Asianet Suvarna News Asianet Suvarna News

ಫೇಸ್‌ಬುಕ್‌ನಲ್ಲರಳಿದ ಪ್ರೀತಿ, ಮನೆಯಲ್ಲಿದ್ದ 5 ಲಕ್ಷದ ಜೊತೆ ಪ್ರಿಯತಮೆ ನೋಡಲು ಹೋದ ಸಚಿನ್, ಮುಂದಾಗಿದ್ದೇನು?

* ಫೇಸ್‌ಬುಕ್‌ ಪ್ರೀತಿಗೆ ಮರುಳಾದ ಯುವಕ

* ಕೋಲ್ಕತ್ತಾ ಯುವತಿಯ ಭೇಟಿಯಾಗಲು ರೇವಾದಿಂದ ಹೋದ

* ಮನೆಯಲ್ಲಿದ್ದ ಐದು ಲಕ್ಷವೂ ಜೊತೆಗೊಯ್ದ ಯುವಕ ಪೊಲೀಸರ ಬಲೆಗೆ

Facebook Love Reva Boy Went To Meet His Girl Frind To kolkatta with 5 Lakh Rupees Found pod
Author
Bangalore, First Published May 30, 2022, 9:49 AM IST

ಕೋಲ್ಕತ್ತಾ(ಮೇ.30): ಕೋಲ್ಕತ್ತಾದ ಹುಡುಗಿಯೊಂದಿಗೆ ಫೇಸ್‌ಬುಕ್‌ನಲ್ಲಿ 6 ತಿಂಗಳ ಸ್ನೇಹ, ಪ್ರೀತಿಯ ಬಳಿಕ, ರೇವಾದ ಯುವಕ ಮನೆಯಿಂದ 5 ಲಕ್ಷ ರೂಪಾಯಿಯೊಂದಿಗೆ ಹುಡುಗಿಯನ್ನು ಭೇಟಿಯಾಗಲು ಕೋಲ್ಕತ್ತಾ ತಲುಪಿದ್ದಾನೆ. ಇತ್ತ ಯುವಕ ನಾಪತ್ತೆಯಾಗಿರುವ ಬಗ್ಗೆ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ನಂತರ ಸೈಬರ್ ಸೆಲ್ ಸಹಾಯದಿಂದ ಆತನಿದ್ದ ಸ್ಥಳವನ್ನು ಪತ್ತೆಹಚ್ಚಿದ ರೇವಾ ಪೊಲೀಸರು ಕೋಲ್ಕತ್ತಾಗೆ ತೆರಳಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ತನ್ನ ಗೆಳತಿಯನ್ನು ಭೇಟಿಯಾಗಬೇಕೆಂಬ ಯುವಕನ ಕನಸು ಅಪೂರ್ಣವಾಗಿ ಉಳಿದಿದೆ. ಪೊಲೀಸರು ಯುವಕನ ಬಳಿ ಇದ್ದ ಐದು ಲಕ್ಷ ರೂಪಾಯಿ ಮೊತ್ತವನ್ನೂ ವಶಕ್ಕೆ ಪಡೆದಿದ್ದಾರೆ. 

ಮಾಹಿತಿಯ ಪ್ರಕಾರ, ಮಧ್ಯಪ್ರದೇಶದ ರೇವಾದ ಲಕ್ಷ್ಮಣ್ ಬಾಗ್ ನಿವಾಸಿ ಸಚಿನ್ ಮಿಶ್ರಾ ಮೇ 25 ರಂದು ಮನೆಯಿಂದ ನಾಪತ್ತೆಯಾಗಿದ್ದರು. ಅಲ್ಲದೇ ಸಚಿನ್ ಮನೆಯಲ್ಲಿದ್ದ 5 ಲಕ್ಷ ರೂಪಾಯಿ ತೆಗೆದುಕೊಂಡು ಹೋಗಿದ್ದ. ಸಚಿನ್ ಕುಟುಂಬದವರು ಮನೆಯಿಂದ ಹೊರ ಹೋಗಿದ್ದರು. ಮನೆಯಲ್ಲಿ ಸಚಿನ್ ಕಾಣದಿದ್ದಾಗ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ಏನೂ ಸಿಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದರು. ಸೈಬರ್ ಸೆಲ್ ಸಹಾಯದಿಂದ ಪೊಲೀಸರು ಕೋಲ್ಕತ್ತಾದಲ್ಲಿ ಸಚಿನ್ ಇರುವ ಸ್ಥಳವನ್ನು ಪತ್ತೆಹಚ್ಚಿದರು. ಎಸ್ಪಿ ನವನೀತ್ ಭಾಸಿನ್ ಸೂಚನೆ ಮೇರೆಗೆ ಪೊಲೀಸ್ ತಂಡ ಕೋಲ್ಕತ್ತಾಗೆ ತೆರಳಿ ಸಚಿನ್ ಹುಡುಕಾಟ ನಡೆಸಿದೆ. ಇದಾದ ಬಳಿಕ ಪೊಲೀಸರು ಕೋಲ್ಕತ್ತಾದಿಂದ ಸಚಿನ್‌ ಹಾಗೂ ಆತನ ಬಳಿ ಇದ್ದ 5 ಲಕ್ಷ ರೂ. ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಪೊಲೀಸರೇ ಅಚ್ಚರಿಗೊಂಡಿದ್ದಾರೆ.

ವಾಸ್ತವವಾಗಿ, ಸಚಿನ್ ಕೋಲ್ಕತ್ತಾದ ಹುಡುಗಿಯೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು. ಆರು ತಿಂಗಳ ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ಫೋನಿನಲ್ಲಿ ಮಾತನಾಡತೊಡಗಿದರು. ಇದಾದ ನಂತರ ಸಚಿನ್ ಆ ಯುವತಿಯನ್ನು ಭೇಟಿ ಮಾಡಲು ಕೋಲ್ಕತ್ತಾಗೆ ಹೋಗಲು ನಿರ್ಧರಿಸಿದ್ದಾನೆ. ಮನೆಯಲ್ಲಿ ಇಟ್ಟಿದ್ದ ಹಣದ ಬಗ್ಗೆ ಸಚಿನ್‌ಗೆ ತಿಳಿದಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಿಕ್ಕ ಅವಕಾಶ ನೋಡಿದ ಸಚಿನ್ ಕಬೋರ್ಡ್‌ನಿಂದ 5 ಲಕ್ಷ ರೂಪಾಯಿ ತೆಗೆದು ಮನೆಯಿಂದ ಓಡಿ ಹೋಗಿದ್ದಾನೆ. ಸಚಿನ್ ಕುಟುಂಬಸ್ಥರು ಸಮಯ ವ್ಯರ್ಥ ಮಾಡದೆ ಸೂಕ್ತ ಹೆಜ್ಜೆ ಇರಿಸಿದ್ದಾರೆ ಎಂದು ಪೊಲೀಸ್ ಠಾಣೆ ಪ್ರಭಾರಿ ಜಗದೀಶ್ ಠಾಕೂರ್ ತಿಳಿಸಿದ್ದಾರೆ. ಸೈಬರ್ ಸೆಲ್ ಸಹಾಯದಿಂದ ಸ್ಥಳವನ್ನು ಪತ್ತೆಹಚ್ಚಿದ ಪೊಲೀಸರು ಕೋಲ್ಕತ್ತಾದಿಂದ ಯುವಕನನ್ನು ಹಿಡಿದು ಆತನನ್ನು ಸಂಬಂಧಿಕರಿಗೆ ಒಪ್ಪಿಸಿದ್ದಾರೆ. 5 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. 

Follow Us:
Download App:
  • android
  • ios