ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಬಗ್ಗೆ ಪ್ರಸ್ತಾಪವಾದಾಗಿನಿಂದ ಈ ಕುರಿತ ಸಾಕಷ್ಟುಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್‌ ಕೂಡ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಸಂದೇಶ ವೈರಲ್‌ ಆಗುತ್ತಿದೆ.

Fact Check: ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗೆ ಡ್ರೆಸ್‌ಕೋಡ್‌!

ಇದರೊಂದಿಗೆ ಜಶೋದಾಬೆನ್‌ ಮಹಿಳೆಯರ ಜತೆಗೂಡಿ ಪ್ರತಿಭಟನೆಯೊಂದರಲ್ಲಿ ಭಾಗಿಯಾದ ಫೋಟೋವನ್ನೂ ಪೋಸ್ಟ್‌ ಮಾಡಲಾಗಿದೆ. ಈ ಫೋಟೋವನ್ನು ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿ ಮೋದಿ ಬಗ್ಗೆ ವಿಡಂಬನಾತ್ಮಕವಾಗಿ ಒಕ್ಕಣೆ ಬರೆದು ಶೇರ್‌ ಮಾಡಲಾಗುತ್ತಿದೆ.

 

ಆದರೆ ಜಶೋದಾಬೆನ್‌ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ನಿಜವೇ ಎಂದು ಪರಿಶೀಲಿಸಿದಾಗ ಹಿಂದೆ ಬೇರಾವುದೋ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಫೋಟೋವನ್ನೇ ಈಗ ಪೋಸ್ಟ್‌ ಮಾಡಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎನ್ನುವುದು ಖಚಿತವಾಗಿದೆ.

Fact Check: ಆರ್‌ಎಸ್‌ಎಸ್‌ ಕಚೇರಿಯಲ್ಲಿ ಬಂದೂಕಿಗೆ ಪೂಜೆ ಸಲ್ಲಿಸಿದ್ರಾ ಮೋದಿ?

ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ಸುದ್ದಿಸಂಸ್ಥೆಯವೊಂದರ ವೆಬ್‌ಸೈಟ್‌ನಲ್ಲಿ ಇದೇ ರೀತಿಯ ಫೋಟೋ ಲಭ್ಯವಾಗಿದೆ. ಅನಾಥರು ಮತ್ತು ಕೊಳಚೆ ನಿವಾಸಿಗಳ ಪರ ಪ್ರತಿಭಟನೆಗೆ ಕೂತ ನರೇಂದ್ರ ಮೊದಿ ಪತ್ನಿ’ ಎಂಬ ತಲೆಬರಹದಡಿ ಇದು 2016 ಫೆಬ್ರವರಿ 13ರಂದು ಪ್ರಟವಾಗಿತ್ತು. ಆ ಸಮಯದಲ್ಲಿ ದೆಹಲಿಯ ಶಹೀನ್‌ ಭಾಗ್‌ ಕೊಳಚೆ ಪ್ರದೇಶವನ್ನು ಕೆಡವಾಗಿತ್ತು. ಆಗ ಜಶೋದಾಬೆನ್‌ ಸ್ಲಮ್‌ ಜನರ ಪರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

- ವೈರಲ್ ಚೆಕ್