ಆಸ್ಪ್ರೇಲಿಯಾದಲ್ಲಿ ಕಾಳ್ಗಿಚ್ಚು ಹಬ್ಬಿ ಲಕ್ಷಾಂತರ ಎಕರೆ ಕಾಡು ಸುಟ್ಟು ಬೂದಿಯಾಗಿದೆ. ಈ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕೋಟ್ಯಂತರ ಪ್ರಾಣಿಗಳು ಅಸುನೀಗಿವೆ. ಇದಕ್ಕೆ ಸಂಬಂಧಪಟ್ಟಂತೆ ವೈರಲ್‌ ಆಗಿದ್ದ ಬೆಂಕಿಯಲ್ಲಿ ಸುಟ್ಟು ಕರಕಲಾದ ಪ್ರಾಣಿಗಳ ಫೋಟೋಗಳು ಮನಕರಗಿಸುವಂತಿದ್ದವು.

Fact Check: ‘ಹಿಂದು’ ಪದ ಬಳಸದಂತೆ ಆದೇಶ ಹೊರಡಿಸಿದ ಗೃಹ ಇಲಾಖೆ!

ಇದೀಗ ಆಸ್ಟೇಲಿಯಾ ಕಾಳ್ಗಿಚ್ಚಿನ ಆವೇಶ ತಣಿದಿದೆ. ಆದರೆ ಈ ಬೆಂಕಿಯಲ್ಲಿ ತಾಯಿಯನ್ನು ಕಳೆದುಕೊಂಡ ಕರಡಿ ಮರಿಗಳಿಗೆ ನರಿಯೊಂದು ಹಾಲುಣಿಸುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 

ಡೈಲಿ ಇಂಡಿಯಾ ಟೈಮ್ಸ್‌ ಫೇಸ್‌ಬುಕ್‌ ಪೇಜ್‌ 33 ಸೆಕೆಂಡ್‌ಗಳಿರುವ ಈ ವಿಡಿಯೋವನ್ನು ಪೋಸ್ಟ್‌ ಮಾಡಿ, ‘ತಾಯಿಯನ್ನು ಕಳೆದುಕೊಂಡ ಕರಡಿ ಮರಿಗಳಿಗೆ ತಾನಾಗಿಯೇ ಹಾಲುಣಿಸುತ್ತಿರುವ ನರಿ’ ಎಂದು ಒಕ್ಕಣೆ ಬರೆಯಲಾಗಿದೆ.

ಇಂಡಿಯಾ ಟುಡೇ ಈ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ವಾಸ್ತವವವಾಗಿ ಈ ವಿಡಿಯೋ 6 ವರ್ಷ ಹಳೆಯದ್ದು. ಅಲ್ಲದೆ ನರಿಯು ಇಲ್ಲಿ ತನ್ನ ಮರಿಗಳಿಗೇ ಹಾಲುಣಿಸುತ್ತಿದೆಯೇ ಹೊರತು ಕರಡಿ ಮರಿಗಳಿಗಲ್ಲ. ಅರೌಂಡ್‌ ದ ವಲ್ಡ್‌ರ್‍ ಎಂಬ ಯುಟ್ಯೂಬ್‌ ಚಾನೆಲ್‌ನಲ್ಲಿ 2018ರಲ್ಲಿ ಇದೇ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿದೆ. ಅದರಲ್ಲಿ ನರಿಯು ಕೋತಿಯ ಮರಿಗಳಿಗೆ ಹಾಲುಣಿಸುತ್ತಿದೆ ಎಂದು ಹೇಳಲಾಗಿದೆ.

2016 ರಲ್ಲೂ ಇದು ವೈರಲ್‌ ಆಗಿತ್ತು. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದಕ್ಕೆ ಸಂಬಂಧಿಸಿದ ಮೂಲ ವಿಡಿಯೋ ಪತ್ತೆಯಾಗಿದೆ. 2014ರಲ್ಲಿ ಯುಟ್ಯೂಬ್‌ ಚಾನಲ್‌ವೊಂದರಲ್ಲಿ ಇದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ಅಪ್ಲೋಡ್‌ ಮಾಡಲಾಗಿದೆ. ಅದರಲ್ಲಿ ನರಿಯು ತನ್ನ ಮರಿಗಳೀಗೇ ಹಾಲುಣೀಸುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ.

- ವೈರಲ್ ಚೆಕ್