ಕರ್ನಾಟಕ ಕೈ ತಪ್ಪಿದ ಎಲಾನ್‌ ಮಸ್ಕ್‌ರ ಟೆಸ್ಲಾ ಕಾರು ಘಟಕ ಗುಜರಾತ್‌ ಪಾಲು?

ಬಹುನಿರೀಕ್ಷಿತ, ವಿಶ್ವದ ನಂ.1 ಶ್ರೀಮಂತ, ಅಮೆರಿಕ ಉದ್ಯಮಿ ಎಲಾನ್‌ ಮಸ್ಕ್‌ರ ಎಲೆಕ್ಟ್ರಿಕ್‌ ಕಾರು ಕಂಪನಿಯಾದ ಟೆಸ್ಲಾ ಭಾರತದಲ್ಲಿ ತನ್ನ ಘಟಕವನ್ನು ಗುಜರಾತ್‌ನಲ್ಲಿ ತೆರೆಯುವುದು ಬಹುತೇಕ ಅಂತಿಮವಾಗಿದೆ ಎಂದು ವರದಿಗಳು ತಿಳಿಸಿವೆ.

Elon Musks Tesla car unit will start in Gujarat that fell out of Karnatakas hands akb

ಅಹ್ಮದಾಬಾದ್‌: ಬಹುನಿರೀಕ್ಷಿತ, ವಿಶ್ವದ ನಂ.1 ಶ್ರೀಮಂತ, ಅಮೆರಿಕ ಉದ್ಯಮಿ ಎಲಾನ್‌ ಮಸ್ಕ್‌ರ ಎಲೆಕ್ಟ್ರಿಕ್‌ ಕಾರು ಕಂಪನಿಯಾದ ಟೆಸ್ಲಾ ಭಾರತದಲ್ಲಿ ತನ್ನ ಘಟಕವನ್ನು ಗುಜರಾತ್‌ನಲ್ಲಿ ತೆರೆಯುವುದು ಬಹುತೇಕ ಅಂತಿಮವಾಗಿದೆ ಎಂದು ವರದಿಗಳು ತಿಳಿಸಿವೆ.

ಜನವರಿಯಲ್ಲಿ ಜರುಗಲಿರುವ ವೈಬ್ರಂಟ್‌ ಗುಜರಾತ್‌ ಸಮಾವೇಶದಲ್ಲಿ ಈ ಕುರಿತು ಅಧಿಕೃತ ಘೋಷಣೆಯಾಗಲಿದೆ ಎನ್ನಲಾಗಿದೆ. ವಿಶೇಷವೆಂದರೆ ಕಳೆದ ಜನವರಿ ತಿಂಗಳಲ್ಲಿ ಟೆಸ್ಲಾ ಕಂಪನಿಯು, ಟೆಸ್ಲಾ ಇಂಡಿಯಾ ಮೋಟಾರ್ಸ್‌ ಆ್ಯಂಡ್‌ ಎನರ್ಜಿ ಹೆಸರಲ್ಲಿ ಬೆಂಗಳೂರಿನಲ್ಲಿ ಕಂಪನಿ ಹೆಸರು ನೊಂದಾಯಿಸಿತ್ತು.

ಸ್ಥಳೀಯ ಉತ್ಪಾದನೆಯಿಂದ ಟೆಸ್ಲಾಗೆ ಸಾಕಷ್ಟು ಲಾಭ; ನಿತಿನ್ ಗಡ್ಕರಿ

ಟೆಸ್ಲಾ ಕಂಪನಿಯು ಬ್ಯಾಟರಿ ಚಾಲಿತ ವಾಹನಗಳ ಉತ್ಪಾದಕ ಕಂಪನಿಯಾಗಿದ್ದು, ಭಾರತದಲ್ಲಿ ಗುಜರಾತ್‌ನ ಸಾನಂದ್‌, ಬೆಚರಾಜಿ ಅಥವಾ ಧೋಲೇರಾದಲ್ಲಿ ಘಟಕ ಸ್ಥಾಪಿಸುವ ಸಾಧ್ಯತೆ ಇದೆ. ಗುಜರಾತ್‌ ಮಾರುತಿ ಸುಜುಕಿ ಸೇರಿದಂತೆ ಹಲವು ಆಟೋಮೊಬೈಲ್‌ ಕಂಪನಿಗಳು ಇಲ್ಲಿ ಉತ್ಪಾದಕ ಘಟಕಗಳನ್ನು ಹೊಂದಿದ್ದು, ಟೆಸ್ಲಾ ಕಂಪನಿಯೂ ಸಹ ಕಾಂಡ್ಲಾ ಅಂತಾರಾಷ್ಟ್ರೀಯ ಬಂದರಿಗೆ ಸಮೀಪವಿರುವ ಸಾನಂದ್‌ ಬಳಿ ಉತ್ಪಾದಕ ಘಟಕ ತೆರೆಯಲು ಒಲವು ತೋರಿಸಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಕರ್ನಾಟಕವೂ ಸೇರಿದಂತೆ ಟೆಸ್ಲಾ ಕಂಪನಿಯು ಉತ್ಪಾದಕ ಘಟಕಗಳನ್ನು ತೆರೆಯಲು ಹಲವು ರಾಜ್ಯಗಳಲ್ಲಿ ಸಮೀಕ್ಷೆಗಳನ್ನು ನಡೆಸಿತ್ತು.

Tesla Autopilot Crash: ಸ್ವಯಂಚಾಲಿತ ಟೆಸ್ಲಾ ಕಾರಿನ ಅಪಘಾತ: ವಿಡಿಯೋ ವೈರಲ್

Latest Videos
Follow Us:
Download App:
  • android
  • ios