Asianet Suvarna News Asianet Suvarna News

Fact Check: ಫಿನ್‌ಲ್ಯಾಂಡ್‌ನಲ್ಲಿ ವಾರಕ್ಕೆ ಬರೀ ನಾಲ್ಕೇ ದಿನ ಕೆಲಸ?

ಫಿನ್‌ಲ್ಯಾಂಡ್‌ನ ನೂತನ ಪ್ರಧಾನಿ ಆ ದೇಶದ ನೌಕರರಿಗೊಂದು ಸಿಹಿ ಸುದ್ದಿ ನೀಡಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಅದೇನೆಂದರೆ ಸನ್ನಾ ಮರಿನ್‌ ನೌಕರರು ದಿನಕ್ಕೆ 6 ಗಂಟೆ ಮತ್ತು ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡಬೇಕೆಂಬ ಕಾಯ್ದೆ ಜಾರಿ ಮಾಡಿದ್ದಾರೆ. ನಿಜನಾ ಈ ಸುದ್ದಿ? 

fact check of Finland new PM wants her country on a four day workweek
Author
Bengaluru, First Published Jan 18, 2020, 10:26 AM IST
  • Facebook
  • Twitter
  • Whatsapp

ಜಗತ್ತಿನ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಫಿನ್‌ಲ್ಯಾಂಡ್‌ ದೇಶದ ಪ್ರಧಾನಿ ಸನ್ನಾ ಮರಿನ್‌ ಇತ್ತೀಚೆಗೆ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಫಿನ್‌ಲ್ಯಾಂಡ್‌ನ ನೂತನ ಪ್ರಧಾನಿ ಆ ದೇಶದ ನೌಕರರಿಗೊಂದು ಸಿಹಿ ಸುದ್ದಿ ನೀಡಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಅದೇನೆಂದರೆ ಸನ್ನಾ ಮರಿನ್‌ ನೌಕರರು ದಿನಕ್ಕೆ 6 ಗಂಟೆ ಮತ್ತು ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡಬೇಕೆಂಬ ಕಾಯ್ದೆ ಜಾರಿ ಮಾಡಿದ್ದಾರೆ.

 

ಹಲವಾರು ನೆಟ್ಟಿಗರು ಸನ್ನಾ ಮರಿನ್‌ ಅವರ ಈ ನಿರ್ಧಾರವನ್ನು ಶ್ಲಾಘಿಸಿ ವೈರಲ್‌ ಆಗಿರುವ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ. ಆದರೆ ನಿಜಕ್ಕೂ ಫಿನ್‌ಲ್ಯಾಂಡ್‌ನಲ್ಲಿ ಇಂಥದ್ದೊಂದು ಕಾಯ್ದೆ ಜಾರಿ ಮಾಡಲಾಗಿದೆಯೇ ಎಂದು ಇಂಡಿಯಾ ಟು ಡೇ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ.

Fact Check: ಆರ್‌ಎಸ್‌ಎಸ್‌ ಕಚೇರಿಯಲ್ಲಿ ಬಂದೂಕಿಗೆ ಪೂಜೆ ಸಲ್ಲಿಸಿದ್ರಾ ಮೋದಿ?

ಫಿನ್‌ಲ್ಯಾಂಡ್‌ ಸರ್ಕಾರ ಇಂಥದ್ದೊಂದು ಕಾಯ್ದೆಯನ್ನು ಜಾರಿ ಮಾಡಿಯೇ ಇಲ್ಲ. ಅಲ್ಲದೆ ಈ ವಿಷಯ ಸರ್ಕಾರದ ಅಜೆಂಡಾವೇ ಆಗಿರಲಿಲ್ಲ. ಜನವರಿ 7ರಂದು ಫಿನ್‌ಲ್ಯಾಂಡ್‌ ಸರ್ಕಾರ ಈ ಬಗ್ಗೆ ಟ್ವೀಟ್‌ ಮಾಡಿ, ಸರ್ಕಾರದ ಕಾರ‍್ಯಕ್ರಮಗಳ ಪಟ್ಟಿಯಲ್ಲಿ ದಿನಕ್ಕೆ 4 ಗಂಟೆ ಕೆಲಸದ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

Fact Check: ಇರಾನಿನ ವಿಡಿಯೋ ಪೋಸ್ಟ್‌ ಮಾಡಿ ಸಿಎಎ ಪ್ರತಿಭಟನೆ ಎಂದರು!

ಆದರೆ ಎಸೋಸಿಯೇಟ್‌ ಪ್ರೆಸ್‌ ವರದಿ ಪ್ರಕಾರ ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ಯಾನಲ್‌ ಚರ್ಚೆ ವೇಳೆ ಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷದ ಮುಖ್ಯಸ್ಥೆ ಮತ್ತು ಸಾರಿಗೆ ಸಚಿವರಾಗಿದ್ದ ಸನ್ನಾ ಮರಿನ್‌ ವಾರಕ್ಕೆ 4 ದಿನ ಕೆಲಸದ ಅವಧಿ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿದ್ದರು. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್ 

Follow Us:
Download App:
  • android
  • ios