Fact Check: ಪೌರತ್ವ ವಿರೋಧಿ ಪ್ರತಿಭಟನೆ ವೇಳೆ ಹಿಂದು ದೇವರ ಫೋಟೋಗೆ ಬೆಂಕಿ?
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಪ್ರತಿಭಟನೆ ವೇಳೆ ಹಿಂದು ದೇವರ ಫೋಟೋಗಳಿಗೇ ಬೆಂಕಿ ಹಚ್ಚಲಾಗಿದೆ ಎಂಬ ಸುದ್ದಿ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಸತ್ಯತೆ?
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಪ್ರತಿಭಟನೆ ವೇಳೆ ಹಿಂದು ದೇವರ ಫೋಟೋಗಳಿಗೇ ಬೆಂಕಿ ಹಚ್ಚಲಾಗಿದೆ ಎಂಬ ಸುದ್ದಿ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಡಾ.ಜಯಶ್ರೀ ನಾಯರ್ ಎಂಬ ಟ್ವೀಟರ್ ಖಾತೆಯಲ್ಲಿ ದೇವರ ಫೋಟೋಗೆ ಬೆಂಕಿ ಹಚ್ಚುತ್ತಿರು ವಿಡಿಯೋವನ್ನು ಪೋಸ್ಟ್ ಮಾಡಿ, ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಹಿಂದು ದೇವಾನು ದೇವತೆಗಳ ಫೋಟೋವನ್ನೇ ಸುಡಲು ಈ ಮೂರ್ಖರಿಗೆ ಎಷ್ಟುಧೈರ್ಯ? ಸಿಎಎಗೂ ಹಿಂದೂಗಳಿಗೂ ಏನು ಸಂಬಂಧ?, ಅವರ ಅಜೆಂಡಾವೇ ಬೇರೆ, ಕಾಂಗ್ರೆಸ್, ಸಿಪಿಎಂ ರಾಜಕಾರಣಿಗಳು ಇದರ ಹಿಂದಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಪೌರತ್ವ ಕಾಯ್ದೆಗೆ ವಿದೇಶಗಳಲ್ಲೂ ಬೆಂಬಲ ಕ್ರೋಡೀಕರಣ
ವಿಡಿಯೋದಲ್ಲಿ ಒಂದಷ್ಟು ಜನರ ಗುಂಪು ಹಿಂದು ದೇವರ ಫೋಟೋಗೆ ಬೆಂಕಿ ಹಚ್ಚುತ್ತಿರುವ ದೃಶ್ಯವಿದೆ. ಸದ್ಯ ಈ ವಿಡಿಯೋವೀಗ ಫೇಸ್‌ಬುಕ್, ಟ್ವೀಟರ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ವೈರಲ್ ಆಗುತ್ತಿದೆ.
ಆದರೆ ಇದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದ್ದೇ ಎಂದು ಬೂಮ್ ಲೈವ್ ಸುದ್ದಿಸಂಸ್ಥೆ ಪರಿಶೀಲಿಸಿದಾ ಇದು ಒಂದು ವರ್ಷ ಹಳೆಯ ವಿಡಿಯೋ ಎಂಬುದು ಸ್ಪಷ್ಟವಾಗಿದೆ. 2018 ಸೆಪ್ಟೆಂಬರ್ 3ರಂದು ಈ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.
Fact Check| ಭಾರತದ ಬಂಧನ ಕೇಂದ್ರದ ವಾಸ್ತವ ಚಿತ್ರಣ ಇದು!
ಅದರಲ್ಲಿ ಭೀಮ್ ಆರ್ಮಿಯ ಕಾರ‍್ಯಕರ್ತರು ಹಿಂದು ದೇವರಿಗೆ ಅಗೌರವ ತೋರಿದ್ದಾರೆ ಎಂದು ಬರೆಯಲಾಗಿದೆ. ಈ ಜಾಡು ಹಿಡಿದು ಪರಿಶೀಲಿಸಿದಾಗ, ಕೆಲ ಫೇಸ್‌ಬುಕ್ ಬಳಕೆದಾರರೂ 2018ರಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿರುವುದು ಪತ್ತೆಯಾಗಿದೆ. ಅಲ್ಲಿಗೆ ಸಿಎಎ ಪ್ರತಿಭಟನೆ ವೇಳೆ ದೇವರ ಫೋಟೋಗೆ ಬೆಂಕಿ ಹಚ್ಚಲಾಗುತ್ತು ಎಂಬ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.