Asianet Suvarna News Asianet Suvarna News

INS Ranvir Explosion ಭಾರತೀಯ ನೌಕಾಪಡೆಯ INS ರಣ್‌ವೀರ್‌ನಲ್ಲಿ ಸ್ಫೋಟ, ಮೂವರು ಅಧಿಕಾರಿಗಳ ಸಾವು!

  • ಮುಂಬೈನ ಡಾಕ್‌ಯಾರ್ಡ್‌ನಲ್ಲಿ ನಡೆದ ಘಟನೆ
  • ಭಾರತೀಯ ನೌಕಾಪಡೆಯ INS ರಣ್‌ವೀರ್‌ ನೌಕೆ
  • ತನಿಕೆಗೆ ಆದೇಶಿಸಿದ ಭಾರತೀಯ ನೌಕಾ ಪಡೆ
Explosion on internal compartment onboard INS Ranvir three navy personnel killed in Mumbai Dockyard ckm
Author
Bengaluru, First Published Jan 18, 2022, 10:47 PM IST

ಮುಂಬೈ(ಜ.18): ಭಾರತೀಯ ನೌಕಾಪಡೆಯ INS ರಣ್‌ವೀರ್‌ ನೌಕೆಯಲ್ಲಿ ದಿಢೀರ್ ಸ್ಫೋಟ(Explosion) ಸಂಭವಿಸಿದೆ. ಪರಿಣಾಮ ಮೂವರು ನೌಕಾಪಡೆ ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ(Death). ಇತರ ಕೆಲ ಅಧಿಕಾರಿಗಳು ಗಾಯಗೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ. ಮುಂಬೈನ(Mumbai) ಡಾಕ್‌ಯಾರ್ಡ್‌ನಲ್ಲಿ ಈ ಘಟನೆ ಸಂಭವಿಸಿದೆ.

ಭಾರತೀಯ ನೌಕಾಪಡೆಯ(Indian Navy) ನೌಕೆಯಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ನೌಕೆಯಲ್ಲಿದ್ದ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇದೇ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸ್ಫೋಟಕ ತೀವ್ರತೆದೆ ಮೂವರು ಅಧಿಕಾರಿಗಳು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

Rafale For Navy: ಅಣ್ವಸ್ತ್ರ ಸಾಮರ್ಥ್ಯದ ರಫೇಲ್-ಎಂ ಯಶಸ್ವಿ ಪರೀಕ್ಷೆ!

ಇಂದು(ಜ.18) ಸುಮಾರು 4.30ರ ವೇಳೆಗೆ ನೌಕೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ನೌಕೆಗೆ ಹೆಚ್ಚಿನ ಹಾನಿಗಳಾಗಿಲ್ಲ. ಇನ್ನು ನೌಕೆಯಲ್ಲಿದ್ದ ಶಸ್ತ್ರಾಸ್ತ್ರ ಹಾಗೂ ಇತರ ಮದ್ದುಗುಂಡುಗಳಿಗೆ ಯಾವುದೇ ಹಾನಿಯಾಗಿಲ್ಲ.

ಹಡಗಿನ ಆಂತರಿಕ ವಲಯದಲ್ಲಿ ಸ್ಫೋಟಕ ಸಂಭವಿಸಿದೆ. ಸ್ಫೋಟಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಸ್ಫೋಟದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಕರಾವಳಿ ಕಾರ್ಯಚರಣೆಗೆ ನಿಯೋಜನೆಗೊಂಡಿದ್ದ INS ರಣ್‌ವೀರ್‌ ನೌಕೆಯಲ್ಲಿನ ಸ್ಫೋಟ ಇದೀಗ ಹಲವು ಅನುಮಾನಗಳಿಗೂ ಕಾರಣವಾಗಿದೆ.

INS Vela: ನೌಕಾಪಡೆಗೆ 4ನೇ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆ... ಏನಿದರ ವಿಶೇಷತೆ

ಭಾರತೀಯ ನೌಕಾಪಡೆಯಲ್ಲಿ ತಾಂತ್ರಿಕ ಕಾರಣಗಳಿಂದ ಸ್ಫೋಟ ಸಂಭವಿಸಿದೆ. ಇದೀಗ ಸಂಭವಿಸಿದ INS ರಣ್‌ವೀರ್‌(Ranvir) ನೌಕೆ ಸ್ಫೋಟ ಕೂಡ ಇದೇ ರೀತಿಯ ತಾಂತ್ರಿಕ ಸಮಸ್ಯೆಯಿಂದ ಸಂಭವಿಸಿದೆಯೇ ಅನ್ನೋದು ತನಿಖೆಯಿಂದ ಹೊರಬರಲಿದೆ.INS ರಣ್‌ವೀರ್‌ 1986ರಿಂದ ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

Follow Us:
Download App:
  • android
  • ios