ಕ್ಯಾಡ್ಬರಿ ಡೈರಿ ಮಿಲ್ಕ್ ಪ್ರಿಯರಿಗೊಂದು ಸಹಿ ಸುದ್ದಿ. ಕ್ಯಾಡ್ಬರಿ ಕಂಪನಿಯು ತನ್ನ 110ನೇ ವಾರ್ಷಿಕೋತ್ಸವ ಪ್ರಯುಕ್ತ 500 ಅದೃಷ್ಟಶಾಲಿಗಳಿಗೆ ಚಾಕೋಲೇಟ್‌ ಬಾಕ್ಸ್‌ಗಳನ್ನು ಉಚಿತವಾಗಿ ನೀಡುತ್ತಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋಷಿಯಲ್‌ಮೀಡಿಯಾ ಬಳಕೆದಾರರು ಈ ಸಂದೇಶವನ್ನು ನಂಬಿ ಮೋಸ ಹೋಗುತ್ತಿದ್ದಾರೆ.

Fact Check ಅದಾನಿ ಪತ್ನಿಗೆ ತಲೆಬಾಗಿ ನಮಸ್ಕರಿಸಿದ್ರಾ ಪ್ರಧಾನಿ ಮೋದಿ?

ಇದೇ ರೀತಿಯ ಹಲವು ಸಂದೇಶಗಳು ವೈರಲ್‌ ಆಗಿವೆ. ಒಂದರಲ್ಲಿ ಕ್ಯಾಡ್ಬರಿ ತನ್ನ 110ನೇ ವಾರ್ಷಿಕೋತ್ಸವ ಪ್ರಯುಕ್ತ 12 ಚಾಕೋಲೇಟ್‌ಗಳುಳ್ಳ ಒಂದು ಬಾಕ್ಸ್‌ ನೀಡುತ್ತಿದೆ ಎಂದರೆ, ಇನ್ನು ಕೆಲವು ಸಂದೇಶಗಳಲ್ಲಿ 500 ಹ್ಯಾಂಪ​ರ್ಸ್ ನೀಡುತ್ತಿದೆ ಎಂದೂ, ಮತ್ತೊಂದೆಡೆ 1500 ಹ್ಯಾಂಪರ್ಸ್ ನೀಡುತ್ತಿದೆ ಎಂದೂ ಹೇಳಲಾಗಿದೆ.

ಆದರೆ ಬೂಮ್‌ಲೈವ್‌ ಇದರ ಸತ್ಯಾಸತ್ಯ ಪರಿಶೀಲಿಸಿದಾಗ ಈ ಸಂದೇಶದ ಅಸಲಿಕತೆ ಬಯಲಾಗಿದೆ. ವಾಸ್ತವವಾಗಿ ಇದೊಂದು ಸುಳ್ಳುಸುದ್ದಿ. ಬೂಮ್‌ಲೈವ್‌ ಸುದ್ದಿಸಂಸ್ಥೆಯು ಕ್ಯಾಡ್ಬರಿ ಕಂಪನಿಯಿಂದ ಈ ಬಗ್ಗೆ ಸ್ಪಷ್ಟನೆ ಕೂಡ ಪಡೆದಿದೆ. ಹಾಗಂತ ಇದೇನು ಹೊಸತಲ್ಲ, ದೊಡ್ಡ ದೊಡ್ಡ ಕಂಪನಿಗಳ ವಾರ್ಷಿಕೋತ್ಸವ ಹೆಸರಲ್ಲಿ ನಕಲಿ ವೆಬ್‌ಸೈಟ್‌ ಸೃಷ್ಟಿಸಿ ಇಂಥ ಸುಳ್ಳುಸುದ್ದಿ ಹರಡಲಾಗುತ್ತಿದೆ. 2018ರಲ್ಲಿಯೂ ಕ್ಯಾಡ್ಬರಿ ಡೈರಿ ಮಿಲ್‌್ಕ ತಿಂದರೆ ಎಚ್‌ಐವಿ ಹರಡುತ್ತದೆಂದು ಸುಳ್ಳುಸುದ್ದಿ ಹರಡಲಾಗಿತ್ತು. ಎಚ್‌ಐವಿ ಸೋಂಕಿತ ಕಾರ್ಮಿಕನ ರಕ್ತವು ಚಾಕೋಲೇಟ್‌ಗಳಲ್ಲಿ ಸೇರಿದೆ ಎಂದು ಸುಳ್ಳುಸುದ್ದಿ ಹರಡಲಾಗಿತ್ತು.

- ವೈರಲ್ ಚೆಕ್