ಅಣ್ಣಾಮಲೈ ಬಿಜೆಪಿ ಪ್ರವೇಶಿಸಿದ್ದೇಕೆ? ಗುಟ್ಟು ಬಿಚ್ಚಿಟ್ಟ ಸಿಟಿ ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯುದರ್ಶಿ, ದಕ್ಷಿಣ ಭಾರತ ಉಸ್ತುವಾರಿ ಸಿಟಿ ರವಿ ಸಂದರ್ಶನ/ ತಮಿಳುನಾಡು ರಾಜಕಾರಣದ ಬಗ್ಗೆ ರವಿ ಮಾತು/ ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಘಟನೆಗೆ ಹೊಸ ಹೆಜ್ಜೆ/ ಅಣ್ಣಾಮಲೈ ಮತ್ತು ತಮಿಳು ನಾಡು ರಾಜಕಾರಣ, ಸಿಟಿ ರವಿ ಸಂದರ್ಶನ ಹೂರಣ
ಬೆಂಗಳೂರು(ಅ. 09) ದಶಕಗಳ ಕಾಲದಿಂದ ಭಾರತೀಯ ಜನತಾ ಪಾರ್ಟಿ ದಕ್ಷಿಣ ಭಾರತದಲ್ಲಿ ಕಮಲ ಅರಳಿಸಲು ನಿರಂತರ ಯತ್ನ ಮಾಡಿಕೊಂಡೆ ಬಂದಿದೆ. ಕರ್ನಾಟಕದಲ್ಲಿ ಯಶಸ್ಸು ಸಾಧಿಸಿ ಸರ್ಕಾರ ರಚನೆ ಮಾಡಿದೆ. ಆದರೆ ಉಳಿದ ರಾಜ್ಯಗಳಲ್ಲಿ ಅಧಿಕಾರದ ಸಮೀಪಕ್ಕೆ ಹೋಗಲು ಸಾಧ್ಯವಾಗಿಲ್ಲ.
ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪಾಂಡಿಚೇರಿಯ ಮೇಲೆ ಕಣ್ಣು ಇಟ್ಟಿರುವ ಬಿಜೆಪಿ ಹೊಸ ಹೊಸ ತಂತ್ರಗಾರಿಕೆ ಮಾಡಲು ಸಿದ್ಧವಾಗಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ದಕ್ಷಿಣ ಭಾರತ ಉಸ್ತುವಾರಿ ಸಿಟಿ ರವಿ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ
ಜೈಲು ಶಿಕ್ಷೆಯ ಮಧ್ಯೆಯೂ ಲಾಲೂ ಸಂದರ್ಶನ
ಪ್ರಶ್ನೆ; ದಕ್ಷಿಣ ಭಾರತದಲ್ಲಿ ಬಿಜೆಪಿ ಬೆಳವಣಿಗೆಗೆ ನೀವು ಹಾಕಿಕೊಂಡಿರುವ ಯೋಜನೆಗಳು ಏನು?
ಸಿಟಿ ರವಿ: ನಮ್ಮ ಪಕ್ಷ ಸರ್ವವ್ಯಾಪಿಯಾಗಿರಬೇಕು ಎಂಬುದು ಆಲೋಚನೆ. ಇಡೀ ದೇಶದಲ್ಲಿ ಪಕ್ಷ ಸಂಘಟನೆಯಾಗಬೇಕಿದ್ದು ನಾವು ಎಲ್ಲ ವರ್ಗಗಳನ್ನು ತಲುಪುತ್ತಿದ್ದೇವೆ. ರಾಜಕೀಯ ಅಸ್ಪ್ರಶ್ಯತೆಗೆ ಬಿಜೆಪಿಯಲ್ಲಿ ಜಾಗವಿಲ್ಲ. ನಾವು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಆ ಬಗೆಯ ಕಾರ್ಯಚಟುವಟಿಕೆಯನ್ನೇ ಹಾಕಿಕೊಳ್ಳುತ್ತೇವೆ.
ಇಂಥ ಕೆಲಸಗಳಿಂದಲೇ ಅನೇಕ ರಾಜ್ಯಗಳಲ್ಲಿ ಬಿಜೆಪಿ ಶಕ್ತಿಯುತವಾಗಿದೆ. ಕರ್ನಾಟಕ ಹೊರತುಪಡಿಸಿ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪಾಂಡಿಚೇರಿಯ ಹಾಗೂ ಲಕ್ಷದ್ವೀಪದಲ್ಲಿ ಇನ್ನಷ್ಟು ಬೆಳೆಯಬೇಕಿದೆ. ಪಕ್ಷ ಹೊಸ ಸಂಘಟನೆಯೊಂದಿಗೆ ಒಂದು ತಂಡವಾಗಿ ಕೆಲಸ ಮಾಡಲಿದೆ. ನಮ್ಮ ಸ್ಥಾನ ಬದಲಾಗಿರಬಹುದು ಆದರೆ ಜವಾಬ್ದಾರಿ ಬದಲಾಗಿಲ್ಲ
ಪ್ರಶ್ನೆ; ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರೋಧಿ ಅಲೆ ಇದೆ. ಬಿಜೆಪಿ ಹಿಂದಿ ಪರವಾಗಿ ನಿಂತಿದೆ ಎಂಬ ಮಾತಿದ್ದು ಜನರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೀರಿ?
ರವಿ; ಅದು ಹಾಗಲ್ಲ, ಇಂಥ ವಿಚಾರಗಳು ಆಯಾ ರಾಜ್ಯದ ಮೇಲೆ ನಿರ್ಧರಿತವಾಗುತ್ತದೆ. ಜನರ ಹಿತ ಕಾಪಾಡುವುದರೊಂದಿಗೆ ದೇಶದ ಹಿತ ಕಾಪಾಡಡುವುದು ಮುಖ್ಯವಾಗುತ್ತದೆ. ಬಿಜೆಪಿ ಮೊದಲಿನಿಂದಲೂ ರಾಷ್ಟ್ರ ಮೊದಲು ಎಂಬುದನ್ನು ನಂಬಿಕೊಂಡು ಬಂದ ಪಾರ್ಟಿ, ಹಾಗಂದ ಮಾತ್ರಕ್ಕೆ ಸ್ಥಳೀಯ ಹಿತಾಸಕ್ತಿಯನ್ನು ನಿರ್ಲಕ್ಷ್ಯ ಮಾಡುವುದಿಲ್ಲ.
ನಮ್ಮ ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಲಾಗಿದೆ. ಹಾಗಾಗಿ ರಾಜ್ಯದ ಭಾಷೆ ತಿರಸ್ಕಾರ ಮಾಡಲಾಗುತ್ತಿದೆ ಎಂ ಮಾತೆ ಉದ್ಭವವಾಗುವುದಿಲ್ಲ. ತಮಿಳುನಾಡಿಗೆ ಬಂದರೆ ತಮಿಳು ಹೆಮ್ಮೆ, ಕರ್ನಾಟಕದಲ್ಲಿ ಕನ್ನಡ, ಆಂಧ್ರ ಮತ್ತು ತೆಲಂಗಾಣಕ್ಕೆ ತೆರಳಿದರೆ ತೆಲುಗು, ಕೇರಳದಲ್ಲಿ ಮಲಯಾಳಂ..ಹಾಗಾಗಿ ಭಾರತ ಜನನಿಯ ತನುಜಾತೆ.. ಎಂಬಂತೆ ಕೆಲಸ ಮಾಡಿಕೊಂಡು ಹೋಗಲಾಗುವುದು.
ಪ್ರಶ್ನೆ: ಪಾಂಡಿಚೇರಿಯಲ್ಲಿ ಪರಿಣಾಮ ಬೀರುವಂತಹ ಕೆಲಸ ಯಾವುದು ಆಗಿದೆ, ನೀವು ಕೆಲ ಕಾಲ ತಮಿಳುನಾಡು ಉಸ್ತುವಾರಿಯಾಗಿ ಇದ್ರಿ?
ರವಿ; ಮುಂದಿನ ವಾರ ಸ್ಥಳೀಯ ವಿಷಯಗಳಿಗೆ ಮೊದಲ ಆದ್ಯತೆ ಎಂಬ ವಿಚಾರದಲ್ಲಿ ಸಭೆಯೊಂದನ್ನು ಕರೆದಿದ್ದೇನೆ. ಯಾವ ವಿಚಾರ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ನಮ್ಮ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅಳೆದು ತೂಗಿ ಮುಂದಿನ ಹೆಜ್ಜೆ ಇಡುತ್ತೇವೆ.
ಪ್ರಶ್ನೆ; ತಮಿಳುನಾಡಿನಲ್ಲಿ ಬಿಜೆಪಿ ಬಂಗಾಳ ಮಾದರಿ ಅನುಸರಣೆ ಮಾಡಲು ಹೊರಟಿದೆಯೇ? ಐಪಿಎಸ್ ಅಧಿಕಾರಿಗಳ ರಾಜಕಾರಣ ಪ್ರವೇಶ ಯಾವ ಕಾರಣಕ್ಕೆ?
ರವಿ: ಹಾಗೇನಿಲ್ಲ... ಅಣ್ಣಾಮಲೈ ಕರ್ನಾಟಕದಲ್ಲಿ ಉತ್ತಮ ಹೆಸರು ಸಂಪಾದನೆ ಮಾಡಿದವರು. ಅವರು ಯುವಕರ ಕಣ್ಮಣಿಯಾಗಿ ನಿಂತಿದ್ದಾರೆ. ಪಕ್ಷ ಬಲವರ್ಧನೆಗೆ ಅವರು ಕೊಡುಗೆ ನೀಡಲಿದ್ದಾರೆ.
IAS, IPS ನಲ್ಲಿ ಕೇಳುವ ಪ್ರಶ್ನೆಗಳು ಇವು
ಪ್ರಶ್ನೆ: ತಮಿಳುನಾಡಿನಲ್ಲಿ ಬಿಜೆಪಿ ನೆಲೆಯೂರಬೇಕಾದರೆ ಯಾವುದಾದರೂ ಒಂದು ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಎಐಎಡಿಎಂಕೆ ಮತ್ತು ಡಿಎಂಕೆ ಜತೆ ಹೊಂದಾಣಿಕೆ ದಾರಿ..
ರವಿ: ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜನತಾ ದಳ ಬೆಂಬಲಿಸುತ್ತಿದ್ದವರು ನಮ್ಮ ಕೆಲಸ ಮೆಚ್ಚಿ ಬಿಜೆಪಿ ಜತೆ ನಿಂತಿದ್ದಾರೆ. ತಮಿಳುನಾಡಿನಲ್ಲಿ ನಾವೆ ಗಟ್ಟಿಯಾಗಿ ನಿಲ್ಲುತ್ತೇವೆ. ತಮಿಳುನಾಡು ಮತ್ತು ರಾಷ್ಟ್ರದ ಹಿತ ಗಮನದಲ್ಲಿ ಇಟ್ಟುಕೊಂಡಿರುತ್ತೇವೆ. ನಾವು ನಮ್ಮ ಆಲೋಚನೆ ಮತ್ತು ಆಯ್ಕೆಗಳನ್ನು ತೆರೆದಿಟ್ಟುಕೊಳ್ಳುತ್ತೇವೆ.
ಪ್ರಶ್ನೆ; ರಜನೀಕಾಂತ್ ಅವರನ್ನು ಸಹ ರಾಜಕಾರಣದ ವಿಚಾರಕ್ಕೆ ಬಂದರೆ ತಮಿಳುನಾಡಲ್ಲಿ ಹೊರಗಿನವರು ಎಂಬ ಅರ್ಥದಲ್ಲಿಯೇ ಭಾವಿಸಿದ್ದನ್ನು ಕಂಡಿದ್ದೇವೆ. ಬಿಜೆಪಿಯನ್ನು ಹೊರಗಿನವರು ಎಂದು ಪರಿಭಾವಿಸಿದರೆ?
ರವಿ: ಕೆಲವು ಜನ ಈ ರೀತಿಯ ಮಾತುಗಳನ್ನು ಆಡುತ್ತಾರೆ. ಜಯಲಲಿತಾ ತಮಿಳುನಾಡು ರಾಜಕಾರಣದ ಮುಂಚೂಣಿಗೆ ಬಂದಾಗ ಆಕೆ ಕರ್ನಾಟಕದ ಮಂಡ್ಯದವರು ಎಂದು ಹೇಳಿದ್ದರು. ಆದರೆ ಅವರು ನಾಲ್ಕು ಸಾರಿ ಸಿಎಂ ಆದರು. ಕರುಣಾನಿಧಿ ಅವರನ್ನು ತೆಲುಗು ಮನುಷ್ಯ ಎಂದು ಕರೆದರು. ಎಂಜಿಆರ್ ಗೆ ಮಲಯಾಳಿ ಪಟ್ಟ ನೀಡಿದ್ದರು. ಆದರೆ ಇವರೆಲ್ಲರೂ ತಮಿಳುನಾಡಿ ಸಿಎಂ ಆಗಿ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದರು. ಇದು ನಮ್ಮ ದೇಶದ ವಿಶೇಷ. ಕನ್ನಡದ ಹೆಸರಾಂತ ಲೇಖಕ ಡಿವಿಜಿ ಅವರ ಮಾತೃಭಾಷೆ ತಮಿಳು.. ಆದರೆ ಅವರು ಕರ್ನಾಟಕದ ಹೆಮ್ಮೆಯಾಗಿ ನಿಂತಿದ್ದಾರೆ.
ಸಿಟಿ ರವಿ ಸಂದರ್ಶನ; ಆಂಗ್ಲ ಭಾಷೆಯಲ್ಲಿಯೂ ಓದಿ