Asianet Suvarna News Asianet Suvarna News

ಭಾರತದಲ್ಲಿ ಹುಟ್ಟಿದೋರೆಲ್ಲ ಹಿಂದೂಗಳೇ; 600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಮುಸ್ಲಿಮರೇ ಇರಲಿಲ್ಲ: ಗುಲಾಂ ನಬಿ ಆಜಾದ್

ಹಿಂದೂ ಧರ್ಮ ಅತ್ಯಂತ ಪುರಾತನ ಧರ್ಮ. ಕೇವಲ 10-20 ಮುಸ್ಲಿಮರು ಮೊಘಲ್ ಸೈನ್ಯದ ಭಾಗವಾಗಿ ಭಾರತಕ್ಕೆ ಬಂದರು, ಉಳಿದವರೆಲ್ಲ ಮತಾಂತರಗೊಂಡರು ಎಂದು ಗುಲಾಂ ನಬಿ ಆಜಾದ್‌ ಹೇಳಿದ್ದಾರೆ. ಕಾಂಗ್ರೆಸ್‌ ಮಾಜಿ ನಾಯಕನ ಹೇಳಿಕೆಯ ವಿಡಿಯೋ ವೈರಲ್‌ ಆಗಿದೆ .

everyone was born a hindu in this country hinduism the oldest religion says ghulam nabi azad ash
Author
First Published Aug 17, 2023, 10:56 AM IST

ನವದೆಹಲಿ (ಆಗಸ್ಟ್‌ 17, 2023): ಈ ದೇಶದಲ್ಲಿ ಎಲ್ಲರೂ ಹಿಂದೂಗಳಾಗಿ ಹುಟ್ಟಿದ್ದಾರೆ,  ಹಿಂದೂ ಧರ್ಮ ಅತ್ಯಂತ ಪುರಾತನ ಧರ್ಮ ಎಂದು ಕಾಂಗ್ರೆಸ್‌ ಮಾಜಿ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಈ ದೇಶದಲ್ಲಿ ಪ್ರತಿಯೊಬ್ಬರೂ "ಹಿಂದೂಗಳಾಗಿ ಹುಟ್ಟಿದ್ದಾರೆ" ಮತ್ತು ಇಸ್ಲಾಂ ಧರ್ಮವು ಇಲ್ಲಿ ಸುಮಾರು 1,500 ವರ್ಷಗಳ ಹಿಂದೆ ಕಾಲಿಟ್ಟಿದೆ. ಆದರೆ ಹಿಂದೂ ಧರ್ಮವು ಆಳವಾದ ಪ್ರಾಚೀನ ಧರ್ಮವಾಗಿದೆ ಎಂದು ಹೇಳಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಥಾತ್ರಿ ಪ್ರದೇಶದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಗುಲಾಂ ನಬಿ ಆಜಾದ್‌ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಮಾಜಿ ನಾಯಕನ ಹೇಳಿಕೆಯ ವಿಡಿಯೋ ವೈರಲ್‌ ಆಗಿದೆ. “ಹಿಂದೂ ಧರ್ಮ ಅತ್ಯಂತ ಪುರಾತನ ಧರ್ಮ. ಕೇವಲ 10-20 ಮುಸ್ಲಿಮರು ಮೊಘಲ್ ಸೈನ್ಯದ ಭಾಗವಾಗಿ ಭಾರತಕ್ಕೆ ಬಂದರು, ಉಳಿದವರೆಲ್ಲ ಮತಾಂತರಗೊಂಡರು’’ ಎಂದೂ ಕಾಂಗ್ರೆಸ್‌ ಮಾಜಿ ನಾಯಕರು ಹೇಳಿದರು.

ಇದನ್ನು ಓದಿ: ಮದ್ಯ ಪ್ರಿಯರೇ ಇಲ್ನೋಡಿ: ನಿಮ್ಮಿಷ್ಟದ ವಿಸ್ಕಿಯ ಟೇಸ್ಟ್‌ ಮತ್ತಷ್ಟು ಹೆಚ್ಚಿಸಿಕೊಳ್ಳೋಕೆ ಈ ಸ್ನ್ಯಾಕ್ಸ್‌ ಬೆಸ್ಟ್‌ ಕಾಂಬಿನೇಷನ್‌!

600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನೂ ಇರಲಿಲ್ಲ ಮತ್ತು ಹೆಚ್ಚಿನ ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದೂ ಗುಲಾಂ ನಬಿ ಆಜಾದ್ ಹೇಳಿದರು. "ಎಲ್ಲರೂ ಹಿಂದೂ ಧರ್ಮದಲ್ಲಿ ಜನಿಸಿದರು" ಎಂದು ಅವರು ಹೇಳಿದರು. ಅಲ್ಲದೆ, ನಾವೆಲ್ಲರೂ ಒಟ್ಟಾಗಿ ಹಿಂದೂ, ಮುಸ್ಲಿಂ, ರಜಪೂತ, ದಲಿತ, ಕಾಶ್ಮೀರಿ, ಗುಜ್ಜರ್, ಎಲ್ಲರೂ ಒಗ್ಗೂಡಿ ಇದನ್ನು ನಮ್ಮ ಮನೆಯಾಗಿಸಬೇಕು ಎಂದೂ ಗುಲಾಂ ನಬಿ ಆಜಾದ್‌ ಹೇಳಿದರು.

“ಇದು ನಮ್ಮ ಮನೆ, ಯಾರೂ ಹೊರಗಿನಿಂದ ಬಂದಿಲ್ಲ. ನಾವೆಲ್ಲರೂ ಈ ಮಣ್ಣಿನಲ್ಲಿ ಹುಟ್ಟಿದ್ದೇವೆ ಮತ್ತು ಇಲ್ಲಿಯೇ ಸಾಯುತ್ತೇವೆ ಎಂದೂ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ. “ನಾನು ಸಂಸತ್ತಿನಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದೇನೆ ಅದು ನಿಮಗೆ ತಲುಪಲಿಲ್ಲ. ಕೆಲವರು ಹೊರಗಿನಿಂದ ಬಂದವರು ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದು, ನಾನು ಒಳಗಿನಿಂದ ಅಥವಾ ಹೊರಗಿನಿಂದ ಬಂದಿಲ್ಲ ಎಂದು ಹೇಳಿದೆ. ಭಾರತದಲ್ಲಿ, ಜಗತ್ತಿನಲ್ಲಿ ಇಸ್ಲಾಂ ಧರ್ಮವು 1500 ವರ್ಷಗಳ ಹಿಂದೆ ಬಂದಿತು, ಹಿಂದೂ ಧರ್ಮವು ತುಂಬಾ ಪುರಾತನವಾದುದು’’ ಎಂದೂ ಅವರು ಹೇಳಿದರು.

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ: ಪೊಲೀಸ್ ಪೋರ್ಟಲ್‌ ಬಳಸ್ಕೊಂಡು ಕಾರು, ಬೈಕ್‌ ಮಾಲೀಕರಿಂದ ಹಣ ಸುಲಿಗೆ ಮಾಡ್ತಿದ್ದ ಐನಾತಿ ಕಳ್ಳ!

ಕಾಂಗ್ರೆಸ್‌ನಲ್ಲಿ ಸುಮಾರು ಐದು ದಶಕಗಳನ್ನು ಕಳೆದ ನಂತರ, 73 ವರ್ಷದ ಗುಲಾಂ ನಬಿ ಆಜಾದ್ ಕಳೆದ ವರ್ಷ ಸೆಪ್ಟೆಂಬರ್ 26 ರಂದು ತಮ್ಮದೇ ಆದ ಡೆಮಾಕ್ರಟಿಕ್ ಆಜಾದ್ ಪಕ್ಷವನ್ನು ಪ್ರಾರಂಭಿಸಿದರು. ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ, ಹಿರಿಯ ರಾಜಕಾರಣಿ ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುತ್ತಿದ್ದಾರೆ.

2013 ರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ರಾಹುಲ್ ಗಾಂಧಿಯವರು ಸಂಪೂರ್ಣ ಸಮಾಲೋಚನಾ ವ್ಯವಸ್ಥೆಯನ್ನು ಕೆಡವಿದರು ಎಂದು ಅವರು ಹೇಳಿದ್ದರು. ಅಲ್ಲದೆ, ಎಲ್ಲಾ ಹಿರಿಯ ಮತ್ತು ಅನುಭವಿ ನಾಯಕರನ್ನು ಬದಿಗಿಟ್ಟರು ಮತ್ತು ಅನನುಭವಿಗಳ ಹೊಸ ಕೂಟವು ಪಕ್ಷದ ವ್ಯವಹಾರಗಳನ್ನು ನಡೆಸಲು ಪ್ರಾರಂಭಿಸಿತು ಎಂದೂ ಕಾಂಗ್ರೆಸ್‌ ಮಾಜಿ ನಾಯಕ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ. 

ಇದನ್ನೂ ಓದಿ: ಜೀವನದ ವಿಶೇಷ ಕ್ಷಣ ನಿರಾಕರಿಸುವಂತಿಲ್ಲ: ಮನಿ ಲಾಂಡರಿಂಗ್ ಅರೋಪಿಗೆ ವಿದೇಶಕ್ಕೆ ತೆರಳಲು ಹೈಕೋರ್ಟ್‌ ಅನುಮತಿ

Follow Us:
Download App:
  • android
  • ios