ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ವಿರೋಧಿ ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸಲು ಬುರ್ಖಾವನ್ನು ಕಡ್ಡಾಯ ಮಾಡಲಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Fact Check: ಫಿನ್‌ಲ್ಯಾಂಡ್‌ನಲ್ಲಿ ವಾರಕ್ಕೆ ಬರೀ ನಾಲ್ಕೇ ದಿನ ಕೆಲಸ?

ಬಿಜೆಪಿ ಮೀಡಿಯಾ ಪ್ಯಾನಲಿಸ್ಟ್‌ ಯಶ್ವೀರ್‌ ರಾಘವ್‌ ಪೋಸ್ಟರ್‌ವೊಂದನ್ನು ಫೋಸ್ಟ್‌ ಮಾಡಿ, ‘ ನೀವು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುವುದಾದರೆ ನೀವು ಹಿಜಾಬ್‌ ಧರಿಸಲೇಬೇಕು. ಈ ಜನರು ಇಡೀ ದೇಶವನ್ನು ಶರಿಯಾ ಕಾನೂನಿಡಿ ತರಲು ಪ್ರಯತ್ನಿಸುತ್ತಿದ್ದಾರೆ’ ಎಂದು ಒಕ್ಕಣೆ ಬರೆದಿದ್ದಾರೆ. ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ.

 

ಆದರೆ ನಿಜಕೂ ಈ ರೀತಿಯ ವಸ್ತ್ರಸಂಹಿತೆ ನಿಗದಿ ಮಾಡಲಾಗಿತ್ತೇ ಎಂದು ಆಲ್ಟ್‌ ನ್ಯೂಸ್‌ ಸುದ್ದಿಸಂಸ್ಥೆ ಪರಿಶೀಲಿಸಿದಾಗ ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎನ್ನುವುದು ಸಾಬೀತಾಗಿದೆ. ಜನವರಿ 17ರಂದು ಸಂಜೆ 6 ಗಂಟೆಗೆ ಮುಂಬೈನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಲು ಕರೆ ನೀಡಲಾಗಿತ್ತು. ಈ ಬಗ್ಗೆ ಪೋಸ್ಟ್‌ರ್‌ಗಳನ್ನೂ ಹಂಚಲಾಗಿತ್ತು. ಆದರೆ ಎಲ್ಲೂ ವಸ್ತ್ರಸಂಹಿತೆ ಬಗ್ಗೆ ಉಲ್ಲೇಖ ಇರಲಿಲ್ಲ.

Fact Check: ಆರ್‌ಎಸ್‌ಎಸ್‌ ಕಚೇರಿಯಲ್ಲಿ ಬಂದೂಕಿಗೆ ಪೂಜೆ ಸಲ್ಲಿಸಿದ್ರಾ ಮೋದಿ?

ಇದೇ ಪೋಸ್ಟರನ್ನು ಎಡಿಟ್‌ ಮಾಡಿ, ಅದರಲ್ಲಿ ಬುರ್ಖಾ ಅಥವಾ ಹಿಜಾಬ್‌ ಧರಿಸಿರಬೇಕು ಸೇರಿಸಲಾಗಿದೆ. ಅಲ್ಲದೆ ಮೂಲ ಪೋಸ್ಟರ್‌ನಲ್ಲಿ ಎಲ್ಲಾ ಅಕ್ಷರಗಳನ್ನೂ ಕ್ಯಾಪಿಟಲ್‌ ಲೆಟರ್‌ನಲ್ಲೇ ಬರೆಯಲಾಗಿತ್ತು. ವೈರಲ್‌ ಆದ ಪೋಸ್ಟರ್‌ನಲ್ಲಿ ಡ್ರೆಸ್‌ಕೋಡ್‌ ಬಗೆಗಿನ ಉಲ್ಲೇಖ ಮಾತ್ರ ಕ್ಯಾಪಿಟಲ್‌ ಮತ್ತು ಸ್ಮಾಲ್‌ ಲೆಟರ್‌ ಎರಡೂ ಇದೆ. ಅಲ್ಲಿಗೆ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟ.

- ವೈರಲ್ ಚೆಕ್