ದೆಹಲಿ ಚುನಾವಣೆಗೆ ದಿನಗಣನೆ ನಡೆಯುತ್ತಿದೆ. ಆಮ್‌ ಆದ್ಮಿ, ಬಿಜೆಪಿ, ಕಾಂಗ್ರೆಸ್‌ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿವೆ. ಈ ನಡುವೆ ಮತಯಾಚಿಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಮಹಿಳೆಯೊಬ್ಬರು ಕೇಜ್ರಿವಾಲ್‌ ಮೇಲೆ ಕೊಳಕು ನೀರು ಸೋಕಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕೇಜ್ರಿವಾಲ್‌ ಧರಿಸಿದ್ದ ಶರ್ಟಿನ ಮೇಲೆ ನೀರು ಬಿದ್ದಂತೆ ಕಾಣುವ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗಿದೆ.

Fact Check: ಬೇಯಿಸಿದ ಬೆಳ್ಳುಳ್ಳಿಯಿಂದ ಕರೋನಾ ವೈರಸ್‌ ಗುಣವಾಗುತ್ತೆ!

ಹಾರ್ದಿಕ್‌ ಗೋಯಲ್‌ ಎನ್ನುವ ಫೇಸ್‌ಬುಕ್‌ ಬಳಕೆದಾರರು ಇದನ್ನು ಪೋಸ್ಟ್‌ ಮಾಡಿ, ‘ಮಹಿಳೆಯೊಬ್ಬರು ಕೇಜ್ರಿವಾಲ್‌ ಮೇಲೆ ಕೊಳಕು ನೀರು ಚೆಲ್ಲಿದ್ದಾರೆ. ಇದು ಇನ್ನೂ ಆರಂಭ ಅಷ್ಟೇ’ ಎಂದು ಬರೆದುಕೊಂಡಿದ್ದಾರೆ.

ಆದರೆ ಈ ಫೋಟೋ ಹಿಂದಿನ ಸತ್ಯಾಸತ್ಯ ಏನೆಂದು ಇಂಡಿಯಾ ಟು ಡೇ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಯಾರೂ ಕೇಜ್ರಿವಾಲ್‌ ಮೇಲೆ ಕೊಳಕು ನೀರು ಚೆಲ್ಲಿಲ್ಲ ಎಂಬುದು ಖಚಿತವಾಗಿದೆ. ವಾಸ್ತವವಾಗಿ ವೈರಲ್‌ ವಿಡಿಯೋ 2017ರದ್ದು. ಆಗ ವೆಬ್‌ಸೈಟ್‌ವೊಂದರಲ್ಲಿ ಇದೇ ಶರ್ಟ್‌ ಇರುವ ಫೋಟೋದೊಂದಿಗೆ ಪ್ರಕಟವಾಗಿದ್ದ ಸುದ್ದಿಯೊಂದು ಲಭ್ಯವಾಗಿದೆ.

ಅದರಲ್ಲಿ ‘ವಿಧಾನಸಭಾ ಉಪ ಚುನಾವಣಾ ಹಿನ್ನೆಲೆಯಲ್ಲಿ ಬವಾನಾ ಕ್ಷೇತ್ರದಲ್ಲಿ ಮತಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಕೇಜ್ರಿವಾಲ್‌ ಬೆವರಿದ್ದು ಹೀಗೆ’ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ಹಲವು ಫೋಟೋಗಳಲ್ಲಿ ಕೇಜ್ರಿವಾಲ್‌ ಬೆವರಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆ ಉಪಚುನಾವಣೆ ಸಂದರ್ಭದಲ್ಲಿ ದೆಹಲಿಯಲ್ಲಿ ತೀವ್ರ ಬೇಸಿಗೆ ಇತ್ತು. ಹಾಗಾಗಿ ಪ್ರಚಾರದ ವೇಳೆ ಕೇಜ್ರಿವಾಲ್‌ ಬೆವರಿದ್ದರು.

- ವೈರಲ್ ಚೆಕ್