ಆಸ್ಸಾಂ(ಎ.02): ದೇಶದಲ್ಲಿ ಪಂಚರಾಜ್ಯ ಚುನಾವಣೆ ಆರಂಭವಾಗಿದ್ದು ಆಸ್ಸಾಂನಲ್ಲಿ ಎರಡನೇ ಹಂತದ ಮತದಾನ ನಡೆದಾಗಿದೆ. ಇದೇ ಸಂದರ್ಭ ಆಸ್ಸಾಂನ ಪಾಥರ್ಕಾಂಡಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ರೀಷ್ಣೆಂದು ಪೌಲ್ ಕಾರಿನಲ್ಲಿ ಇವಿಎಮ್ ಯಂತ್ರವಿರುವ (ಚುನಾವಣಾ ಯಂತ್ರ) ವಿಡೀಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಸ್ಸಾಂ ಮೂಲದ ಪತ್ರಕರ್ತ ಅತಾನು ಭೂಯಾನ್, ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಮ್ ಯಂತ್ರವಿರುವ ವಿಡೀಯೋ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಟ್ವೀಟ್ ಮಾಡಿದ್ದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸತ್ತಿದ್ದು ಮೋದಿ ಟೋರ್ಚರ್‌ನಿಂದ ಎಂದ ನಟ

ಚುನಾವಣಾ ಆಯೋಗ ಈ ಘಟನೆಯ ಸಂಬಂಧ ಕಠಿಣ ಕ್ರಮ ಕೈಗೊಳ್ಳಬೇಕು. ಇವಿಎಮ್ ಯಂತ್ರಗಳ ಬಳಕೆಯ ಬಗ್ಗೆ ಎಲ್ಲ ರಾಷ್ಟ್ರೀಯ ಪಕ್ಷಗಳು ಮರು ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಬಿಜೆಪಿಯನ್ನು ಪ್ರಶ್ನಿಸುವವರನ್ನು ತುಳಿಯಲು ಬಿಜೆಪಿ ಮಾಧ್ಯಮವನ್ನು ಬಳಸಿಕೊಳ್ಳುತ್ತದೆ ಎಂದು ಆರೋಪಿಸಿದ್ದಾರೆ.

ಪ್ರತಿ ಬಾರಿ ಚುನಾವಣೆಗಳು ನಡೆದಾಗ ಈ ರೀತಿ ಖಾಸಗಿ ವಾಹನಗಳು ಇವಿಎಮ್ ಯಂತ್ರಗಳನ್ನು ಸಾಗಿಸುವ ದೃಶ್ಯಗಳು ವೈರಲ್ ಆಗುತ್ತವೆ. ಈ ಸಂಧರ್ಭದಲ್ಲಿ ಈ ಕೆಳಗಿನ ವಿಷಯಗಳು ಸಾಮಾನ್ಯವಾಗಿರುತ್ತವೆ.

1) ಈ ವಾಹನಗಳು ಬಿಜೆಪಿ ಪಕ್ಷಕ್ಕೆ ಅಥವಾ ಅವರ ಜೊತೆಗಿರುವವರಿಗೆ ಸೇರಿರುತ್ತವೆ.
2) ಈ ವಿಡೀಯೋಗಳನ್ನು ಸಣ್ಣ ಘಟನೆ ಎಂದು ಪರಿಗಣಿಸಿ ದಾರಿ ತಪ್ಪಿಸಲಾಗುತ್ತದೆ. 
3) ಈ ವಿಡೀಯೋಗಳನ್ನು ಬಿಡುಗಡೆ ಮಾಡಿದವರನ್ನು ಹರಣ ಮಾಡಲು ಬಿಜೆಪಿ ಮಾಧ್ಯಮಗಳ ಬಳಕೆ ಮಾಡುತ್ತೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

ಗುರುವಾರ ನಡೆದ ಎರಡನೇ ಹಂತದ ಮತದಾನದಲ್ಲಿ ಆಸ್ಸಾಂನ 39 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಸಂಜೆ 6 ಗಂಟೆವರೆಗೆ ಶೇಕಡಾ 73.03 ರಷ್ಟು ಮತದಾನ ನಡೆದಿದೆ. ಆದರೆ ಬಿಜೆಪಿ ಶಾಸಕನ ಕಾರಿನಲ್ಲಿ ಇವಿಎಮ್ ಯಂತ್ರ ಸಿಕ್ಕಿರುವ ವಿಡಿಯೋ ಆಸ್ಸಾಂ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.