Asianet Suvarna News Asianet Suvarna News

INS Vela: ನೌಕಾಪಡೆಗೆ 4ನೇ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆ... ಏನಿದರ ವಿಶೇಷತೆ

ಐಎನ್‌ಎಸ್‌ ವೇಲಾ ಹೆಸರಿನ  4ನೇ ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿ ನೌಕೆ ಇಂದು ಭಾರತೀಯ ನೌಕಾಪಡೆ ಸೇರಲಿದೆ. ಇದು ಎಲ್ಲಾ ಸುಧಾರಿತ ಯುದ್ಧತಂತ್ರಗಳ ಜೊತೆ ಹಲವು ವಿಶೇಷತೆಗಳನ್ನು ಹೊಂದಿದೆ.

INS Vela: Navy to get 4th Scorpene-class submarine akb
Author
Delhi, First Published Nov 25, 2021, 5:56 PM IST

ಇದಕ್ಕೂ ಮೊದಲು  ಅಂದರೆ 1973ರ  ಆಗಸ್ಟ್ 31ರಂದು ಭಾರತೀಯ ನೌಕಾಪಡೆಗೆ  ಜಲಾಂತರ್ಗಾಮಿಯ  ಹಿಂದಿನ ಅವತರಣಿಕೆಯನ್ನು ನಿಯೋಜಿಸಲಾಗಿತ್ತು. ಇದು 37 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿ 2010 ರ ಜೂನ್‌ 25 ರಂದು ಸೇವೆಯಿಂದ ಸ್ಥಗಿತಗೊಂಡಿದೆ. ಐಎನ್‌ಎಸ್‌ ವೇಲಾ(INS Vela') ಹೆಸರಿನ ಈ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್ 75 ರ ಅಡಿಯಲ್ಲಿ ಕಾರ್ಯಾರಂಭಿಸಲಿದೆ. ಸ್ಕಾರ್ಪೀನ್ ವರ್ಗದ ಆರು ಜಲಾಂತರ್ಗಾಮಿ ನೌಕೆಗಳ ನಿರ್ಮಾಣವನ್ನು ಇದು ಒಳಗೊಂಡಿದೆ. ಈ ಸಬ್‌ಮೆರಿನ್‌ಗಳು ಹಲವು ವಿಧದ ಕಾರ್ಯಾಚರಣೆಗಳಾದ ಅಂಟಿ ಸರ್ಫೇಸ್‌ ವಾರ್‌ಫೇರ್‌( anti-surface warfare), ಸಮುದ್ರದೊಳಗಿನ ಯುದ್ಧ ಕೌಶಲ( anti-submarine warfare), ಗುಪ್ತಚರ ಸಂಗ್ರಹಣೆ( intelligence gathering), ಏರಿಯಾ ಸರ್ವೈಲೆನ್ಸ್‌(area surveillance) ಇತ್ಯಾದಿಗಳನ್ನು ಕೈಗೊಳ್ಳಬಲ್ಲವು.

ಇಂತಹ ಮೂರು ಜಲಾಂತರ್ಗಾಮಿಗಳಾದ ಕಲ್ವಾರಿ, ಖಂದೇರಿ ಹಾಗೂ ಕಾರಂಜ ಈಗಾಗಲೇ ನೌಕಾಪಡೆಯಲ್ಲಿ ಕಾರ್ಯಾಚರಣೆಯಲ್ಲಿವೆ. ಐಎನ್‌ಎಸ್‌ ವೇಲಾ ಜಲಾಂತರ್ಗಾಮಿಯನ್ನು ನೌಕಾಪಡೆಯ ಮುಖ್ಯಸ್ಥ(Chief of Naval Staff ) ಅಡ್ಮಿರಲ್‌ ಕರಂಬೀರ್‌ ಸಿಂಗ್‌(Admiral Karambir Singh) ನೌಕಾಪಡೆಗೆ ನಿಯೋಜನೆಗೊಳಿಸಲಿದ್ದಾರೆ. ಫ್ರಾನ್ಸ್‌ನ ನೌಕಾಸೇನೆಯ ಗುಂಪಿನೊಂದಿಗೆ ಸೇರಿಕೊಂಡು ಮುಂಬೈ ಮೂಲದ ಮಜಗಾನ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌(Mazagon Dock Shipbuilders Ltd) ಈ ಜಲಾಂತರ್ಗಾಮಿಯನ್ನು ನಿರ್ಮಿಸಿದೆ. ಐಎನ್‌ಎಸ್‌ ವೇಲಾ ಜಲಾಂತರ್ಗಾಮಿಯೂ ಶತ್ರುಗಳೊಂದಿಗೆ ಹೋರಾಡುವ ಸಂದರ್ಭ ಬಂದಾಗ ಉಪಯೋಗಕ್ಕೆ ಬರುವ ಸುಧಾರಿತ ಸ್ಟೆಲ್ತ್‌(ರಾಡಾರ್‌ನಿಂದ ಕಂಡು ಹಿಡಿಯಬಲ್ಲ ತಂತ್ರಜ್ಞಾನ) ಹಾಗೂ ರಹಸ್ಯ ಯುದ್ಧ ಸಾಮರ್ಥ್ಯಗಳನ್ನು ಹೊಂದಿದೆ.  

IAF Procurement:2,236 ಕೋಟಿ ರೂ. ರಕ್ಷಣಾ ಸಾಮಗ್ರಿ ನಿರ್ಮಾಣ ಪ್ರಸ್ತಾವನೆಗೆ ಒಪ್ಪಿಗೆ

ಸುಧಾರಿತ ಅಕೌಸ್ಟಿಕ್ ಸೈಲೆನ್ಸಿಂಗ್ ತಂತ್ರಗಳು, ಕಡಿಮೆ ವಿಕಿರಣದ ಶಬ್ದದ ಮಟ್ಟಗಳು, ಹೈಡ್ರೋ-ಡೈನಾಮಿಕ್ ಆಪ್ಟಿಮೈಸ್ಡ್ ಆಕಾರ ಮತ್ತು ನಿಖರ-ಮಾರ್ಗದರ್ಶಿತ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಶತ್ರುಗಳ ಮೇಲೆ ಸಣ್ಣ ಮಟ್ಟಿನ ದಾಳಿಯನ್ನು ಪ್ರಾರಂಭಿಸುವ ಸಾಮರ್ಥ್ಯ ಮುಂತಾದ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಐಎನ್‌ಎಸ್‌ ವೇಲಾ ಆಕ್ರಮಣಕಾರಿ ಕಾರ್ಯಾಚರಣೆಗೆ ಸಮರ್ಥವಾಗಿದೆ ಎಂದು ನೌಕಾಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಟಾರ್ಪಿಡೊಗಳು ಅಥವಾ ಟ್ಯೂಬ್-ಲಾಂಚ್ಡ್ ಆಂಟಿ-ಶಿಪ್ ಕ್ಷಿಪಣಿ ಈ ಎರಡನ್ನೂ ಬಳಸಿ ನೀರಿನ ಒಳಗೆ ಅಥವಾ ಹೊರಗೆ ಶತ್ರುಗಳ ಮೇಲೆ ದಾಳಿ ಮಾಡಬಹುದಾಗಿದೆ. ಮೇ 2019 ರಲ್ಲಿ ಕಾರ್ಯಾರಂಭಿಸಿದ ಇದು ಕೋವಿಡ್ ನಿರ್ಬಂಧಗಳ ಹೊರತಾಗಿಯೂ ಎಲ್ಲಾ ಪ್ರಮುಖ ಬಂದರು ಮತ್ತು ಸಮುದ್ರ ಪ್ರಯೋಗಗಳು ಹಾಗೂ ಶಸ್ತ್ರಾಸ್ತ್ರ ಮತ್ತು ಸಂವೇದಕ ಪ್ರಯೋಗಗಳನ್ನು ಪೂರ್ಣಗೊಳಿಸಿ ನೌಕಾಪಡೆ ಸೇರಲು ಸಜ್ಜಾಗಿದೆ. 

INS Visakhapatnam| ಕ್ಷಿಪಣಿ ದಾಳಿ ಸಾಮರ್ಥ್ಯ ಯುದ್ಧ ನೌಕೆ ನೌಕಾಪಡೆಗೆ!

ಈ ಸರಣಿಯ ಮೊದಲ ಜಲಾಂತರ್ಗಾಮಿ ನೌಕೆ, INS ಕಲ್ವರಿ( INS Kalvari) , ಅಕ್ಟೋಬರ್ 2015 ರಲ್ಲಿ ಲಾಂಚ್‌ ಆಗಿ ಡಿಸೆಂಬರ್ 2017 ರಲ್ಲಿ ಕಾರ್ಯಾರಂಭ ಮಾಡಿತ್ತು. ಹಾಗೆಯೇ ಎರಡನೇಯದಾದ ಐಎನ್‌ಎಸ್‌ ಖಂಡೇರಿ(INS Khanderi)  2017ರಲ್ಲಿ ಲಾಂಚ್‌ ಆಗಿ 2019ರಲ್ಲಿ ನೌಕಾಸೇನೆಗೆ ಸೇರಿತ್ತು. ಹಾಗೆಯೇ ಮೂರನೇ ಸಬ್‌ಮೆರಿನ್‌ ಐಎನ್‌ಎಸ್‌ ಕಾರಂಜಾ( INS Karanj) 2018ರಲ್ಲಿ ಲಾಂಚ್‌ ಆಗಿ 2021ರ ಮಾರ್ಚ್‌ನಲ್ಲಿ ನೌಕಾಸೇನೆಯನ್ನು ಸೇರಿತ್ತು. ಇಂದು ನೌಕಾಸೇನೆ ಸೇರುತ್ತಿರುವ ಐಎನ್‌ಎಸ್‌ ವೇಲಾ 4ನೇ ಸಬ್‌ಮೆರಿನ್‌ ಆಗಿದೆ.  ಹಾಗೆಯೇ 5ನೇಯದಾಗಿರುವ ಐಎನ್‌ಎಸ್‌ ವಗೀರ್‌(INS Vagir) 2020ರ ನವಂಬರ್‌ನಲ್ಲಿ ಲಾಂಚ್‌ ಆಗಿದ್ದು, ಮುಂದಿನ ಸಮುದ್ರದ ಪ್ರಯೋಗಗಳಿಗೆ ಸಿದ್ಧಗೊಳ್ಳುತ್ತಿದೆ. ಹಾಗೆಯೇ ಐಎನ್‌ಎಸ್‌ ವಗ್ಸೀರ್‌( INS Vagsheer) 6ನೇ ಸಬ್‌ ಮೆರಿನ್‌ ಆಗಿದ್ದು, ಅದರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 

Follow Us:
Download App:
  • android
  • ios