ಸ್ಥಳೀಯ ಉತ್ಪಾದನೆಯಿಂದ ಟೆಸ್ಲಾಗೆ ಸಾಕಷ್ಟು ಲಾಭ; ನಿತಿನ್ ಗಡ್ಕರಿ

ತನ್ನ ಉತ್ಪಾದನೆಯನ್ನು ಭಾರತಕ್ಕೂ ವಿಸ್ತರಿಸುವ ಮೂಲಕ ಟೆಸ್ಲಾ  ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Tesla can benifit by manufacturing in India Nitin Gadkari

ಪಾಶ್ಚಿಮಾತ್ಯ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ  (Electrci vehicle) ಕ್ರಾಂತಿ ಹುಟ್ಟುಹಾಕಿದ ಎಲೆಕ್ಟ್ರಿಕ್ ವಾಹನ ದೈತ್ಯ ಟೆಸ್ಲಾ (Tesla inc.) ತನ್ನ ಉತ್ಪಾದನೆಯನ್ನು ಭಾರತಕ್ಕೂ ವಿಸ್ತರಿಸುವ ಮೂಲಕ  ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ದೇಶದಲ್ಲಿ ಪೆಟ್ರೋಲ್ ವಾಹನಗಳ ಬೆಲೆಗಿಂತ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಬೆಲೆಗಳು ಕಡಿಮೆಯಾಗುವ ದಿನಗಳು ಬಹಳ ದೂರವಿಲ್ಲ ಎಂದರು.

ಇದರ ಬೆನ್ನಲ್ಲೇ, ಟೆಸ್ಲಾ ತನ್ನ ಇವಿ(EV)ಗಳನ್ನು ಭಾರತದಲ್ಲಿ ತಯಾರಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಕಂಪನಿಯ ಚೀನಾದಿಂದ ಕಾರುಗಳ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಹಲವು ಬಾರಿ ಎಲೆಕ್ಟ್ರಿಕ್ ಕಾರುಗಳನ್ನು ಆಮದು ಮಾಡಿಕೊಳ್ಳಲು ತೆರಿಗೆ ವಿನಾಯಿತಿ ಕೋರಿದ್ದ ಎಲೋನ್ ಮಸ್ಕ್ನ ಟೆಸ್ಲಾ ಇಂಕ್ನ ಬೇಡಿಕೆಯನ್ನು ಭಾರತ ತಿರಸ್ಕರಿಸಿತ್ತು. ಆದರೆ, ಈಗಾಗಲೇ ಭಾಗಶಃ-ನಿರ್ಮಿತ ವಾಹನಗಳನ್ನು ತರಲು ಮತ್ತು ಕಡಿಮೆ ದರದಲ್ಲಿ ಸ್ಥಳೀಯವಾಗಿ ಜೋಡಿಸಲು ಅನುಮತಿಸುವುದಾಗಿ ಸರ್ಕಾರ ಹೇಳಿದೆ.

ರೈಸಿನಾ ಡೈಲಾಗ್ ಸಮ್ಮೇಳನದಲ್ಲಿ ಈ ಕುರಿತು ಪ್ರತಿಕ್ರಯಿಸಿದ ನಿತಿನ್ ಗಡ್ಕರಿ, ಎಲಾನ್ ಮಸ್ಕ್ (ಟೆಸ್ಲಾ ಸಿಇಒ-Tesla CDO) ಭಾರತದಲ್ಲಿ ತಯಾರಿಸಲು ಸಿದ್ಧರಾಗಿದ್ದರೆ ಯಾವುದೇ ಸಮಸ್ಯೆ ಇಲ್ಲ . ಭಾರತಕ್ಕೆ ಬನ್ನಿ, ಉತ್ಪಾದನೆಯನ್ನು ಪ್ರಾರಂಭಿಸಿ. ಭಾರತವು ದೊಡ್ಡ ಮಾರುಕಟ್ಟೆಯಾಗಿದೆ. ಅವರು ಭಾರತದಿಂದ ರಫ್ತು ಮಾಡಬಹುದು ಎಂದರು.
ಪ್ರಸ್ತುತ, ಸಂಪೂರ್ಣ ನಿರ್ಮಿತ ವಾಹನ  (CBUs) ಆಮದು ಮಾಡಿಕೊಳ್ಳುವ ಕಾರುಗಳು ಇಂಜಿನ್ ಗಾತ್ರ ಮತ್ತು ವೆಚ್ಚ, ವಿಮೆ ಮತ್ತು ಸರಕು ಸಾಗಣೆ (CIF) ಮೌಲ್ಯವನ್ನು ಅವಲಂಬಿಸಿ 60-100% ವರೆಗಿನ ಕಸ್ಟಮ್ಸ್ ಸುಂಕ ಪಾವತಿಸಬೇಕಾಗುತ್ತದೆ.

ಆದರೆ, ಕೇಂದ್ರ ಸರ್ಕಾರ ಟೆಸ್ಲಾಗೆ ಸ್ಥಳೀಯವಾಗಿ ಉತ್ಪಾದಿಸಲು ಉತ್ತೇಜನ ನೀಡುತ್ತಿದೆ. ಆದರೆ, ಭಾರತ ಆಮದು ಮಾಡಿಕೊಂಡ EV ಗಳ ಮೇಲೆ 100% ರಷ್ಟು ಹೆಚ್ಚಿನ ತೆರಿಗೆಗಳನ್ನು ಕಡಿತಗೊಳಿಸಬೇಕು ಎಂಬುದು ಟೆಸ್ಲಾ ಬೇಡಿಕೆಯಾಗಿದೆ. ಕಂಪನಿಯು ಮೊದಲು ಬೇರೆಡೆ ನಿರ್ಮಿಸಲಾದ ವಾಹನಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಭಾರತದಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.

ಈ ವರ್ಷದ ಆರ್ಥಿಕ ಬಜೆಟ್ನಲ್ಲಿ ಕೂಡ ಕೇಂದ್ರ ಸರ್ಕಾರ ಮಾಡಿಕೊಂಡ ವಾಹನಗಳಿಗೆ ಯಾವುದೇ ತೆರಿಗೆ ವಿನಾಯಿತಿಗಳ ಪ್ರಸ್ತಾಪವನ್ನು ಉಲ್ಲೇಖಿಸಿಲ್ಲ. ಆದರೆ, ದೇಶದ ಆರ್ಥಿಕ ರಾಜಧಾನಿ ಮಹಾರಾಷ್ಟ್ರ ಮಾತ್ರ ಟೆಸ್ಲಾ  ಬೇಡಿಕೆಗಳನ್ನು ಸಾರ್ವಜನಿಕವಾಗಿ ಬೆಂಬಲಿಸಿದೆ.

ಇದನ್ನೂ ಓದಿ: 5000 ಕೋಟಿ ರೂ. ಮೌಲ್ಯದ ಇವಿ ಬಸ್ ಟೆಂಡರ್ ಪಡೆದುಕೊಂಡ ಟಾಟಾ ಮೋಟಾರ್ಸ್

ಹ್ಯುಂಡೈ ಮೋಟಾರ್ ಕಂ. (Hyundai Motor Co.) ಮತ್ತು ಸುಜುಕಿ ಮೋಟಾರ್ ಕಾರ್ಪೊರೇಷನ್ನ (Suzuki Motor Corporation) ಸ್ಥಳೀಯ ಘಟಕಗಳು ತಯಾರಿಸಿದ ಅಗ್ಗದ, ಪೆಟ್ರೋಲ್ ಮತ್ತು ಡೀಸೆಲ್-ಚಾಲಿತ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಇನ್ನೂ ಪ್ರಾಬಲ್ಯ ಹೊಂದಿವೆ, ಎಲೆಕ್ಟ್ರಿಕ್ ವಾಹನಗಳು ಒಟ್ಟು ಮಾರಾಟದ ಶೇ.1 ಕ್ಕಿಂತ ಕಡಿಮೆಯಿವೆ. 

2019 ರ ಆರಂಭದಲ್ಲಿ ಟೆಸ್ಲಾ ಮೊದಲ ಬಾರಿಗೆ ಭಾರತವನ್ನು ಪ್ರವೇಶಿಸುವ ನಿರ್ದಿಷ್ಟ ಉದ್ದೇಶವನ್ನು ಬಹಿರಂಗಪಡಿಸಿತ್ತು. ಆದರೆ ಸ್ಥಳೀಯ ನಿಯಮಗಳು ಆಮದು ಪ್ರಕ್ರಿಯೆಗೆ ತಡೆಯಾಗುತ್ತಿದೆ ಎಂದು ಮಸ್ಕ್ ಆರೋಪಿಸಿದ್ದರು. ಏಕೆಂದರೆ ಹೆಚ್ಚಿನ ಸುಂಕಗಳ ಕಾರಣದಿಂದ ಟೆಸ್ಲಾ ಭಾರತದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಬೇಕಿತ್ತು. 

ಇದನ್ನೂ ಓದಿ: ಇ-ವಾಹನ ಸ್ಫೋಟ: ಬ್ಯಾಟರಿ ಸ್ಫೋಟಕ್ಕೆ ತಾಪಮಾನ ಏರಿಕೆ ಕಾರಣ, ಗಡ್ಕರಿ ತೀವ್ರ ಆತಂಕ

ಈಗ ಸರ್ಕಾರ, ದೇಶದಲ್ಲಿ ಚೀನಾ ನಿರ್ಮಿತ ಕಾರುಗಳನ್ನು ಮಾರಾಟ ಮಾಡುವುದನ್ನು ತಪ್ಪಿಸಿ ಮತ್ತು ಸ್ಥಳೀಯ ಕಾರ್ಖಾನೆಯಿಂದ ವಾಹನಗಳನ್ನು ತಯಾರಿಸಲು, ಮಾರಾಟ ಮಾಡಲು ಮತ್ತು ರಫ್ತು ಮಾಡಲು ವಾಹನ ತಯಾರಕರಿಗೆ ಸಲಹೆ ನೀಡುತ್ತಿದೆ. ಟೆಸ್ಲಾ ಸದ್ಯ ಅಮೆರಿಕದಲ್ಲಿ ನಂ.1 ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ.

Latest Videos
Follow Us:
Download App:
  • android
  • ios