬ್ದ ಕೇಳಿ ಓಡೋಡಿ ಬಂದಿದ್ದಾರೆ.ಪತಿಯ ನರಳಾಟವೂ ಕೇಳಿಸಿದೆ. ಅಷ್ಟರಲ್ಲೇ ಅನಾಹುತ ನಡೆದು ಹೋಗಿದೆ. ಆದರೆ ತಂದೆ ರಾಮ್ ಬೋರಿಚಾ ಬಾಗಿಲು ಲಾಕ್ ಮಾಡಿ ಈ ಮಗನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಾಗಿಲು ತಟ್ಟಿ ಕಿರುಚಾಡಿದ ಬೆನ್ನಲ್ಲೇ ರಾಮ್ ಬೊರಿಚಾ ಬಾಗಿಲು ತೆಗೆದಿದ್ದಾರೆ. ಬಳಿಕ ಸದ್ದು ಮಾಡಿದರೆ ಗುಂಡಿಕ್ಕುವುದಾಗಿ ಬೆದರಿಸಿದ್ದಾನೆ. ಆದರೆ ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಪತ್ನಿ ಸಹಾಯಕ್ಕಾಗಿ ಕಿರುಚಾಡಿದ್ದಾರೆ. ಈ ವೇಳೆ ಮತ್ತೆ ಗನ್ ಹಿಡಿದು ಸೊಸೆ ಮೇಲೆ ಗುಂಡು ಹಾರಿಸಲು ರಾಮ್ ಬೊರಿಚಾ ಮುಂದಾಗಿದ್ದಾರೆ. ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.
ಕಲೆ ಹೊತ್ತಲ್ಲೇ ಪ್ರತಾಪ್ ಮಗ ಆಗಮಿಸಿದ್ದಾನೆ. ಈ ವೇಳೆ ತಂದೆಯನ್ನು ನೋಡಿ ಆಘಾತಗೊಂಡಿದ್ದಾನೆ. ತಾತ ರಾಮ್ ಬೊರಿಚಾ ಮಗನ ಮೃತದೇಹ ಪಕ್ಕದಲ್ಲೇ ಕುಳಿತಿದ್ದಾರೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿದೆ. ಆಸ್ಪತ್ರೆ ದಾಖಲಿಸಿದ್ದಾನೆ. ಆದರೆ ವೈದ್ಯರು ಪ್ರತಾಪ್ ಬೊರಿಚಾ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಇತ್ತ ರಾಮ್ ಬೊರಿಚಾನನ್ನು ಪೊಲೀಸರು ಬಂಧಿಸಿದ್ದಾರೆ.
ಅನ್ಯಧರ್ಮೀಯ ಯುವತಿಯರ ವಿವಾಹವಾಗಿ ಎಂದ ಸೂಲಿಬೆಲೆ ಹೇಳಿಕೆಗೆ ವ್ಯಾಪಕ ವಿರೋಧ
