Nawab Malik Arrest : ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನ!
ಎನ್ ಸಿಪಿ ನಾಯಕ ನವಾಬ್ ಮಲೀಕ್ ಬಂಧನ
ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರಿಂದ ತುರ್ತು ಸಭೆ
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (MVA) ಮೈತ್ರಿಕೂಟಕ್ಕೆ ಆಘಾತ
ಮುಂಬೈ (ಫೆ.23): ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಮತ್ತು ಭೂಗತ ಜಗತ್ತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ (Money Laundering) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ನಾಯಕ (NCP leader) ಮತ್ತು ಮಹಾರಾಷ್ಟ್ರ (Maharashtra)ಸಚಿವ ನವಾಬ್ ಮಲಿಕ್ (Nawab Malik) ಅವರನ್ನು ವಿಚಾರಣೆ ನಡೆಸಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಬಂಧಿಸಿದೆ. ತನಿಖಾ ಸಂಸ್ಥೆ ಬುಧವಾರ ಬೆಳಗ್ಗೆ 8 ಗಂಟೆಯಿಂದ ನವಾಬ್ ಮಲಿಕ್ ಅವರನ್ನು ವಿಚಾರಣೆ ನಡೆಸುತ್ತಿತ್ತು. ಬಂಧನದ ನಂತರ ನವಾಬ್ ಮಲಿಕ್ ಅವರನ್ನು ಸಾಮಾನ್ಯ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. "ಲಡೆಂಗೆ ಔರ್ ಜೀತೇಂಗೆ (ಹೋರಾಟ ಮಾಡ್ತೇನೆ, ಗೆಲ್ಲುತ್ತೇನೆ)" ಎಂದು ಆಸ್ಪತ್ರೆಗೆ ಕರೆದೊಯ್ಯುವಾಗ ಸಚಿವರು ಹೇಳಿದರು.
ಮೂಲಗಳ ಪ್ರಕಾರ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಆತನ ಸಹೋದರ ಅನೀಸ್, ಇಕ್ಬಾಲ್, ಸಹಾಯಕ ಚೋಟಾ ಶಕೀಲ್ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಇಡಿ ಮುಂದೆ ಹಾಜರಾಗುವಂತೆ ನವಾಬ್ ಮಲಿಕ್‌ಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಕಳೆದ ವಾರ, ಭೂಗತ ಜಗತ್ತು ಮತ್ತು ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಂಶಗಳಿಗಾಗಿ ಇಡಿ ಮುಂಬೈನ ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸಲು ಪ್ರಾರಂಭಿಸಿತು. ದಾವೂದ್ ಇಬ್ರಾಹಿಂ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇತ್ತೀಚೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆದಿದೆ.
ದಾವೂದ್ ಇಬ್ರಾಹಿಂ ಸರ್ದಾರ್ ಶಹವಲಿ ಖಾನ್ ಮತ್ತು ಹಸೀನಾ ಪಾರ್ಕರ್ ಅವರ ಅಂಗರಕ್ಷಕ ಸಲೀಂ ಪಟೇಲ್ ಅವರ ಆಪ್ತರೊಂದಿಗೆ ನವಾಬ್ ಮಲಿಕ್ ನಡೆಸಿದ ಒಪ್ಪಂದವು ಇಡಿಯ ತನಿಖಾ ಹಂತದಲ್ಲಿದೆ. ಹಸೀನಾ ಪಾರ್ಕರ್ ದಾವೂದ್ ಇಬ್ರಾಹಿಂನ ಸಹೋದರಿ. ನವಾಬ್ ಮಲಿಕ್ ಅವರು ಸರ್ದಾರ್ ಶಹವಲಿ ಖಾನ್ ಮತ್ತು ಸಲೀಂ ಪಟೇಲ್ ಅವರಿಂದ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಕೇವಲ 30 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದರು.
ಇಡಿ ಅಧಿಕಾರಿಗಳು ಮಲಿಕ್ ಮತ್ತು ಅವರಿಗೆ ಆಪ್ತರಾಗಿರುವವರ ಇತರ ಕೆಲವು ವ್ಯವಹಾರಗಳ ಬಗ್ಗೆಯೂ ಪರಿಶೀಲಿಸುತ್ತಿದ್ದಾರೆ. ಮಲೀಕ್ ವಿರುದ್ಧ ಆರೋಪಗಳ ವಿರುದ್ಧ ಇಡಿಗೆ ಸೂಕ್ತ ಸಾಕ್ಷಿಗಳಿದ್ದು, ಬಹುಶಃ ಕ್ರಮ ಎದುರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಗಳೊಂದಿಗೆ ನವಾಬ್ ಮಲಿಕ್ ಅನ್ನು ಸಂಪರ್ಕಿಸುವ ಹಣದ ಜಾಡು ಸ್ಥಾಪಿಸಿರುವುದಾಗಿ ಇಡಿ ಹೇಳಿದೆ. ನಿರ್ದಿಷ್ಟ ರಿಯಲ್ ಎಸ್ಟೇಟ್ ಯೋಜನೆಯಲ್ಲಿ ನವಾಬ್ ಮಲಿಕ್ ಮಾಡಿದ ಬೇನಾಮಿ ಹೂಡಿಕೆಯ ವಿವರಗಳು ತಮ್ಮ ಬಳಿ ಇವೆ ಎಂದು ಇಡಿ ಹೇಳುತ್ತದೆ. ಈ ಹಿನ್ನಲೆಯಲ್ಲಿ ಇಂದು ನವಾಬ್ ಮಲಿಕ್ ಬಂಧನಕ್ಕೆ ಕೋರಲಾಗಿದೆ.
Kundalpur and Bandakpur : ಭಾರತದ ಈ ಎರಡು ನಗರ "ಪವಿತ್ರ ಪ್ರದೇಶ" ಎಂದು ಘೋಷಣೆ, ಮದ್ಯ, ಮಾಂಸ ನಿಷೇಧ!
ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಸೇರಿದಂತೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮಿತ್ರಪಕ್ಷಗಳು ನವಾಬ್ ಮಲಿಕ್ ಅವರಿಗೆ ಬೆಂಬಲವನ್ನು ನೀಡಿದ್ದು, ದ್ರದ ಬಿಜೆಪಿ ಸರ್ಕಾರವು ಮಹಾರಾಷ್ಟ್ರ ಸರ್ಕಾರವನ್ನು 'ಅಸ್ಥಿರಗೊಳಿಸಲು' ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದೆ.
ರಾಜೀನಾಮೆಗೆ ಆಗ್ರಹ: ಇಡಿಯಿಂದ ಬಂಧನಕ್ಕೊಳಗಾದ ನವಾಬ್ ಮಲಿಕ್ ಮಹಾರಾಷ್ಟ್ರ ಸಂಪುಟಕ್ಕೆ ರಾಜೀನಾಮೆ ನೀಡಬೇಕು ಎಂದು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. ಮಲಿಕ್ ರಾಜೀನಾಮೆ ನೀಡದಿದ್ದರೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ರಾಜಸ್ತಾನದಲ್ಲಿ ಕಚೋರಿಗಾಗಿ ರೈಲು ನಿಲ್ಲಿಸಿದ ಚಾಲಕ....
ಎನ್ ಸಿಪಿ ಸಭೆ ಕರೆದ ಶರದ್ ಪವಾರ್: ನವಾಬ್ ಮಲಿಕ್ ಬಂಧನದ ವಿಷಯವಾಗಿ ಚರ್ಚಿಸಲು ಇಂದು ಸಂಜೆ 5 ಗಂಟೆಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಎನ್‌ಸಿಪಿಯ ಇತರ ಹಿರಿಯ ನಾಯಕರನ್ನು ಭೇಟಿಯಾಗಲಿದ್ದಾರೆ. ಮಹಾರಾಷ್ಟ್ರ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡುವಂತೆ ಪವಾರ್ ಮಲಿಕ್ ಅವರನ್ನು ಕೇಳಬಹುದು ಎಂದು ಮೂಲಗಳು ತಿಳಿಸಿವೆ. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, ನವಾಬ್ ಮಲಿಕ್ ಅವರ ಬಂಧನ ಸೇಡಿನ ರಾಜಕಾರಣದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ. ಇಡಿ ಕೇಂದ್ರದ ರಾಜಕೀಯ ಶಕ್ತಿಗಳ ಇಚ್ಛೆಯಂತೆ ಕೆಲಸ ಮಾಡುತ್ತಿದೆ ಮತ್ತು ಇದು ಫೆಡರಲ್ ರಚನೆ, ಪ್ರಜಾಪ್ರಭುತ್ವದ ಮಾನದಂಡಗಳು ಮತ್ತು ಈ ದೇಶದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.