Asianet Suvarna News Asianet Suvarna News

ವಾಹನ ಸವಾರರೇ ಎಚ್ಚರ: ಪೊಲೀಸ್ ಪೋರ್ಟಲ್‌ ಬಳಸ್ಕೊಂಡು ಕಾರು, ಬೈಕ್‌ ಮಾಲೀಕರಿಂದ ಹಣ ಸುಲಿಗೆ ಮಾಡ್ತಿದ್ದ ಐನಾತಿ ಕಳ್ಳ!

ವಾಹನವನ್ನು ಕದ್ದು, ಅದನ್ನು ತನ್ನ ಸ್ಥಳದಲ್ಲಿ ನಿಲ್ಲಿಸಿ ನಂತರ ಕದ್ದ ವಾಹನ/ಮಾಲೀಕರ ವಿವರಗಳನ್ನು ಜಿಪ್‌ನೆಟ್‌ನಲ್ಲಿ ಹುಡುಕಿ ಹಣ ಕೇಳುತ್ತಿದ್ದ ಎಂದು ತಿಳಿದುಬಂದಿದೆ. 

car thief uses zipnet to extort money from owners in delhi ash
Author
First Published Aug 15, 2023, 7:31 PM IST

ಹೊಸದಿಲ್ಲಿ (ಆಗಸ್ಟ್‌ 15, 2023): ಕಾರು ಕಳ್ಳರ ಲೋಕದಲ್ಲಿ ರಾಜ್ ಒಂಟಿ ಸಲಗ. ವಾಹನಗಳನ್ನು ಕದಿಯುವ ಜಾಣ್ಮೆಯನ್ನು ಹೊಂದಿದ್ದರೂ, ಅವುಗಳನ್ನು ವಿಲೇವಾರಿ ಮಾಡುವ ಜಾಲವಿರಲಿಲ್ಲ. ಈ ಹಿನ್ನೆಲೆ, ಆತ ವಾಹನ ಕಳ್ಳತನ ಮಾಡೋ ಜತೆಗೆ ಹಣ ಮಾಲಡು ಹೊಸ ಪ್ಲ್ಯಾನ್‌ ಮಾಡ್ದ. ಅದಕ್ಕೆ ಪೊಲೀಸ್‌ ಪೋರ್ಟಲ್‌ ಅನ್ನೇ ಬಳಕೆ ಮಾಡ್ಕೊಂಡ.

ಹೌದು, ಅವನು ವಾಹನವನ್ನು ಕದ್ದು, ಅದನ್ನು ತನ್ನ ಸ್ಥಳದಲ್ಲಿ ನಿಲ್ಲಿಸಿ ನಂತರ ಕದ್ದ ವಾಹನ/ಮಾಲೀಕರ ವಿವರಗಳನ್ನು ಜಿಪ್‌ನೆಟ್‌ನಲ್ಲಿ (ಜೋನಲ್ ಇಂಟಿಗ್ರೇಟೆಡ್ ಪೊಲೀಸ್ ನೆಟ್‌ವರ್ಕ್) ಹುಡುಕುತ್ತಿದ್ದನು. ನಂತರ ವಾಟ್ಸಾಪ್‌ನಲ್ಲಿ ಮಾಲೀಕರನ್ನು ಸಂಪರ್ಕಿಸಿ ತಮ್ಮ ಬೈಕ್ ಅಥವಾ ಕಾರನ್ನು ಮರಳಿ ಪಡೆಯಲು 5000-10,000 ರೂ.ಗಳ ಸಣ್ಣ ಮೊತ್ತವನ್ನು ಪಾವತಿಸುವಂತೆ ಕೇಳುತ್ತಿದ್ದ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಚಾಕೊಲೇಟ್‌ ಕೊಡ್ಸೋದಾಗಿ ಹೇಳಿ 6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ!

ಈ ಪ್ಲ್ಯಾನ್‌ನಿಂದ ರಾಜ್ ಕಳೆದ ಕೆಲವು ತಿಂಗಳುಗಳಲ್ಲಿ ಕನಿಷ್ಠ 16 ಜನರನ್ನು ಟಾರ್ಗೆಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಆದರೂ, ಇತ್ತೀಚೆಗೆ ಅವನ ಅದೃಷ್ಟ ಕೈಕೊಟ್ಟಿದೆ ಅನ್ಸುತ್ತೆ. ಅಂದರೆ, ಪೊಲೀಸರು ಅವನ ಜಾಡು ಹಿಡಿದು ಮತ್ತು ಅವನನ್ನು ಬಂಧಿಸಿದ್ದಾರೆ. ದೆಹಲಿಯ ಮೋತಿ ನಗರ, ಖಯಾಲಾ, ಪಶ್ಚಿಮ ವಿಹಾರ್, ಪ್ರಶಾಂತ್ ವಿಹಾರ್, ಗ್ರೇಟರ್ ಕೈಲಾಶ್, ವಿಕಾಸಪುರಿ, ತಿಲಕ್ ನಗರ, ನಜಾಫ್‌ಗಢ್ ಮತ್ತು ಪಹರ್‌ಗಂಜ್‌ನಲ್ಲಿ ವಾಹನಗಳು, ಹೆಚ್ಚಾಗಿ ಬೈಕ್‌ಗಳನ್ನು ಕಳ್ಳತನ ಮಾಡಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಇನ್ನು, ಆರೋಪಿ ತಾನು ಜಿಪ್‌ನೆಟ್‌ನಲ್ಲಿ ಆಗಾಗ್ಗೆ ಸರ್ಫರ್ ಆಗಿದ್ದು, ದೆಹಲಿ, ಹರಿಯಾಣ, ಚಂಡೀಗಢ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಂಚಲ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಜನರು ಕದ್ದ ವಾಹನಗಳ ಸ್ಥಿತಿಯನ್ನು ಪರಿಶೀಲಿಸಬಹುದು ಎಂದು ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ. ಹಾಗೂ, "ಬಳಕೆದಾರರು ಎಫ್‌ಐಆರ್ / ಡಿಆರ್‌ಸಿ ದಿನಾಂಕ ಶ್ರೇಣಿ ಮತ್ತು ರಾಜ್ಯವನ್ನು ಆಯ್ಕೆ ಮಾಡುವ ಮೂಲಕ ಅಥವಾ ವಾಹನದ ಪ್ರಕಾರ, ನೋಂದಣಿ ಸಂಖ್ಯೆ, ಎಂಜಿನ್ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯನ್ನು ನಮೂದಿಸುವ ಮೂಲಕ ಕದ್ದ ವಾಹನದ ಮಾಹಿತಿಯನ್ನು ಪರಿಶೀಲಿಸಬಹುದು. ಕದ್ದ ವಾಹನಗಳ ಸಂಪೂರ್ಣ ಪಟ್ಟಿಗೆ ಪ್ರವೇಶವೂ ಲಭ್ಯವಿದೆ" ಎಂದು ಆರೋಪಿ ಹೇಳಿದ ಬಗ್ಗೆ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಇದನ್ನೂ ಓದಿ: ಮಲತಾಯಿ ಅಂದ್ರೆ ಹಿಂಗೇನಾ? ಬಾಲಕನಿಗೆ ಶಾಲೆಗೆ ಹೋಗದಂತೆ ತಡೆದು ತಂದೆಯಿಂದ ದೇಹದ ಹಲವೆಡೆ ಬರೆ ಹಾಕಿಸಿದ ಪಾಪಿ!

ನೈಋತ್ಯ ದೆಹಲಿಯಿಂದ ಇಕೋ ವ್ಯಾನ್ ಕಳ್ಳತನದ ಬಗ್ಗೆ ತನಿಖೆ ಆರಂಭಿಸಿದಾಗ ರಾಜ್ ಪೊಲೀಸರ ಬಲೆಗೆ ಬಿದ್ದ ಎಂದೂ ತಿಳಿದುಬಂದಿದೆ. "ತಂಡವು ಸ್ಥಳಕ್ಕೆ ತಲುಪಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ. ದುಷ್ಕರ್ಮಿಗಳು ಅನುಸರಿಸಿದ ಮಾರ್ಗವನ್ನು ಪತ್ತೆಹಚ್ಚಲಾಗಿದೆ ಮತ್ತು ವಿಶ್ಲೇಷಿಸಲಾಗಿದೆ" ಎಂದು ಡಿಸಿಪಿ (ದ್ವಾರಕಾ) ಎಂ ಹರ್ಷವರ್ಧನ್ ಹೇಳಿದರು. 

ಈ ಮಧ್ಯೆ, ದೂರುದಾರರಿಗೆ ವಾಟ್ಸಾಪ್ ಕರೆ ಬಂದಿದ್ದು, ಅದರಲ್ಲಿ ಕರೆ ಮಾಡಿದವರು ಕಳ್ಳರ ಬಗ್ಗೆ ಮತ್ತು ತನ್ನ ಕದ್ದ ಇಕೋವನ್ನು ಎಲ್ಲಿ ನಿಲ್ಲಿಸಲಾಗಿದೆ ಎಂದು ತಿಳಿದಿದೆ ಎಂದು ಹೇಳಿದ್ದಾನೆ. ಅಲ್ಲದೆ, ದೂರುದಾರರು ಪೇಟಿಎಂ ಮೂಲಕ 5000 ರೂ. ಪಾವತಿಸಿದರೆ ಮಾಹಿತಿ ಹಂಚಿಕೊಳ್ಳಲು ಸಿದ್ಧರಾಗಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಹೆಂಡ್ತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌: ಅಸೂಯೆಯಿಂದ ಮಕ್ಕಳ ಎದುರೇ ಪತ್ನಿ ಕೊಂದ ಉದ್ಯಮಿ

ಈ ಬಗ್ಗೆ ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಆರೋಪಿ ಬಗ್ಗೆ ಕಣ್ಗಾವಲು ಇಟ್ಟಿದ್ದಾರೆ. ನಂತರ, ನಿಹಾಲ್ ವಿಹಾರ್‌ನಿಂದ ಶಂಕಿತನನ್ನು ಬಂಧಿಸಲಾಯಿತು ಮತ್ತು ಅವನಿಂದ ಕದ್ದ ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಯಿತು ಎಂದೂ ವರದಿಯಾಗಿದೆ. 

ಇದನ್ನೂ ಓದಿ: ಬಿಜೆಪಿ ನಾಯಕಿ ನಾಪತ್ತೆ ಕೇಸ್‌ಗೆ ಟ್ವಿಸ್ಟ್‌: ಕೊಲೆ ಮಾಡಿ ನದಿಗೆ ಡೆಡ್‌ಬಾಡಿ ಎಸೆದ ಪಾಪಿ ಪತಿ!

Follow Us:
Download App:
  • android
  • ios