ಸಂಭಲ್‌: ಉತ್ಕನನ ವೇಳೆ ಪುರಾತನ ಕೊಳ, ಕಾಲುವೆ ಪತ್ತೆ

ಸಂಭಲ್‌ನ ಚಂದೌಸಿ ಪ್ರದೇಶದಲ್ಲಿ ಉತ್ಕನನ ನಡೆಸಿದಾಗ 400 ಚದರ ಮೀಟರ್ ವಿಸ್ತೀರ್ಣದ 125-150 ವರ್ಷ ಹಳೆಯ ಬಾವಿ, ಕೊಳ, ಕಾಲುವೆ, ದೇಗುಲದ ಅವಶೇಷಗಳು ಮತ್ತು ಮುರಿದ ವಿಗ್ರಹಗಳು ಪತ್ತೆಯಾಗಿವೆ. 

Sambhal Ancient pond and canal discovered during excavation

ಸಂಭಲ್‌ (ಉತ್ತರ ಪ್ರದೇಶ): ಕೆಲ ದಿನಗಳ ಹಿಂದೆ ಮಂದಿರ ಮತ್ತು ಮಸೀದಿ ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದ ಸಂಭಲ್‌ ಪ್ರದೇಶದಲ್ಲಿ ಉತ್ಕನನ ನಡೆಸುವ ವೇಳೆ ಪುರಾತನ ಕೊಳ ಮತ್ತು ಕಾಲುವೆ ಪತ್ತೆಯಾಗಿದೆ.

 ಇಲ್ಲಿನ ಚಂದೌಸಿ ಪ್ರದೇಶದ ಲಕ್ಷ್ಮಣ್‌ ಗಂಜ್‌ ಎಂಬಲ್ಲಿ ಉತ್ಕನನ ನಡೆದಿದ್ದು, 400 ಚದರ ಮೀಟರ್‌ ವಿಸ್ತೀರ್ಣದ ಸುಮಾರು 125-150 ವರ್ಷ ಹಳೆಯ ಬಾವಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿ.13ರಂದು ಸ್ಥಳೀಯ ಪಾಲಿಕೆ ನಡೆಸಿದ ಒತ್ತುವರಿ ತೆರವು ವೇಳೆ ದೇಗುಲದ ಅವಶೇಷ ಪತ್ತೆಯಾಗಿತ್ತು. ಹೀಗಾಗಿ ಕೈಗೊಂಡಿದ್ದ ಉತ್ಕನನದ ವೇಳೆ ಕೊಳ, ಕಾಲುವೆ, ದೇಗುಲದ ಅವಶೇಷ, ಮುರಿದ ವಿಗ್ರಹಗಳು ಸಿಕ್ಕಿವೆ. ಇಲ್ಲಿ 46 ವರ್ಷಗಳ ಹಿಂದೆಯೇ ದೇಗುಲವಿತ್ತು. ಈ ದೇಗುಲವನ್ನು ಬಿಲಾರಿ ರಾಜನ ಅಜ್ಜ ಕಟ್ಟಿಸಿದ್ದಾರೆಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ದಾವೋಸ್‌ ಶೃಂಗಸಭೆಗೆ ಡಿಕೆಶಿ ಸೇರಿ ಹಲ ಗಣ್ಯರು

ನವದೆಹಲಿ: ಮುಂದಿನ ತಿಂಗಳು ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ ಶೃಂಗ ಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾಗವಹಿಸಲಿದ್ದಾರೆ. ಜೊತೆಗೆ ಭಾರತದ 100 ಕಂಪನಿಗಳ ಸಿಇಒಗಳು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಹೋಗಲಿದ್ದಾರೆ. 2025ರ ಜನವರಿಯಲ್ಲಿ ನಡೆಯಲಿರುವ 5 ದಿನಗಳ ಸಭೆಯಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣದ ಸಿಎಂ ರೇವಂತ್‌ ರೆಡ್ಡಿ ಕೂಡ ಭಾಗವಹಿಸಲಿದ್ದಾರೆ. ಜತೆಗೆ, ಕೆಲ ಕೇಂದ್ರ ಸಚಿವರೂ ತೆರಳಲಿದ್ದು, ಅವರ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.

Latest Videos
Follow Us:
Download App:
  • android
  • ios