ಇವಿಎಂ ಬಗ್ಗೆ ಇದ್ದ ಅನುಮಾನ ಕ್ಲಿಯರ್ ಆಗಿದೆ, ಚುನಾವಣೆ ನಿಯಂತ್ರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಇವಿಎಂಗಳ ಬಗ್ಗೆ ಇದ್ದ ಅನುಮಾನಗಳನ್ನು ಕೇಂದ್ರ ಚುನಾವಣಾ ಆಯೋಗ ಕ್ಲಿಯರ್ ಮಾಡಿದೆ. ಚುನಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಇವಿಎಂ-ವಿವಿಪ್ಯಾಟ್ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ (ಏ.24): ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಜೊತೆಗೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಬಳಸಿ ಚಲಾವಣೆಯಾದ ಮತಗಳ ಸಂಪೂರ್ಣ ಪರಿಶೀಲನೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಹೇಳಿಕೆಯನ್ನು ನೀಡಿದೆ. ಇವಿಎಂ ಬಗ್ಗೆ ಇದ್ದ ಅನುಮಾನಗಳನ್ನು ಕೇಂದ್ರ ಚುನಾವಣಾ ಆಯೋಗ ಸಂಪೂರ್ಣವಾಗಿ ಪರಿಹಾರ ಮಾಡಿದೆ. ಚುನಾವಣೆಗಳನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಹಾದ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಇವಿಎಂಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಐದು ಪ್ರಶ್ನೆಗಳಿಗೆ ಭಾರತೀಯ ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿತ್ತು. ನಾವು ಚುನಾವಣೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇನ್ನೊಂದು ಸಾಂವಿಧಾನಿಕ ಸಂಸ್ಥೆಯ ಕಾರ್ಯನಿರ್ವಹಣೆಯ ಮೇಲೆ ನಿಯಂತ್ರಣ ಹೇರಲು ನಾವು ಬಯಸೋದಿಲ್ಲ ಎಂದು ಹೇಳಿದೆ.
ನಮ್ಮ ಅನುಮಾನಗಳನ್ನು ಇಸಿಐ ಬಗೆಹರಿಸಿದೆ. ನಿಮ್ಮ ಚಿಂತನೆಯ ಪ್ರಕ್ರಿಯೆಯನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ನಾವು ಅನುಮಾನದ ಆಧಾರದ ಮೇಲೆ ಆದೇಶವನ್ನು ನೀಡಲು ಸಾಧ್ಯವಿಲ್ಲ' ಎಂದು ಹೇಳಿದೆ. ವಿಚಾರಣೆ ನಡೆಯುತ್ತಿರುವಂತೆಯೇ, ನ್ಯಾಯಮೂರ್ತಿ ಖನ್ನಾ ಅವರು, 'ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಆಧಾರದ ಮೇಲೆ ನಾವು ಅನುಮಾನಗಳನ್ನು ಬಗೆಹರಿಸಿಕೊಂಡಿದ್ದೇವೆ. ಇವಿಎಂ ವಿಚಾರವಾಗಿ ನಾವು 3-4 ಸ್ಪಷ್ಟೀಕರಣವನ್ನು ಕೇಳಲು ಮಾತ್ರ ಬಯಯಸಿದ್ದೇವೆ. ಈ ಮಾತನ್ನು ಹೇಳುವ ಮುನ್ನ ನಮಗೆ ಅನುಮಾನ ಪರಿಹಾರವಾಗಬೇಕು. ಆದ ಕಾರಣದಿಂದ ಕೆಲವೊಂದು ಸ್ಪಷ್ಟೀಕರಣವನ್ನು ನಾವು ಕೇಳಿದ್ದೆವು' ಎಂದು ಕೋರ್ಟ್ ಹೇಳಿದೆ.
ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ವಕೀಲರು, ಪಾರದರ್ಶಕತೆಗಾಗಿ ಇವಿಎಂಗಳ ಸೋರ್ಸ್ ಕೋಡ್‌ಅನ್ನು ಬಹಿರಂಗಪಡಿಸಬೇಕು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಖನ್ನಾ, ಯಾವುದೇ ಕಾರಣಕ್ಕೂ ಸೋರ್ಸ್ ಕೋಡ್‌ಅನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದಲ್ಲಿ ಇದನ್ನು ಖಂಡಿತವಾಗಿ ದುರುಪಯೋಗ ಮಾಡಿಕೊಳ್ಳಲಾಗಯತ್ತದೆ. ಅದನ್ನು ಎಂದೂ ಬಹಿರಂಗಪಡಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
ಇವಿಎಂ ಮತ್ತು ವಿವಿಪ್ಯಾಟ್ ತಾಳೆಯಾಗದ ಪ್ರಕರಣ, ಇಂದು ಸುಪ್ರೀಂ ಮಹತ್ವದ ತೀರ್ಪು
ಹೌದು ಕೆಲವೊಂದು ಸ್ಪಷ್ಟೀಕರಣ ನಮಗೆ ಬೇಕಿದ್ದವು. ವಿವಿಪ್ಯಾಟ್‌ನ ಕಮಟ್ರೋಲಿಂಗ್ ಯುನಿಟ್‌ನಲ್ಲಿ ಮೈಕ್ರೋಕಂಟ್ರೋಲರ್‌ಅನ್ನು ಸ್ಥಾಪನೆ ಮಾಡಲಾಗಿದೆಯೇ? ಎಂದು ಕೇಳಿದ್ದವು. ಅದರ ಸೂಚನೆ ಕಂಡುಬರುತ್ತಿದ್ದವು. ಕಂಟ್ರೋಲ್ ಯುನಿಟ್‌ನಲ್ಲಿ ಮೈಕ್ರೋಕಂಟ್ರೋಲರ್ ಇದೆ ಎಂದು ನಾವು ಭಾವಿಸಿದ್ದೆವು. ಆದರೆ, ಇಸಿಐ ವಿವಿಪ್ಯಾಟ್‌ಗೆ ಫ್ಲ್ಯಾಶ್ ಮೆಮೊರಿ ಇದೆ ಎಂದು ನಮಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇವಿಎಂ ಬಗ್ಗೆ ಅನುಮಾನ ಬೇಡ: ಸುಪ್ರೀಂಕೋರ್ಟ್
ಪ್ರಸ್ತುತ ಲೋಕಸಭೆ ಚುನಾವಣೆಯ ವೇಂಳೆ ಪ್ರತಿ ವಿಧಾನಸಭೆಯ ಐದು ಆಯ್ದ ಇವಿಎಂಗಳನ್ನು ವಿವಿಪ್ಯಾಟ್ ವೆರಿಫಿಕೇಶನ್ ಮಾಡಲಾಗುತ್ತಿದೆ. ಈ ತಿಂಗಳ ಆರಂಭದಲ್ಲಿ, ಆಯ್ದ ಐದು ಇವಿಎಂಗಳನ್ನು ಮಾತ್ರ ಪರಿಶೀಲಿಸುವ ಬದಲು ಚುನಾವಣೆಯಲ್ಲಿ ಎಲ್ಲಾ ವಿವಿಪ್ಯಾಟ್ ಪೇಪರ್ ಸ್ಲಿಪ್‌ಗಳನ್ನು ಎಣಿಕೆ ಮಾಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಇಸಿಐಗೆ ನೋಟಿಸ್ ನೀಡಿತ್ತು. ಇದಕ್ಕೆ ಉತ್ತರ ನೀಡಿದ್ದ ಚುನಾವಣಾ ಆಯೋಗ ಯಾವುದೇ ಕಾರಣಕ್ಕೂಇವಿಎಂಅನ್ನು ಟ್ಯಾಂಪರ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು.