Exit Poll Result ಇಂಡಿಯಾ ಮೈತ್ರಿಗೆ ಮತ ಹಾಕದ ಭಾರತ, ಮೋದಿಗೆ ಹ್ಯಾಟ್ರಿಕ್ ಬಹುಮತ!

ಲೋಕಸಭಾ ಚುನಾವಣಾ ಮತಗಟ್ಟೆ ಸಮೀಕ್ಷೆ ಬಹಿರಂಗವಾಗಿದೆ. ಬಹುತೇಕ ಸಮೀಕ್ಷೆಗಳಲ್ಲಿ ಇಂಡಿಯಾ ಒಕ್ಕೂಟದ ಅಧಿಕಾರಕ್ಕೇರುವ ರೋಡ್ ಬ್ಲಾಕ್ ಆಗಿದ್ದರೆ, ಪ್ರಧಾನಿ ಮೋದಿ ಹ್ಯಾಟ್ರಿಕ್ ಗೆಲುವಿನ ಸೂಚನೆ ನೀಡುತ್ತಿದೆ. 
 

Exit Poll Result Most of Lok Sabha Election Survey Predicts NDA bags 350 plus seats ckm

ನವದೆಹಲಿ(ಜೂನ್ 01) ಲೋಕಸಭಾ ಚುನಾವಣೆಯ ಎಲ್ಲಾ 7 ಹಂತದ ಮತದಾನ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಎಕ್ಸಿಟ್ ಪೋಲ್ ವರದಿಗಳು ಬಹಿರಂಗವಾಗಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಎನ್‌ಡಿಎ ಒಕ್ಕೂಟಕ್ಕೆ 350ಕ್ಕೂ ಹೆಚ್ಚು ಸ್ಥಾನ ನೀಡಿದೆ. ಇತ್ತ ಇಂಡಿಯಾ ಮೈತ್ರಿಗೆ ಸರಾಸರಿ 150 ಸ್ಥಾನ ನೀಡಿದೆ. ಚುನಾವಣಾ ಮತಗಟ್ಟೆ ಸಮೀಕ್ಷೆ ಪ್ರಕಾರ ಪ್ರಧಾನಿ ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೇರುವುದು ಖಚಿತ ಎಂದಿದೆ. ಇತ್ತ ಇಂಡಿಯಾ ಮೈತ್ರಿ ಒಕ್ಕೂಟ 150 ಸ್ಥಾನಕ್ಕೆ ತೃಪ್ತಿಪಟ್ಟಕೊಳ್ಳಬೇಕಾಗಿದೆ.

ಕರ್ನಾಟಕದಲ್ಲಿನ ಈ ಬಾರಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಲಿದೆ ಎಂದು ಮತಗಟ್ಟೆ ಸಮೀಕ್ಷೆ ವರದಿ ಹೇಳುತ್ತಿದೆ. 2019ರ ಚುನಾವಣೆಯಲ್ಲಿ 1 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಗರಿಷ್ಠ 8 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದೆ.  ಕರ್ನಾಟಕದ 28 ಸ್ಥಾನಗಳ ಪೈಕಿ ಬಿಜೆಪಿ ಈ ಬಾರಿ ಕೆಲ ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದಿದೆ. ಇಂಡಿಯಾ ಟುಡೆ ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಬಿಜೆಪಿ-ಜೆಡಿಎಸ್ ಮತ್ರಿ 23 ರಿಂದ 25 ಸ್ಥಾನ ಗೆಲ್ಲಲಿದೆ ಎಂದಿದೆ. ಇದೇ ವೇಳ ಕಾಂಗ್ರೆಸ್ 3 ರಿಂದ 5 ಸ್ಥಾನ ಗೆಲ್ಲಿದೆ ಎಂದಿದೆ. ಇಂಡಿಯಾ ಟಿವಿ ಸಿಎನ್‌ಎಕ್ಸ್ ಪ್ರಕಾರ ಬಿಜೆಪಿ-ಜೆಡಿಎಸ್ ಮತ್ರಿ  19 ರಿಂದ 25 ಸ್ಥಾನ, ಕಾಂಗ್ರೆಸ್ 4 ರಿಂದ 8 ಸ್ಥಾನ ಎಂದಿದೆ. ಇನ್ನು ಟಿವಿ9 ಭರತವರ್ಶ್ ಪೋಲ್‌ಸ್ಟಾರ್ ಸಮೀಕ್ಷೆಯಲ್ಲಿ ಬಿಜೆಪಿ-ಜೆಡಿಎಸ್ ಮತ್ರಿ 20 ಸ್ಥಾನ ಹಾಗೂ ಕಾಂಗ್ರೆಸ್ 8 ಸ್ಥಾನ ಗೆಲ್ಲಲಿದೆ. ರಿಪ್ಲಬಿಕ್ ಟಿವಿ ಪಿ ಮಾರ್ಕ್ ಸಮೀಕ್ಷೆಯಲ್ಲಿ ಬಿಜೆಪಿ-ಜೆಡಿಎಸ್ ಮತ್ರಿ 22 ಸ್ಥಾನ ಹಾಗೂ ಕಾಂಗ್ರೆಸ್ 6 ಸ್ಥಾನ ಗೆಲ್ಲಲಿದೆ ಎಂದಿದೆ. ಬಹುತೇಕ ಸಮೀಕ್ಷೆಗಳ ಪ್ರಕಾರ ಕರ್ನಾಟದಲ್ಲಿ ಕಾಂಗ್ರೆಸ್ ಗರಿಷ್ಠ 8 ಸ್ಥಾನ ಎಂದಿದ್ದರೆ, ಬಿಜೆಪಿ ಜೆಡಿಎಸ್ ಮೈತ್ರಿ ಗರಿಷ್ಠ 20 ರಿಂದ 22 ಸ್ಥಾನ ಗೆಲ್ಲಲಿದೆ ಎಂದಿದೆ.

 ಬಿಜೆಪಿ ನಿರೀಕ್ಷೆ ಮುಟ್ಟದ ಎಕ್ಸಿಟ್ ಪೋಲ್, ಜನ್ ಕಿ ಬಾತ್‌ ಸರ್ವೆಯಲ್ಲಿ ಅಚ್ಚರಿ ಭವಿಷ್ಯ!

ದೆಹಲಿ,ಉತ್ತರಖಂಡ, ಗುಜರಾತ್ ಸೇರಿದಂತೆ ಕೆಲ ರಾಜ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದಿದೆ. ಸದ್ಯ ಪ್ರಕಟಗೊಂಡಿರುವ ಲೋಕಸಭಾ ಚುನಾವಣಾ ಮತಗಟ್ಟೆ ಸಮೀಕ್ಷೆ ವಿವರ ಇಲ್ಲಿದೆ. 

ಇಂಡಿಯಾ ನ್ಯೂಸ್ ಡೈನಾಮಿಕ್ಸ್ ಸಮೀಕ್ಷಾ ವರದಿ
ಎನ್‌ಡಿ: 371
ಇಂಡಿಯಾ ಮೈತ್ರಿ: 125
ಇತರರು: 47

ಜನ್ ಕಿ ಬಾತ್ ಸಮೀಕ್ಷಾ ವರದಿ
ಎನ್‌ಡಿಎ: 377
ಇಂಡಿಯಾ ಒಕ್ಕೂಟ: 151
ಇತರರು:15

ಎನ್‌ಡಿಟಿವಿ ಇಂಡಿಯಾ ಸಮೀಕ್ಷಾ ವರದಿ
ಎನ್‌ಡಿಎ:  365
ಇಂಡಿಯಾ ಒಕ್ಕೂಟ: 142
ಇತರರು: 36

ನ್ಯೂಸ್ ನೇಷನ್ ಸಮೀಕ್ಷಾ ವರದಿ
ಎನ್‌ಡಿಎ:  342-378
ಇಂಡಿಯಾ ಒಕ್ಕೂಟ: 153-169
ಇತರರು: 21-23

ರಿಪ್ಲಬಿಕ್ ಭಾರ್ ಮ್ಯಾಟ್ರಿಜ್ ಸಮೀಕ್ಷಾ ವರದಿ
ಎನ್‌ಡಿಎ:  353-368
ಇಂಡಿಯಾ ಒಕ್ಕೂಟ: 118-133
ಇತರರು: 43-48

ಮತದಾನ ಅಂತ್ಯದ ಬೆನ್ನಲ್ಲೇ ಫಲೋಡಿ ಸಟ್ಟಾ ಬಜಾರ್ ಭವಿಷ್ಯ ಪ್ರಕಟ, ಹಲವು ಲೆಕ್ಕಾಚಾರ ಉಲ್ಟಾ!

ಪಿಮಾರ್ಕ್ ಸಮೀಕ್ಷಾ ವರದಿ
ಎನ್‌ಡಿಎ: 359 
ಇಂಡಿಯಾ ಒಕ್ಕೂಟ: 154
ಇತರರು: 30

ಕೆಲ ರಾಜ್ಯದಲ್ಲಿ ಬಿಜೆಪಿ ಅಚ್ಚರಿ ನೀಡಲಿದೆ ಎಂದು ಚುನಾವಣಾ ಮತಗಟ್ಟೆ ಸಮೀಕ್ಷೆಗಳು ಹೇಳುತ್ತಿದೆ. ಪ್ರಮುಖವಾಗಿ ಪಶ್ಚಿಮ ಬಂಗಳಾದಲ್ಲಿ ಆಡಳಿತರೂಡ ತೃಣಮೂಲ ಕಾಂಗ್ರೆಸ್‌ಗೆ ಬಿಜೆಪಿ ಶಾಕ್ ನೀಡಲಿದೆ ಎಂದು 3 ಸಮೀಕ್ಷೆಗಳು ಹೇಳುತ್ತಿದೆ. ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ಬಿಜೆಪಿ 21 ರಿಂದ 26 ಸ್ಥಾನ ಗೆದ್ದರೆ, ಟಿಎಂಸಿ 16 ರಿಂದ 18 ಸ್ಥಾನಕ್ಕೆ ಕುಸಿಯಲಿದೆ ಎಂದಿದೆ. ಕಳೆದ ಚುನಾವಣೆಯಲ್ಲಿ ಟಿಎಂಸಿ 22 ಸ್ಥಾನ ಗೆದ್ದಿದ್ದರೆ, ಬಿಜೆಪಿ 18 ಸ್ಥಾನ ಗೆದ್ದುಕೊಂಡಿತ್ತು. ಡಿ ಡೈನಾಮಿಕ್ಸ್ ಸಮೀಕ್ಷೆ ಪ್ರಕಾರ ಬಿಜೆಪಿ 21 ಸ್ಥಾನ ಗೆಲ್ಲಲಿದೆ ಎಂದರೆ, ಟಿಎಂಸಿ 19 ಸ್ಥಾನ ಗೆಲ್ಲಲಿದೆ ಎಂದಿದೆ. ಇನ್ನು ಭಾರತ್ ಮ್ಯಾಟ್ರಿಸ್ ಸಮೀಕ್ಷೆ ಪ್ರಕಾರ ಬಿಜೆಪಿ 21 ರಿಂದ 25 ಸ್ಥಾನ ಹಾಗೂ ಟಿಎಂಸಿ 16 ರಿಂದ 20 ಸ್ಥಾನ ಗೆಲ್ಲಲಿದೆ ಎಂದಿದೆ.
 

Latest Videos
Follow Us:
Download App:
  • android
  • ios