ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ವಿಪಕ್ಷಗಳು, ಸಾಮಾಜಿಕ ಹೋರಾಟಗಾರರು ಸಿಎಎ ಜಾತ್ಯತೀತ ಸಮಾಜವನ್ನು ಒಡೆಯುವ ಕಾಯ್ದೆ ಎಂದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಈ ನಡುವೆ ಇಬ್ಬರು ಮುಸ್ಲಿಂ ಟೋಪಿಧಾರಿಗಳು ಭಾರತದ ರಾಷ್ಟ್ರಧ್ವಜ ಹಿಡಿದು ಬೆಂಕಿ ಇಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check: ಬೇಯಿಸಿದ ಬೆಳ್ಳುಳ್ಳಿಯಿಂದ ಕರೋನಾ ವೈರಸ್‌ ಗುಣವಾಗುತ್ತೆ!

ಅದರೊಂದಿಗೆ, ‘ದೆಹಲಿಯ ಶಾಹೀನ್‌ ಬಾಗ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ), ಮತ್ತು ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ವಿರೋಧಿ ಪ್ರತಿಭಟನೆಯಲ್ಲಿ ಭಾರತದ ರಾಷ್ಟ್ರಧ್ವಜವನ್ನೇ ಸುಟ್ಟಿದ್ದಾರೆ. ಎಲ್ಲಾ ಹಿಂದುಗಳು ಒಟ್ಟಾಗಬೇಕು. ಜೈಶ್ರೀರಾಮ್‌’ ಎಂದು ಒಕ್ಕಣೆ ಬರೆದು. ಪ್ರದೀಪ್‌ ಲೋಧೀ ಎಂಬವರ ಫೇಸ್‌ಬುಕ್‌ ಪೇಜ್‌ ಫೆಬ್ರವರಿ 3ರಂದು ಮೊದಲಿಗೆ ಈ ಪೋಟೋವನ್ನು ಪೋಸ್ಟ್‌ ಮಾಡಲಾಗಿದೆ. ಇದೀಗ 1100 ಬಾರಿ ಶೇರ್‌ ಆಗಿದೆ. ಟ್ವೀಟರ್‌, ವಾಟ್ಸ್‌ಆ್ಯಪ್‌ನಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ಶಾಹೀನ್‌ ಬಾಗ್‌ ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜವನ್ನು ಸುಡಲಾಗಿತ್ತೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಆಲ್ಟ್‌ ನ್ಯೂಸ್‌ ಸುದ್ದಿಸಂಸ್ಥೆ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದು ಹಳೆಯ ಫೋಟೋ ಎಂಬುದು ಖಚಿತವಾಗಿದೆ. 2015ರಲ್ಲಿ ಪಾಕಿಸ್ತಾನದ ಪ್ರತಿಭಟನಾಕಾರರು ಭಾರತದ ರಾಷ್ಟ್ರಧ್ವಜವನ್ನು ಸುಟ್ಟಿದ್ದರು ಸುಟ್ಟಿದ್ದರು. 4 ವರ್ಷ ಹಳೆಯದಾದ ಈ ಫೋಟೋವನ್ನು ಈಗ ಪೋಸ್ಟ್‌ ಮಾಡಿ ಶಾಹೀನ್‌ ಬಾಗ್‌ ಪ್ರತಿಭಟನೆಯದ್ದು ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್