ನಾಗಪುರ[ಫೆ.23]: ಸಿಎಎ ಹಾಗೂ ಎನ್‌ಪಿಆರ್‌ ಜಾರಿ ಸಂಬಂಧ ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ ಮೈತ್ರಿ ಸರ್ಕಾರದಲ್ಲಿ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೇ, ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್‌ ಅವರು ಶೀಘ್ರವೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುಳಿವನ್ನು ಆರ್‌ಎಸ್‌ಎಸ್‌ ನೀಡಿದೆ.

ಶನಿವಾರ ಇಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್‌ನ ಪ್ರದಾನ ಕಾರ್ಯದರ್ಶಿ ಸುರೇಶ್‌ ಭಯ್ಯಾಜಿ ಜೋಶಿ, ‘ರಾಜಕೀಯ ಏರಿಳಿತಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವೇ ಆಗಿದೆ. ಅದೇ ರೀತಿ ಫಡ್ನವೀಸ್‌ ಅವರು ಹೆಚ್ಚು ದಿನ ಹಾಲಿ ವಿಪಕ್ಷ ನಾಯಕರಾಗಿ ಅಥವಾ ಮಾಜಿ ಮುಖ್ಯಮಂತ್ರಿಯಾಗಿಯೇ ಉಳಿಯುವುದಿಲ್ಲ' ಎಂದಿದ್ದಾರೆ

ಅಲ್ಲದೇ ಮಾಜಿ ಸಿಎಂ ಅಥವಾ ವಿಪಕ್ಷ ನಾಯಕ ಸ್ಥಾನ ಫಡ್ನವೀಸ್‌ ಅವರ ಹಣೆಬರಹವಲ್ಲ’ ಎಂದು ಪ್ರತಿಪಾದಿಸಿದ್ದಾರೆ.