‘ಇದು ಕಾಶ್ಮೀರದ ಮನೆಗಳ ಸ್ಥಿತಿ. ಬಹುಶಃ ಇದು ಕಾಶ್ಮೀರದ ಈಗಿನ ಅವಸ್ಥೆ’ ಎಂದು ಬರೆದು ಗುಂಡೇಟುಗಳಿಂದ ತೀವ್ರ ಹಾನಿಯಾಗಿರುವ ಮನೆಯೊಂದರ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ.

Fact Check: ವಾಟ್ಸಾಪ್‌ನಲ್ಲಿ 3 ಸರಿ ಚಿಹ್ನೆ ಇದ್ರೆ ಸರ್ಕಾರ ಗೂಢಚರ್ಯೆ ನಡೆಸ್ತಿದೆ ಎಂದರ್ಥ!

ರಕ್ಷಾಂದ ಖಾನ್ ಎಂಬ ಫೇಸ್‌ಬುಕ್ ಖಾತೆಯು ಈ ಫೋಟೋವನ್ನು ಪೋಸ್ಟ್ ಮಾಡಿದ್ದು ಅದು 5800 ಬಾರಿ ಶೇರ್ ಆಗಿದೆ.ಫೇಸ್‌ಬುಕ್, ಟ್ವೀಟರ್‌ನಲ್ಲಿ ಇದು ಬಾರೀ ವೈರಲ್ ಆಗುತ್ತಿದೆ.  ಆದರೆ ನಿಜಕ್ಕೂ ಇದು ಕಾಶ್ಮೀರದಲ್ಲಿರುವ ಮನೆಯೇ ಎಂದು ಪರಿಶೀಲಿಸಿದಾಗ ಇದು ಭಾರತದ್ದೇ ಅಲ್ಲ ಎಂದು ತಿಳಿದುಬಂದಿದೆ. ಆಲ್ಟ್‌ನ್ಯೂಸ್ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಹೊರಟಾಗ ರ‌್ಯಾಡಿಕಲ್ ನ್ಯೂಸ್.ಕಾಮ್ 2010 ಜನವರಿ 3 ರಂದು ಪ್ರಕಟಿಸಿದ ವರದಿಯಲ್ಲಿ ವೈರಲ್ ಆಗಿರುವ ಮನೆಯ ಫೋಟೋವೇ ಇದೆ.

‘ಇಸ್ರೇಲಿ ಪಡೆಗಳು 2009 ರಲ್ಲಿ ಗಾಝಾ ಮೇಲೆ ಬಾಂಬ್ ದಾಳಿ ನಡೆಸಿ ಒಂದು ವರ್ಷವಾದ ಬಳಿಕವೂ ಗಾಝಾದಲ್ಲಿ ಏನೂ ಬದಲಾಗಿಲ್ಲ. ಆ ಬಾಂಬ್ ದಾಳಿ ಯಿಂದಾಗಿ ಗಾಝಾ ಮಕ್ಕಳು ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಅಡಿಟಿಪ್ಪಣಿ ಬರೆಯಲಾಗಿದೆ.

Fact Check: ಕರ್ತಾರ್‌ಪುರ ಗುರುದ್ವಾರದ ಮೇಲೆ ಪಾಕ್ ಧ್ವಜ?

ಟೈಮ್ ಮ್ಯಾಗಜೀನ್ ಸೇರಿದಂತೆ ಹಲವು ಮುಖ್ಯವಾಹಿನಿ ಸುದ್ದಿ ಮಾಧ್ಯಮಗಳಲ್ಲೂ ಇದು ಪ್ರಕಟವಾಗಿದೆ. ಆಗಿನಿಂದಲೂ ಗುಂಡೇಟುಗಳಿಂದ ತೀವ್ರ ಹಾನಿಯಾದ ಮನೆಯಲ್ಲಿಯೇ ಇಬ್ಬರು ಮಹಿಳೆಯರು ಬಟ್ಟೆ ಒಣಗಿಸುತ್ತಿರುವ ಈ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗಿ ಹರಿದಾಡುತ್ತಿದೆ. ಈಗ ಮತ್ತೆ ಚರ್ಚೆಗೆ ಕಾರಣವಾಗಿದೆ.

- ವೈರಲ್ ಚೆಕ್