ಕೊರೋನಾ ನಡುವೆ ಅಲೋಪತಿ-ಆರ್ಯುವೇದಾ ಪದ್ದತಿ ಜಟಾಪಟಿ ನನ್ನ ಬಂಧಿಸುವ ತಾಖತ್ತು ಅವರಪ್ಪನಿಗೂ ಇಲ್ಲ ಎಂದು ಬಾಂಬ್ ಸಿಡಿಸಿದ ಯೋಗ ಗುರು ಆಲೋಪತಿ ಮೂರ್ಖ ಪದ್ಧತಿ ಎಂದ ರಾಮ್‌ದೇವ್ ವಿರುದ್ಧ IMA ಮೋದಿಗೆ ಪತ್ರ
ನವದೆಹಲಿ(ಮೇ.27): ಕೊರೋನಾ ವೈರಸ್ ಚಿಕಿತ್ಸೆ ಸವಾಲಾಗಿ ಪರಿಣಿಮಿಸುತ್ತಿದೆ. ಇದರ ನಡುವೆ ಚಿಕಿತ್ಸೆ ಮಾರ್ಗದ ಕುರಿತು ಯುದ್ಧವೇ ನಡೆಯುತ್ತಿದೆ. ಯೋಗ ಗುರು ಬಾಬಾ ರಾಮ್‌ದೇವ್ ಆಲೋಪತಿ ಪದ್ಧತಿಯನ್ನೇ ಅಣಕಿಸಿದ್ದಾರೆ. ಅಲೋಪತಿ ಮೂರ್ಖಪದ್ದತಿ ಎಂದಿದ್ದಾರೆ. ಬಾಬಾ ಹೇಳಿಕೆಗೆ ಭಾರತೀಯ ಮೆಡಿಕಲ್ ಅಸೋಸಿಯೇಶನ್(IMA) 1,000 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಗೂ ಪ್ರಧಾನಿ ಮೋದಿಗೆ ಪತ್ರ ಬರೆದಿದೆ. ಇದರ ಬೆನ್ನಲ್ಲೇ ರಾಮ್‌ದೇವ್ ಮತ್ತೊಂದು ಬಾಂಬ್ ಸಿಡಿಸಿದ್ದು, ನನ್ನ ಬಂಧಿಸುವ ತಾಖತ್ತು ಯಾರಿಗೂ ಇಲ್ಲ ಎಂದಿದ್ದಾರೆ.
ಬಾಬಾ ರಾಮ್‍ದೇವ್‌ಗೆ 1,000 ಕೋಟಿ ರೂ. ಮಾನನಷ್ಟ ನೋಟಿಸ್: ಕ್ಷಮೆ ಕೇಳಿದ್ರೆ ಬಚಾವ್!
ಮಾನನಷ್ಟ ಮೊಕದ್ದಮೆ, ಕೇಸ್, ಬಂಧಿಸುವಂತೆ ಪತ್ರಕ್ಕೆ ಬೆದರುವುದಿಲ್ಲ. ನನ್ನ ಬಂಧಿಸುವು ತಾಖತ್ತು ಯಾರಿಗೂ ಇಲ್ಲ. ಎಲ್ಲರೂ ಸುಮ್ಮನೆ ಸದ್ದು ಮಾತ್ರ ಮಾಡುತ್ತಾರೆ ಎಂದು ರಾಮ್‌ದೇವ್ ಹೇಳಿದ್ದಾರೆ. ಇದೇ ವೇಳೆ ರಾಮ್‌ದೇವ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅರೆಸ್ಟ್, ಗಿರಫ್ತಾರ್ ಸೇರಿದಂತೆ ಹಲವು ಹ್ಯಾಶ್‌ಟ್ಯಾಗ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟ್ರೆಂಡ್ ಸೃಷ್ಟಿಸಿ ಶಬ್ದ ಮಾಡುತ್ತಾರೆ. ಅವರಿಂದ ಅಷ್ಟೇ ಸಾಧ್ಯ ಎಂದಿದ್ದಾರೆ.
ಕ್ಷಮೆ ಯಾಚಿಸಿದ್ದ 24 ಗಂಟೆಯೊಳಗೇ ಮತ್ತೆ 25 ಪ್ರಶ್ನೆ ಎಸೆದ ಬಾಬಾ ರಾಮ್‌ದೇವ್!
ಈ ಮೂಲಕ ಕ್ಷಮೆ ಯಾಚಿಸುವಂತೆ ಖಡಕ್ ಎಚ್ಚರಿ ಇದ್ದರೂ, ಕ್ಷಮೆ ಕೇಳುವ ಪ್ರಮೇಯ ರಾಮ್‌ದೇವ್ ಮಾತುಗಳಲ್ಲಿ ಕಾಣಿಸುತ್ತಿಲ್ಲ. IMA ಅಲೋಪತಿ ಮೂರ್ಖತನದ ಪದ್ಧತಿ ಹೇಳಿಕೆಗೆ ಭೇಷರತ್ ಕ್ಷಮೇ ಕೇಳುವಂತೆ ಸೂಚಿಸಿತ್ತು. ಇದಕ್ಕಾಗಿ 15 ದಿನಗಳ ಗಡುವು ನೀಡಿತ್ತು. ಆದರೆ ರಾಮ್‌ದೇವ್ ಈ ಎಚ್ಚರಿಕೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿ ಅಲೋಪತಿ ಕ್ಷೇತ್ರದ ನಿದ್ದೆಗೆಡಿಸಿದ್ದಾರೆ.
ಕೊರೋನಾ ವೈರಸ್ ಚಿಕಿತ್ಸೆಗೆ ಅಲೋಪತಿ ಬಳೆಕೆಯಿಂದ ಏನಾಗಿದೆ. ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಲಸಿಕೆ ಪಡೆದ 10 ಸಾವಿರಕ್ಕೂ ಹೆಚ್ಚು ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ. ಪ್ರಯೋಜನವಿಲ್ಲದ ಅಲೋಪತಿಯಿಂದ ಮೂರ್ಖತನ ಪದ್ಧತಿ ಎಂದು ರಾಮ್‌ದೇವ್ ಹೇಳಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿದೆ.
