ಸಂಭಲ್‌ ಮಸೀದಿ ಪ್ರತಿ ಹೆಜ್ಜೆಯಲ್ಲೂ ದೇವಸ್ಥಾನ ಇರುವ ಸಾಕ್ಷ್ಯ ಪತ್ತೆ: ಸಮೀಕ್ಷೆ ವರದಿಯಲ್ಲಿದೆ ವಿವರ

ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಾಮಾ ಮಸೀದಿಯ ಒಳಾಂಗಣದಲ್ಲಿ ನಡೆಸಲಾದ ಸಮೀಕ್ಷೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ವರದಿಯ ಪ್ರಕಾರ, ಮಸೀದಿಯ ಒಳಗೆ ದೇವಾಲಯವೊಂದರ ಪುರಾವೆಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.

Evidence of temple found in Shahi Jama Masjid of Sambhal Big revelation in survey report san

ನವದೆಹಲಿ (ಜ.2): ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಾಮಾ ಮಸೀದಿಯ ಒಳಾಂಗಣದಲ್ಲಿ ನಡೆಸಲಾದ ಸಮೀಕ್ಷೆಯ ವಿವರ ಒಳಗೊಂಡ ಅಡ್ವೊಕೇಟ್ ಆಯೋಗದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಸರ್ವೆ ರಿಪೋರ್ಟ್‌ನ ವಿವರಗಳು ಮಾಧ್ಯಮಗಳಿಗೂ ಸಿಕ್ಕಿವೆ. ಜಾಮಾ ಮಸೀದಿಯ ಒಳಗಡೆ ದೇವಾಲಯವೊಂದರ ಪುರಾವೆಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಮಸೀದಿಯ ಒಳಗೆ ಎರಡು ಆಲದ ಮರಗಳಿವೆ. ಸಾಮಾನ್ಯವಾಗಿ, ಆಲದ ಮರಗಳನ್ನು ಹಿಂದೂ ದೇವಾಲಯಗಳಲ್ಲಿ ಮಾತ್ರ ಪೂಜಿಸಲಾಗುತ್ತದೆ. ಅಷ್ಟೇ ಅಲ್ಲ ಮಸೀದಿಯಲ್ಲಿ ಅರ್ಧ ಒಳಗೂ ಅರ್ಧ ಹೊರಗೂ ಇರುವ ಬಾವಿಯೂ ಇದೆ. ಹೊರಭಾಗದಲ್ಲಿ ಕಾಣಿಸಿಕೊಂಡಿದ್ದ ಬಾವಿಯನ್ನು ಮುಚ್ಚಲಾಗಿದೆ. ಸಂಭಾಲ್‌ನ ಜಾಮಾ ಮಸೀದಿಯೊಳಗೆ ನಡೆಸಿದ ಸಮೀಕ್ಷೆಯ ವಕೀಲರ ಆಯೋಗದ ವರದಿಯನ್ನು ಸಿವಿಲ್ ನ್ಯಾಯಾಧೀಶ ಹಿರಿಯ ವಿಭಾಗದ ಆದಿತ್ಯ ಸಿಂಗ್ ಅವರ ಪೀಠದ ಎದುರು ಪ್ರಸ್ತುತಪಡಿಸಲಾಗಿದೆ. ಅಡ್ವೊಕೇಟ್ ಕಮಿಷನರ್ ರಮೇಶ್ ರಾಘವ್ ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ, ಈ ಸಮೀಕ್ಷಾ ವರದಿಯು ಶಾಹಿ ಜಾಮಾ ಮಸೀದಿಯಲ್ಲಿ ದೇವಾಲಯದ ಅಸ್ತಿತ್ವಕ್ಕೆ ಸಾಕಷ್ಟು ಪುರಾವೆಗಳನ್ನು ಕಂಡುಕೊಂಡಿದೆ.

ಜಾಮಾ ಮಸೀದಿಯ ಸಮೀಕ್ಷೆಯ ಮೊದಲ ದಿನ, ಅಂದರೆ 19 ನವೆಂಬರ್ 2024 ರಂದು, ಸುಮಾರು ಎರಡೂವರೆ ಗಂಟೆಗಳ ಕಾಲ ವೀಡಿಯೊಗ್ರಫಿ ಮಾಡಲಾಯಿತು. ಎರಡನೇ ದಿನ ಸುಮಾರು ಮೂರು ಗಂಟೆಗಳ ಕಾಲ ವೀಡಿಯೋಗ್ರಫಿ ಮಾಡಲಾಗಿತ್ತು. ಈ ಸಮಯದಲ್ಲಿ, ಸುಮಾರು 1200 ಫೋಟೋಗಳನ್ನೂ ತೆಗೆದುಕೊಳ್ಳಲಾಗಿದೆ. ಇದರ ಪರಿಶೀಲನೆ ಮಾಡಿದಾಗ ಮಸೀದಿಯೊಳಗೆ 50 ಕ್ಕೂ ಹೆಚ್ಚು ಹೂವಿನ ಗುರುತುಗಳು / ಕಲಾಕೃತಿಗಳು ಕಂಡುಬಂದಿವೆ.

ಅದೇ ಸಮಯದಲ್ಲಿ, ಗುಮ್ಮಟದ ಒಂದು ಭಾಗವನ್ನು ವಿರೂಪ ಮಾಡಲಾಗಿದೆ. ಹಳೆಯ ಕಟ್ಟಡವನ್ನು ಬದಲಾಯಿಸಿದ ಪುರಾವೆಗಳು ಕಂಡುಬಂದಿವೆ, ಜೊತೆಗೆ ಆ ಸ್ಥಳದಲ್ಲಿ ಹೊಸ ನಿರ್ಮಾಣದ ಪುರಾವೆಗಳು ಕಂಡುಬಂದಿವೆ. ದೇವಾಲಯದ ಆಕಾರದ ರಚನೆಯನ್ನು ಪ್ಲಾಸ್ಟರ್ ಮತ್ತು ಬಣ್ಣ ಬಳಿಯಲಾಗಿದೆ. ದೊಡ್ಡ ಗುಮ್ಮಟವಿರುವ ಮಸೀದಿಯೊಳಗೆ ಗೊಂಚಲು ತಂತಿಗೆ ಸರಪಳಿ ಕಟ್ಟಿ ನೇತು ಹಾಕಲಾಗಿದೆ. ಅಂತಹ ಸರಪಳಿಗಳನ್ನು ದೇವಾಲಯದ ಗಂಟೆಗಳನ್ನು ತೂಗಲು ಬಳಸಲಾಗುತ್ತದೆ.

ಮೂಲಗಳ ಪ್ರಕಾರ, ವಿವಾದಿತ ಸ್ಥಳದಲ್ಲಿ ಆ ಕಾಲದ ದೇವಾಲಯಗಳು ಮತ್ತು ದೇವಾಲಯಗಳಲ್ಲಿ ಬಳಸಲಾದ ಚಿಹ್ನೆಗಳು ಸಹ ಕಂಡುಬಂದಿವೆ. ದೇವಾಲಯದ ಬಾಗಿಲುಗಳು, ಕಿಟಕಿಗಳು ಮತ್ತು ಅಲಂಕೃತ ಗೋಡೆಗಳಿಗೆ ಹಳೆಯ ನಿರ್ಮಾಣವನ್ನು ಆವರಿಸಿರುವ ಪ್ಲ್ಯಾಸ್ಟೆಡ್ ಮತ್ತು ಬಣ್ಣ ಬಳಿಯಲಾಗಿದೆ.

 

Watch | ಬಿಜೆಪಿ ಸ್ಟಿಕ್ಕರ್‌ ಅಂಟಿಸಿದ ಬೊಲೆರೊ ಬೈಕ್‌ಗೆ ಡಿಕ್ಕಿ, 2 ಕಿ.ಮೀ ಎಳೆದೊಯ್ದ ಭೀಕರ ಅಪಘಾತದ ವಿಡಿಯೋ ವೈರಲ್!

ಕೋಟ್ ಗರ್ವಿ ಪ್ರದೇಶದಲ್ಲಿ ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ನವೆಂಬರ್ 19 ರಂದು ನಡೆಸಿದಾಗಿನಿಂದ ಸಂಭಲ್‌ ಪ್ರದೇಶದ ಸ್ಥಿತಿ ಉದ್ವಿಗ್ನವಾಗಿದೆ. ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ಈ ಮಸೀದಿಯನ್ನು ನಿರ್ಮಿಸಿದ ಸ್ಥಳದಲ್ಲಿ ಮೊದಲು ಹರಿಹರನಾಥ ದೇವಾಲಯ ಇತ್ತು ಎಂದು ಹೇಳಲಾಗಿದೆ. ನವೆಂಬರ್ 24 ರಂದು, ತಂಡವು ಮಸೀದಿಯ ಎರಡನೇ ಸಮೀಕ್ಷೆಗೆ ಬಂದಾಗ, ಹಿಂಸಾಚಾರ ಕೂಡ ನಡೆದಿತ್ತು. ಈ ವೇಳೆ 4 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಹಿಂಸಾಚಾರ ಪ್ರಕರಣದಲ್ಲಿ ಪೊಲೀಸ್ ಕ್ರಮ ಮುಂದುವರಿದಿದೆ.

ಸಂಭಲ್‌: ಉತ್ಕನನ ವೇಳೆ ಪುರಾತನ ಕೊಳ, ಕಾಲುವೆ ಪತ್ತೆ

Latest Videos
Follow Us:
Download App:
  • android
  • ios