* ಜ.9ರಂದು ಮಾಜಿ ಮುಸ್ಲಿಂ ದಿನವಾಗಿ ಆಚರಣೆ* ಕೇರಳದಲ್ಲಿ ಧರ್ಮ ತೊರೆದವರಿಗೆ ಮಾಜಿ ಮುಸ್ಲಿಮರು ಸಂಘಟ
ತಿರುವನಂತಪುರಂ(ಜ.11): ಇಸ್ಲಾಂ ಧರ್ಮವನ್ನು ತೊರೆಯುವ ಮುಸ್ಲಿಮರಿಗಾಗಿ ಕೇರಳದಲ್ಲಿ ಹೊಸದಾಗಿ ಸಂಘಟನೆಯೊಂದು ಆರಂಭವಾಗಿದೆ. ಇದಕ್ಕೆ ‘ಕೇರಳದ ಮಾಜಿ ಮುಸ್ಲಿಮರು’ ಎಂದು ನಾಮಕರಣ ಮಾಡಲಾಗಿದ್ದು, ಇಸ್ಲಾಂ ಧರ್ಮದ ಆಚರಣೆಯನ್ನು ತೊರೆಯುವ ಮುಸ್ಲಿಮರಿಗೆ ಸಹಾಯ ಮಾಡಲು ಸ್ಥಾಪಿಸಲಾಗಿದೆ. ಜ.9ರಂದು ಈ ಸಂಘಟನೆಯಿಂದ ‘ಮಾಜಿ ಮುಸ್ಲಿಂ ದಿನ’ ಆಚರಣೆ ಮಾಡಲಾಗುತ್ತದೆ.
ಈ ಸಂಘಟನೆಯ ಅಧ್ಯಕ್ಷರಾಗಿರುವ ಲಿಯಾಕತ್ತಲಿ ಸಿ.ಎಂ. ಅವರು, ‘ಇದು ಭಾರತದಲ್ಲಿ ಈ ರೀತಿಯಾಗಿ ಆರಂಭವಾದ ಮೊದಲ ಸಂಘಟನೆ, ಈ ಸಂಘಟನೆಯ ಸದಸ್ಯತ್ವಕ್ಕಾಗಿ ನಾವು 10 ಜನರ ಕಾರ್ಯಕಾರಿ ಮಂಡಳಿಯನ್ನು ಸ್ಥಾಪಿಸಿದ್ದೇವೆ. ಈಗಾಗಲೇ ಇಸ್ಲಾಂ ತೊರೆದ 300 ಜನರನ್ನು ನಾವು ಗುರುತಿಸಿದ್ದೇವೆ. ಭಾರತದಲ್ಲಿ ಹಲವು ಮುಸ್ಲಿಮರು ಧರ್ಮ ತೊರೆದಿದ್ದಾರೆ. ಆದರೆ ಅದನ್ನು ಹೇಳಿಕೊಳ್ಳಲು ಭಯಪಡುತ್ತಿದ್ದಾರೆ. ಅಂತಹವರಿಗೆ ಸಹಾಯ ಮಾಡಲು ಈ ಸಂಘಟನೆ ಸ್ಥಾಪಿಸಲಾಗಿದೆ’ ಎಂದು ಹೇಳಿದ್ದಾರೆ.
2 ವರ್ಷದ ಹಿಂದೆ ಇಸ್ಲಾಂ ತೊರೆದ ಲಿಯಾಕತ್ತಲಿ, ಅಂದಿನಿಂದಲೂ ಇಸ್ಲಾಂ ತೊರೆಯುವ ಜನರಿಗೆ ಸಹಕಾರ ನೀಡುತ್ತಿದ್ದಾರೆ. ಜ.9ರಂದು ಮಾಜಿ ಮುಸ್ಲಿಂ ದಿನ ಆಚರಿಸುವ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
