ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಮಾಮಿ ಗಂಗಾ ಯೋಜನೆಯ ಪರಿಶೀಲನೆಗೆ ಉತ್ತರ ಪ್ರದೇಶದ ಕಾನ್ಪುರಕ್ಕೆ ತೆರಳುತ್ತಿದ್ದ ವೇಳೆ ಮುಗ್ಗರಿಸಿ ಬಿದ್ದಿದ್ದರು. ಈ ವಿಡಿಯೋ ಸಾಕಷ್ಟುವೈರಲ್‌ ಆಗಿತ್ತು. ಹಲವರು ಪ್ರಧಾನಿ ಬಿದ್ದಿದ್ದನ್ನು ಅಣಕಿಸಿದ್ದರು.

ಇದಾದ ಮಾರನೇ ದಿನವೇ ಕುರ್ತಾ ಪೈಜಾಮ ಧರಿಸಿರುವ ವ್ಯಕ್ತಿ ಮುಗ್ಗರಿಸಿ ಬಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಬಿದ್ದ ವ್ಯಕ್ತಿ ರಾಹುಲ್‌ ಗಾಂಧಿ ಎಂದು ಹೇಳಲಾಗಿದೆ. ಮೋದಿ ಅಭಿಮಾನಿಗಳು ಈ ವಿಡಿಯೋವನ್ನು ಶೇರ್‌ ಮಾಡಿ, ‘96 ವರ್ಷದ ಪ್ರಧಾನಿ ನರೇಂದ್ರ ಮೋದಿ ಮೆಟ್ಟಿಲು ಹತ್ತುವಾಗ ಮುಗ್ಗರಿಸಿ ಬಿದ್ದರೆ, ರಾಹುಲ್‌ ಸಮತಟ್ಟಾದ ಪ್ರದೇಶದಲ್ಲೇ ಎಡವಿ ಬಿದ್ದರು’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಬಾರೀ ವೈರಲ್‌ ಆಗುತ್ತಿದೆ.

 

ಆದರೆ ವಿಡಿಯೋದಲ್ಲಿರುವ ವ್ಯಕ್ತಿ ನಿಜಕ್ಕೂ ರಾಹುಲ್‌ ಗಾಂಧಿಯೇ ಎಂದು ಇಂಡಿಯಾ ಟುಡೇ ಆ್ಯಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌ ಪರಿಶೀಲನೆಗೆ ಮುಂದಾದಾಗ ವಿಡಿಯೋದಲ್ಲಿರುವ ವ್ಯಕ್ತಿ ರಾಹುಲ್‌ ಗಾಂಧಿ ಅಲ್ಲ ಎಂದು ತಿಳಿದುಬಂದಿದೆ. ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ 2012, ಮಾರ್ಚ್ 5ರಂದು ಸುದ್ದಿವಾಹಿನಿಯೊಂದು ಯುಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿರುವ ವಿಡಿಯೋ ಲಭ್ಯವಾಗಿದೆ.

Fact Check: ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಕೀಲರು ಟೋಲ್‌ ಕಟ್ಟಬೇಕಿಲ್ಲ!

ಅದು ವೈರಲ್‌ ಆಗಿರುವ ವಿಡಿಯೋದಂತೆಯೇ ಇದೆ. ಅದರಲ್ಲಿ ಸೋನಿಯಾ ಗಾಂದಿ ಅಳಿಯ ಅಂದರೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ಗುರ್‌ಗಾಂವ್‌ನಲ್ಲಿ ನಡೆದ ಡಿಎಲ್‌ಎಫ್‌ ಗಲ್‌್ಫ ಕೋರ್ಸ್‌ ಟೂರ್ನಮೆಂಟ್‌ನಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಹಂಚುತ್ತಿರುವಾಗ ಹಠಾತ್‌ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.

Fact Check: ಮೋದಿಗೆ ಕೆಟ್ಟಹೆಸರು ತರಲು ಈರುಳ್ಳಿ ಟ್ರಕ್‌ ತಡೆದ್ರಾ ಮಮತಾ?

ಈಗ ಅದೇ ವಿಡಿಯೋವನ್ನು ಪೋಸ್ಟ್‌ ಮಾಡಿ, ರಾಹುಲ್‌ ಗಾಂಧಿ ಎಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.

- ವೈರಲ್ ಚೆಕ್