English ಭಾಷೆ ಜ್ಞಾನದ ಮಾನದಂಡವಲ್ಲ; ಸಂವಹನ ಮಾಧ್ಯಮವಷ್ಟೇ: ಪ್ರಧಾನಿ ಮೋದಿ
ಹಿಂದೆ, ಇಂಗ್ಲಿಷ್ ಭಾಷೆಯ ಜ್ಞಾನವನ್ನು ಬೌದ್ಧಿಕತೆಯ ಗುರುತು ಎಂದು ಪರಿಗಣಿಸಲಾಗಿತ್ತು. ವಾಸ್ತವವಾಗಿ, ಇಂಗ್ಲಿಷ್ ಭಾಷೆ ಕೇವಲ ಸಂವಹನ ಮಾಧ್ಯಮವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್ (Gujarat) ಪ್ರವಾಸದಲ್ಲಿರುವ ಪ್ರಧಾನಿ ಮೋದಿ (PM Modi), ಆಂಗ್ಲ (English) ಭಾಷೆ ಕೇವಲ ಸಂವಹನ (Communication) ಮಾಧ್ಯಮವಾಗಿದೆಯೇ ಹೊರತು ಬುದ್ಧಿಯ (Intellect) ಮಾನದಂಡವಲ್ಲ ಎಂದು ಹೇಳಿದ್ದಾರೆ. ಬುಧವಾರ ಗಾಂಧಿನಗರ ಜಿಲ್ಲೆಯ ಅದಲಾಜ್ ಪಟ್ಟಣದಲ್ಲಿ ಗುಜರಾತ್ ಸರ್ಕಾರದ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಉಪಕ್ರಮದ ಪ್ರಾರಂಭದಲ್ಲಿ ಮೋದಿ ಬುಧವಾರ ಈ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಎಂಬಿಬಿಎಸ್ (MBBS) ವಿದ್ಯಾರ್ಥಿಗಳಿಗೆ ಹಿಂದಿ (Hindi) ಪಠ್ಯಪುಸ್ತಕಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ 3 ದಿನಗಳ ನಂತರ, ಪ್ರಧಾನಿ ಸ್ಥಳೀಯ ಭಾಷೆಗಳ ಬಳಕೆಯನ್ನು ವಿವರಿಸಿದರು. ಹಿಂದೆ, ಇಂಗ್ಲಿಷ್ ಭಾಷೆಯ ಜ್ಞಾನವನ್ನು ಬೌದ್ಧಿಕತೆಯ ಗುರುತು ಎಂದು ಪರಿಗಣಿಸಲಾಗಿತ್ತು. ವಾಸ್ತವವಾಗಿ, ಇಂಗ್ಲಿಷ್ ಭಾಷೆ ಕೇವಲ ಸಂವಹನ ಮಾಧ್ಯಮವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
"ಇಷ್ಟು ದಶಕಗಳಿಂದ, ಹಳ್ಳಿಗಳಲ್ಲಿ ಮತ್ತು ಬಡ ಕುಟುಂಬಗಳಲ್ಲಿನ ಅಸಂಖ್ಯ ಪ್ರತಿಭೆಗಳ ಪ್ರಯೋಜನವನ್ನು ದೇಶವು ಪಡೆಯಲು ಸಾಧ್ಯವಾಗಲಿಲ್ಲ. ಇಂಗ್ಲಿಷ್ ಭಾಷೆಯು ಇದಕ್ಕೆ ಅಡ್ಡಿಯಾಗಿತ್ತು’’ ಎಂದು ಪ್ರಧಾನಿ ಹೇಳಿದರು. ಆದರೆ, "ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು (New Education Policy) ದೇಶವನ್ನು ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಗೊಳಿಸಲು ಮತ್ತು ಪ್ರತಿಭೆ ಹಾಗೂ ನಾವೀನ್ಯತೆಯನ್ನು ಉತ್ತೇಜಿಸುವ ಪ್ರಯತ್ನವಾಗಿದೆ" ಎಂದು ಅವರು ಹೇಳಿದರು.
ಇದನ್ನು ಓದಿ: ಇನ್ನು Hindiಯಲ್ಲೂ MBBS ಪಾಠ: ಇಂದು ಅಮಿತ್ ಶಾ ಚಾಲನೆ
ಇತ್ತೀಚೆಗೆ ಪ್ರಾರಂಭಿಸಲಾದ 5G ಟೆಲಿಕಾಂ ಸೇವೆಯು ದೇಶದ ಶಿಕ್ಷಣ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ. "5G ಸೇವೆಯು ಸ್ಮಾರ್ಟ್ ಸೌಲಭ್ಯಗಳು, ಸ್ಮಾರ್ಟ್ ತರಗತಿಗಳು ಮತ್ತು ಸ್ಮಾರ್ಟ್ ಬೋಧನೆಗಳನ್ನು ಮೀರಿ ಹೋಗುತ್ತದೆ" ಎಂದೂ ಪ್ರಧಾನಿ ಮೋದಿ ಹೇಳಿದರು.
ಈ ವೇಳೆ, ಭಾರತದ ವಿಜ್ಞಾನಿಗಳು ಮತ್ತು ಇತರ ತಜ್ಞರ ಕೊಡುಗೆಯನ್ನು ಸ್ಮರಿಸಿದ ಮೋದಿ, “ಶಿಕ್ಷಣವು ಪ್ರಾಚೀನ ಕಾಲದಿಂದಲೂ ಭಾರತದ ಅಭಿವೃದ್ಧಿಯ ಕೇಂದ್ರವಾಗಿದೆ. ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳನ್ನು ನಿರ್ಮಿಸಿದರು ಮತ್ತು ದೊಡ್ಡ ಗ್ರಂಥಾಲಯಗಳನ್ನು ಸ್ಥಾಪಿಸಿದರು’’ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: Hindi Diwas: ''ಅಧಿಕೃತ ಭಾಷೆ ಹಿಂದಿ ದೇಶವನ್ನು ಒಗ್ಗೂಡಿಸುತ್ತದೆ'' ಎಂದ ಅಮಿತ್ ಶಾ
ಅಲ್ಲದೆ, ನಂತರ ದೇಶದ ಮೇಲೆ ಆಕ್ರಮಣದ ಸಮಯವು ಬಂದಿತು, ಮತ್ತು ಅದರೊಂದಿಗೆ ಭಾರತದ ಅನನ್ಯ ಸಂಪತ್ತನ್ನು ನಾಶಮಾಡುವ ಅಭಿಯಾನವೂ ಪ್ರಾರಂಭವಾಯಿತು. “ಶಿಕ್ಷಣದ ಮೇಲಿನ ನಮ್ಮ ಬಲವಾದ ಒತ್ತಾಯವನ್ನು ನಾವು ಕೈಬಿಟ್ಟಿಲ್ಲ. ಅದಕ್ಕಾಗಿಯೇ ಇಂದಿಗೂ ಜ್ಞಾನ ಮತ್ತು ವಿಜ್ಞಾನ ಜಗತ್ತಿನಲ್ಲಿ ಭಾರತವು ನಾವೀನ್ಯತೆಯಲ್ಲಿ ವಿಭಿನ್ನ ಗುರುತನ್ನು ಹೊಂದಿದೆ ಎಂದೂ ಪ್ರಧಾನಿ ಮೋದಿ ಹೇಳಿದರು.
ಆದರೆ, "ಸ್ವಾತಂತ್ರ್ಯದ ಅಮೃತ ಕಾಲದಲ್ಲಿ (ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿರುವ ಹಿನ್ನೆಲೆಯಲ್ಲಿ), ನಮ್ಮ ಪ್ರಾಚೀನ ಪ್ರತಿಷ್ಠೆಯನ್ನು ಮರಳಿ ಪಡೆಯಲು ನಮಗೆ ಅವಕಾಶವಿದೆ" ಎಂದೂ ಮೋದಿ ಹೇಳಿದರು. ವಿಶ್ವದಲ್ಲಿ ಶ್ರೇಷ್ಠ ಜ್ಞಾನ ಆರ್ಥಿಕತೆಯಾಗುವ ಭಾರತದ ಸಾಮರ್ಥ್ಯವನ್ನು ಪ್ರಧಾನಿ ಹೈಲೈಟ್ ಮಾಡಿದ್ದಾರೆ. "21 ನೇ ಶತಮಾನದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೆಚ್ಚಿನ ಆವಿಷ್ಕಾರಗಳನ್ನು ಭಾರತದಲ್ಲಿ ಮಾಡಲಾಗುವುದು ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ." ಎಂದೂ ಮೋದಿ ಹೇಳಿದ್ದಾರೆ.
ಈ ಮಧ್ಯೆ, ಗುಜರಾತ್‌ನ ಜುನಾಗಢದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೆಲವು ರಾಜಕೀಯ ಪಕ್ಷಗಳು ನಿರಂತರವಾಗಿ ಗುಜರಾತ್ ಅನ್ನು ಗುರಿಯಾಗಿಸಿಕೊಂಡಿವೆ. ಕೆಲವು ಪಕ್ಷಗಳು ಭಾರತ ಮತ್ತು ಪ್ರಪಂಚದಾದ್ಯಂತ "ಗುಜರಾತ್ ಮತ್ತು ಗುಜರಾತಿ ಜನರನ್ನು ನಿಂದಿಸುವ" ಮೂಲಕ ಗುಜರಾತ್‌ಗೆ ಕಾಲಿಡಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಎಎಪಿಯನ್ನು ಟೀಕಿಸಿದ್ದಾರೆ.