Fact Check: ಜೆಎನ್‌ಯು ಮಹಿಳಾ ಹಾಸ್ಟೆಲ್‌ನಲ್ಲಿ ಇದ್ದ ವಸ್ತುಗಳಿವು!
ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ ಮಹಿಳಾ ವಸತಿ ಗೃಹದ ಮೇಲೆ ನಿನ್ನೆ ಮುಸುಕುದಾರಿ ಗುಂಪೊಂದು ಆಕ್ರಮಣ ಮಾಡಿತ್ತು. ಈ ಘಟನೆ ಬೆನ್ನಲ್ಲೇ ಜೆಎನ್‌ಯುನ ಮಹಿಳಾ ಹಾಸ್ಟೆಲ್‌ನಲ್ಲಿ ಲಭ್ಯವಾದ ವಸ್ತುಗಳಿವು ಎಂದು ಸೆಕ್ಸ್ ಟಾಮ್ ಮತ್ತು ಕಾಂಡಮ್‌ಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ ಮಹಿಳಾ ವಸತಿ ಗೃಹದ ಮೇಲೆ ನಿನ್ನೆ ಮುಸುಕುದಾರಿ ಗುಂಪೊಂದು ಆಕ್ರಮಣ ಮಾಡಿತ್ತು. ಈ ಘಟನೆ ಬೆನ್ನಲ್ಲೇ ಜೆಎನ್‌ಯುನ ಮಹಿಳಾ ಹಾಸ್ಟೆಲ್‌ನಲ್ಲಿ ಲಭ್ಯವಾದ ವಸ್ತುಗಳಿವು ಎಂದು ಸೆಕ್ಸ್ ಟಾಮ್ ಮತ್ತು ಕಾಂಡಮ್‌ಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಪೋಸ್ಟ್ ಮಾಡಿ, ‘ಜೆಎನ್‌ಎನ್‌ಯು ಮೇಲೆ ಗುಂಪೊಂದು ಆಕ್ರಮಣ ಮಾಡಿದ ಬಳಿಕ ಅಲ್ಲಿನ ಮಹಿಳಾ ಹಾಸ್ಟೆಲ್‌ನಲ್ಲಿ ಕಂಡುಬಂದ ವಸ್ತುಗಳಿವು. ಅಲ್ಲಿನ ವಿದ್ಯಾರ್ಥಿಗಳ ಪುಸ್ತಕವಿವು’ ಎಂದು ವ್ಯಂಗ್ಯವಾಗಿ ಒಕ್ಕಣೆ ಬರೆಯಲಾಗಿದೆ.
Fact Check: ಪೌರತ್ವ ವಿರೋಧಿ ಪ್ರತಿಭಟನೆ ವೇಳೆ ಹಿಂದು ದೇವರ ಫೋಟೋಗೆ ಬೆಂಕಿ?
ಆದರೆ ನಿಜಕ್ಕೂ ಜೆಎನ್‌ಯು ಮಹಿಳಾ ಹಾಸ್ಟೆಲ್‌ನಲ್ಲಿ ಸೆಕ್ಸ್ ಟಾಯ್ ಮತ್ತು ಕಾಂಡಮ್‌ಗಳು ಪತ್ತೆಯಾಗಿದ್ದವೇ ಎಂದು ಬೂಮ್‌ಲೈವ್ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಬೇರಾವುದೋ ಫೋಟೋವನ್ನು ಜೆಎನ್‌ಯು ಹಾಸ್ಟೆಲ್‌ನಲ್ಲಿ ಸಿಕ್ಕಿದ್ದು ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ ಎಂದು ತಿಳಿದುಬಂದಿದೆ.
Fact Check| ಭಾರತದ ಬಂಧನ ಕೇಂದ್ರದ ವಾಸ್ತವ ಚಿತ್ರಣ ಇದು!
ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಟ್ವಿಟರ್‌ನಲ್ಲಿ ಇದೇ ಫೋಟೋ 2018 ಫೆಬ್ರವರಿ 1ರಂದು ಪ್ರಕಟವಾಗಿದೆ. ಅದರಲ್ಲಿ ಮನೆಯೊಂದರಲ್ಲಿ ಪರಿಶೀಲಿಸಿದಾಗ ಇವು ಲಭ್ಯವಾಗಿದೆ ಎಂದಿದೆ ಹೊರತು ಎಲ್ಲಿ, ಏನು ಎಂದು ಸ್ಪಷ್ಟವಾಗಿಲ್ಲ. ಇನ್ನು ಮತ್ತೊಂದು ಫೋಟೋವು 4 ವರ್ಷ ಹಳೆಯದ್ದು. ರೇಡಿಟ್ ವೆಬ್‌ಸೈಟ್‌ನಲ್ಲಿ ಈ ಫೋಟೋ ಪ್ರಕಟವಾಗಿದೆ.