ಕೊಲ್ಲಿ ರಾಷ್ಟ್ರ ಕುವೈತ್ ನ ನಂ 1 ಶ್ರೀಮಂತ ನಸ್ಸಿ ಅಲ್ ಖಾರ್ಕಿ ಇತ್ತೀಚಿಗೆ ಮೃತಪಟ್ಟಿದ್ದು ಅವನನ್ನು ಹೀಗೆ ಶವಪೆಟ್ಟಿಗೆಯಲ್ಲಿಟ್ಟು ದಫನ್ ಮಾಡಲಾಯಿತು. ಅವನ ಸಂಪತ್ತು ಎಷ್ಟಿದೆಯಂದು ನೋಡಿ! ಸತ್ತ ಮೇಲೆ ಅವನು ಸಣ್ಣದೊಂದು ತುಂಡನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. 

ಸೂರಜ್ ಕಿರಣ್ ಟ್ರಾವೆಲ್ಸ್ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ ಮಾಡಿದ ಈ ಪೋಸ್ಟ್ ಗಳು ನಾಲ್ಕು ದಿನಗಳಿಂದ ವೈರಲ್ ಆಗಿದೆ.

 

ಈ ಪೋಸ್ಟ್ ನಲ್ಲಿ ಏಳೆಂಟು ಫೋಟೋಗಳಿವೆ. ಶವಪೆಟ್ಟಿಗೆಯಲ್ಲಿ ಆಭರಣ ಹೇರಿಕೊಂಡು ಮಲಗಿದ ಶ್ರೀಮಂತ ಅವನ ಬಳಿಯಿರುವ ವಜ್ರ ವೈಡೂರ್ಯಗಳು, ಚಿನ್ನದ ಮಂಚ, ಸಾವಿರಾರು ಚಿನ್ನದ ಗಟ್ಟಿಗಳು, ಚಿನ್ನದ ಹೂಡಿಕೆ ಇರುವ ಖಾಸಗಿ ವಿಮಾನ ಹಡಗು ಹಾಗೂ ಚಿನ್ನ ವಜ್ರದಿಂದ ತಯಾರಿಸಿದ ಕಾರಿನ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ. 

Fact Check : ಕರ್ತಾರ್‌ಪುರ ಗುರುದ್ವಾರದ ಮೇಲೆ ಪಾಕ್ ಧ್ವಜ?

ಈ ಪೋಸ್ಟ್ ಅರ್ಧ ನಿಜ ಅರ್ಧ ಸುಳ್ಳು ಎಂದು ತಿಳಿದು ಬಂದಿದೆ. ಸೂರಜ್ ಕಿರಣ್ ಹೇಳಿದಂತೆ ಈ ವ್ಯಕ್ತಿ ಕುವೈತ್ ನ ನಸ್ಸಿ ಅಲ್ ಖರ್ಕಿ ಅಲ್ಲ ಆತ ಕುವೈತ್ ನ ನಂ 1 ಶ್ರೀಮಂತನೂ ಅಲ್ಲ. ಈ ಫೋಟೋದಲ್ಲಿರುವವನು ಟ್ರಿನಿಡಾಡ್ ಮತ್ತು ಟೊಬ್ಯಾಗೋದ ಶ್ರೀಮಂತ ರಿಯಲ್ ಎಸ್ಟೇಟ್ ವ್ಯಾಪಾರಿ ಶೆರಾನ್ ಸುಖೆಡೋ. 33 ವರ್ಷದ ಈತನನ್ನು 2018 ರಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು ಹೀಗೆ ಅವನ ಅಂತ್ಯಕ್ರಿಯೆ ಹೀಗೆ ನಡೆಸಲಾಗಿತ್ತು. ಆ ಫೋಟೋ ಈಗ ವೈರಲ್ ಆಗುತ್ತಿದೆ. 

- ವೈರಲ್ ಚೆಕ್