ಲೋಕಸಭಾ ಚುನಾವಣಾ ಮತದಾನ ಅಂತ್ಯಗೊಂಡಿದೆ. ಒಂದೆಡೆ ಮತಗಟ್ಟೆ ಸಮೀಕ್ಷೆಗಳು ಭರಾಟೆ ಆರಂಭಗೊಳ್ಳುತ್ತಿದೆ. ಇದರ ನಡುವೆ ಕರಾರುವಕ್ ಬೆಟ್ಟಿಂಗ್ ಫಲೋಡಿ ಸಟ್ಟಾ ಬಜಾರ್ ಚುನಾವಣಾ ಫಲಿತಾಂಶದ ಭವಿಷ್ಯ ನುಡಿದಿದೆ. ಈ ವರದಿ ಪ್ರಕಾರ ಹಲವರ ಲೆಕ್ಕಾಚಾರ ಉಲ್ಟಾ ಆಗಿದೆ. 

ನವದೆಹಲಿ(ಜೂನ್ 01) ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಬಹಿರಂಗವಾಗಿದೆ. ಬಹುತೇಕ ಸಮೀಕ್ಷೆಯಲ್ಲಿ ಎನ್‌ಡಿಎ ಕೂಟ ಮತ್ತೆ ಅಧಿಕಾರಕ್ಕೇರುವುದು ಖಚಿತವಾಗಿದೆ. ಸರಾಸರಿ ಪ್ರಕಾರ ಎನ್‌ಡಿ 350ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿದೆ. ಈ ಲೆಕ್ಕಾಚಾರ ನಡುವೆ ಫಲೋಡಿ ಸಟ್ಟಾ ಬಜಾರ್ ಕೆಲ ಅಚ್ಚರಿ ಸಂಖ್ಯೆಗಳನ್ನು ನೀಡಿದೆ. ಫಲೋಡಿ ಸಟ್ಟಾ ಬಜಾರ್ ಬೆಟ್ಟಿಂಗ್ ವಲಯದ ಪ್ರಕಾರ ಈ ಬಾರಿ ಬಿಜೆಪಿ 2019ರ ಲೋಕಸಭಾ ಚುನಾವಣೆಗಿಂತ ಕಡಿಮೆ ಸ್ಥಾನ ಗೆಲ್ಲಲಿದೆ ಎಂದಿದೆ.

ಫಲೋಡಿ ಸಟ್ಟಾ ಬಜಾರ್ ಬಿಜೆಪಿಯ ಸ್ಥಾನವನ್ನು 270 ರಿಂದ 300 ಇಳಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸ್ಥಾನ ಗೆದ್ದಿತ್ತು. ಈ ಬಾರಿ ಸಟ್ಟಾ ಬಜಾರ್ ನೀಡಿರುವ ಗರಿಷ್ಟ ಸ್ಥಾನ 300. ಸಟ್ಟಾ ಬಜಾರ್ ಪ್ರಕಾರ ಬಿಜೆಪಿ ತನ್ನ ಘೋಷಣೆಯಂತೆ ಚಾರ್ ಸೋ ಪಾರ್(400) ದಾಟಲ್ಲ ಎಂದಿದೆ. 

ಇತ್ತ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಗಿಂತ ಉತ್ತಮ ಪ್ರದರ್ಶನ ಈ ಬಾರಿ ನೀಡಲಿದೆ. ಇಷ್ಟೇ ಅಲ್ಲ ಏಕಾಂಗಿಯಾಗಿ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಫಲೋಡಿ ಸಟ್ಟಾ ಬಜಾರ್ ಹೇಳುತ್ತಿದೆ. ಫಲೋಡಿ ಸಟ್ಟಾ ಬಜಾರ್ ಭವಿಷ್ಯದ ಪ್ರಕಾರ ಕಾಂಗ್ರೆಸ್ 60 ರಿಂದ 63 ಸ್ಥಾನ ಗೆಲ್ಲಲಿದೆ ಎಂದಿದೆ. ಇತ್ತ ಇಂಡಿಯಾ ಮೈತ್ರಿ ಕೂಡ ಈ ಬಾರಿ ಸರ್ಕಾರ ರಚಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

7ನೇ ಹಂತದ ಮತದಾನ ಅಂತ್ಯಗೊಳ್ಳುತ್ತಿದ್ದಂತೆ ಇಂಡಿಯಾ ಮೈತ್ರಿ ಒಕ್ಕೂಟ ಸಭೆ ಸೇರಿ ಚರ್ಚೆ ನಡೆಸಿತ್ತು. ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಘೋಷಣೆ ಮಾಡಿದ್ದರು. ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲಲಿದೆ ಎಂದಿದ್ದಾರೆ. 7 ಹಂತದಲ್ಲಿ ಜನರು ಕಾಂಗ್ರೆಸ್ ಪರ ಒಲವು ತೋರಿದ್ದರೆ. ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪರ ಜನರ ಒಲವು ವ್ಯಕ್ತವಾಗಿದೆ. ಹೀಗಾಗಿ ಇಂಡಿಯಾ ಒಕ್ಕೂಟ 295 ಸ್ಥಾನ ಗೆಲ್ಲಲಿದೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫಲೋಡಿ ಸಟ್ಟಾ ಬಜಾರ್ ಬಹುತೇಕ ನಿಖರ ಅಂಕಿ ಅಂಶಗಳನ್ನು ಇದುವರೆಗೆ ನೀಡಿದೆ. ಹಲವು ಬಾರಿ ಫಲೋಡಿ ಸಟ್ಟಾ ಬಜಾರ್ ಭವಿಷ್ಯಗಳು ಫಲಿತಾಂಶಕ್ಕೆ ಸಮೀಪವಾಗಿದೆ. ಹೀಗಾಗಿ ಈ ಬಾರಿಯ ಭವಿಷ್ಯ ಭಾರಿ ಕುತೂಹಲ ಕೆರಳಿಸಿದೆ.