ನಾವು ಯಾವುದೇ ಗೌಪ್ಯ ದಾಖಲೆಗಳನ್ನು ಅಥವಾ ಸೀಲ್ ಆಗಿರುವ ಕವರ್‌ಗಳನ್ನು ತೆಗೆದುಕೊಳ್ಳುವುದಿಲ್ಲ, ಮತ್ತು ಇದಕ್ಕೆ ನಾನು ವೈಯಕ್ತಿಕವಾಗಿ ವ್ಯತಿರಿಕ್ತನಾಗಿದ್ದೇನೆ. ನ್ಯಾಯಾಲಯದಲ್ಲಿ ಪಾರದರ್ಶಕತೆ ಇರಬೇಕು. ಇದು ಆದೇಶಗಳನ್ನು ಅನುಷ್ಠಾನಗೊಳಿಸುವ ವಿಚಾರ ಆಗಿದ್ದು, ಇಲ್ಲಿ ಗೌಪ್ಯತೆಯೇನು?" ಎಂದು ಡಿ.ವೈ. ಚಂದ್ರಚೂಡ್ ಪ್ರಶ್ನೆ ಮಾಡಿದ್ದಾರೆ.
ಹೊಸದಿಲ್ಲಿ (ಮಾರ್ಚ್ 20, 2023): ಸುಪ್ರಿಂಕೋರ್ಟ್‌ಗೆ ದಾಖಲೆಗಳನ್ನು ನೀಡಲು ಕೇಂದ್ರ ಸರ್ಕಾರ ಬಳಸುವ ಮುಚ್ಚಿದ ಲಕೋಟೆ ಅಥವಾ ಗೌಪ್ಯ ದಾಖಲೆಗಳ ವ್ಯವಹಾರದ ವಿರುದ್ಧ ಸುಪ್ರೀಂಕೋರ್ಟ್ ಕಿಡಿ ಕಾರಿದೆ. ಒಂದು ಶ್ರೇಣಿ ಒಂದು ಪಿಂಚಣಿ (ಒಆರ್‌ಒಪಿ) ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಈ ಟೀಕೆ ಮಾಡಿದ್ದಾರೆ. ಪಿಂಚಣಿ ಪಾವತಿ ಕುರಿತು ರಕ್ಷಣಾ ಸಚಿವಾಲಯದ ನಿರ್ಧಾರವನ್ನು ಭಾರತದ ಅಟಾರ್ನಿ ಜನರಲ್ ಮುಚ್ಚಿದ ಲಕೋಟೆಯಲ್ಲಿ ತಿಳಿಸಿದ್ದರು. ಇದನ್ನು ನ್ಯಾಯಮೂರ್ತಿಗಳಿಗೆ ನೀಡಲು ಮುಂದಾದಾಗ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದು, ಅದನ್ನು ಓದಲು ಅಥವಾ ವಾಪಸ್ ತೆಗೆದುಕೊಳ್ಳುವಂತೆ ಸರ್ಕಾರದ ಉನ್ನತ ವಕೀಲರಿಗೆ ಸೂಚಿಸಿದ್ದಾರೆ.
ಅಲ್ಲದೆ, "ನಾವು ಯಾವುದೇ ಗೌಪ್ಯ ದಾಖಲೆಗಳನ್ನು ಅಥವಾ ಸೀಲ್ ಆಗಿರುವ ಕವರ್‌ಗಳನ್ನು ತೆಗೆದುಕೊಳ್ಳುವುದಿಲ್ಲ, ಮತ್ತು ಇದಕ್ಕೆ ನಾನು ವೈಯಕ್ತಿಕವಾಗಿ ವ್ಯತಿರಿಕ್ತನಾಗಿದ್ದೇನೆ. ನ್ಯಾಯಾಲಯದಲ್ಲಿ ಪಾರದರ್ಶಕತೆ ಇರಬೇಕು. ಇದು ಆದೇಶಗಳನ್ನು ಅನುಷ್ಠಾನಗೊಳಿಸುವ ವಿಚಾರ ಆಗಿದ್ದು, ಇಲ್ಲಿ ಗೌಪ್ಯತೆಯೇನು?" ಎಂದು ಡಿ.ವೈ. ಚಂದ್ರಚೂಡ್ ಹೇಳಿದ್ದು, ಅಲ್ಲದೆ, ತಾವು "ಮುಚ್ಚಿದ ಕವರ್ ವ್ಯವಹಾರ" ವನ್ನು ಕೊನೆಗೊಳಿಸಲು ಬಯಸುತ್ತೇನೆ ಎಂದೂ ಹೇಳಿದರು.
ಇದನ್ನು ಓದಿ: ಮುಚ್ಚಿದ ಲಕೋಟೆಯಲ್ಲಿ ತಜ್ಞರ ಹೆಸರು: ಕೇಂದ್ರ ಸರ್ಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್ ತಿರಸ್ಕಾರ
ಹಾಗೂ, ಸುಪ್ರೀಂ ಕೋರ್ಟ್ ಇದನ್ನು ಅನುಸರಿಸಿದರೆ, ಹೈಕೋರ್ಟ್‌ಗಳು ಸಹ ಇದನ್ನೇ ಅನುಸರಿಸುತ್ತವೆ ಎಂದು ಅವರು ಅಟಾರ್ನಿ ಜನರಲ್‌ಗೆ ತಿಳಿಸಿದರು. ಬಳಿಕ, ಸೀಲ್ ಮಾಡಿದ ಕವರ್‌ಗಳನ್ನು ಇತ್ಯರ್ಥಪಡಿಸಿದ ನ್ಯಾಯಾಂಗ ತತ್ವಗಳಿಗೆ ತಾವು 'ಸಂಪೂರ್ಣವಾಗಿ ವಿರುದ್ಧ' ಎಂದೂ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ. "ಮೂಲದ ಬಗ್ಗೆ ಅಥವಾ ಇನ್ನೊಬ್ಬರ ಜೀವಕ್ಕೆ ಅಪಾಯವನ್ನುಂಟುಮಾಡಿದಾಗ ಮಾತ್ರ ಮುಚ್ಚಿದ ಲಕೋಟೆಯ ಬಳಕೆಯನ್ನು ಆಶ್ರಯಿಸಬಹುದು" ಎಂದೂ ಡಿ.ವೈ ಚಂದ್ರಚೂಡ್ ಹೇಳಿದರು.
ಈ ಮಧ್ಯೆ, ಈ ಪ್ರಕರಣದ ವಿಚಾರಣೆ ಕುರಿತು ಮಾತನಾಡಿದ ಸುಪ್ರೀಂಕೋರ್ಟ್ ಸಿಜೆಐ, ಮಾಜಿ ಸೈನಿಕರಿಗೆ OROP ಬಾಕಿ ಪಾವತಿಯಲ್ಲಿ ಸರ್ಕಾರದ ತೊಂದರೆಗಳನ್ನು ನ್ಯಾಯಾಲಯವು ಗಮನಿಸುತ್ತದೆ, ಆದರೆ ಕ್ರಮದ ಯೋಜನೆಯನ್ನು ತಿಳಿದುಕೊಳ್ಳಬೇಕು ಎಂದೂ ಹೇಳಿದರು.
ಇದನ್ನೂ ಓದಿ: ಉದ್ಧವ್ ಠಾಕ್ರೆ ವಿಶ್ವಾಸಮತಕ್ಕೆ ಸೂಚಿಸಿದ ಗೌರ್ನರ್ ಬಗ್ಗೆ ಸುಪ್ರೀಂ ಕಿಡಿ: ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದ ಕೋರ್ಟ್
ನಂತರ ಅಟಾರ್ನಿ ಜನರಲ್ ತಾವು ಮುಚ್ಚಿದ ಲಕೋಟೆಯಲ್ಲಿ ನೀಡಲು ಹೋಗಿದ್ದ ವರದಿಯನ್ನು ಓದಿ ಹೇಳಿದರು. "ಬಜೆಟ್ ವೆಚ್ಚವು ಈ ಬೃಹತ್ ವೆಚ್ಚವನ್ನು ಒಂದೇ ಬಾರಿಗೆ ಪೂರೈಸಲು ಸಾಧ್ಯವಾಗುವುದಿಲ್ಲ. ಸಂಪನ್ಮೂಲವು ಸೀಮಿತವಾಗಿದೆ ಮತ್ತು ವೆಚ್ಚವನ್ನು ನಿಯಂತ್ರಿಸುವ ಅಗತ್ಯವಿದೆ. ಹಣಕಾಸು ಸಚಿವಾಲಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದ್ದು ಮತ್ತು ಈ ವೆಚ್ಚವನ್ನು ಒಂದೇ ಬಾರಿಗೆ ಪೂರೈಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ" ಎಂದೂ ಅವರು ಹೇಳಿದರು.
ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್ ನರಸಿಂಹ ಹಾಗೂ ಜೆ.ಬಿ ಪರ್ದಿವಾಲಾ ಅವರ ತ್ರಿಸದಸ್ಯ ಪೀಠವು ಪ್ರಸ್ತುತ ಭಾರತೀಯ ಮಾಜಿ ಸೈನಿಕ ಚಳವಳಿಯ (ಐಇಎಸ್‌ಎಂ) ಒಆರ್‌ಒಪಿ ಬಾಕಿ ಪಾವತಿಗೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ. ಮಾರ್ಚ್ 13 ರಂದು ಸರ್ವೋಚ್ಚ ನ್ಯಾಯಾಲಯವು "ಏಕಪಕ್ಷೀಯವಾಗಿ" ನಾಲ್ಕು ಕಂತುಗಳಲ್ಲಿ OROP ಬಾಕಿಗಳನ್ನು ಪಾವತಿಸಲು ನಿರ್ಧರಿಸಿದ್ದಕ್ಕಾಗಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ರಕ್ಷಣಾ ಸಚಿವಾಲಯವು ಇತ್ತೀಚೆಗೆ ಉನ್ನತ ನ್ಯಾಯಾಲಯದಲ್ಲಿ ಅಫಿಡವಿಟ್ ಮತ್ತು ಅನುಸರಣೆ ಟಿಪ್ಪಣಿಯನ್ನು ಸಲ್ಲಿಸಿದ್ದು, 2019-22 ವರ್ಷಗಳಲ್ಲಿ ಮಾಜಿ ಸೈನಿಕರಿಗೆ ₹ 28,000 ಕೋಟಿಗಳ ಬಾಕಿ ಪಾವತಿಗೆ ಸಮಯ ವೇಳಾಪಟ್ಟಿಯನ್ನು ನೀಡಿದೆ.
ಇದನ್ನೂ ಓದಿ: ಆಂಧ್ರದಿಂದ ಮತ್ತೆ ಕ್ಯಾತೆ..! ಭದ್ರಾ ಮೇಲ್ದಂಡೆ ಯೋಜನೆಗೆ ತಡೆ ನೀಡಲು ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ
