ಸಾಮಾಜಿಕ ಜಾಲತಾಣದಲ್ಲಿ ಕಾಡಾನೆಯ ಥ್ಯಾಂಕ್ಯೂ ವೈರಲ್ ಎಲ್ಲಾ ಕಾಡಾನೆ ರಸ್ತೆ ದಾಟಿದ ಬಳಿಕ ಕೊನೆಗೆ ಧನ್ಯವಾದ ಸರ್ಪ್ರೈಸ್ ರಸ್ತೆ ದಾಟಲು ನೆರವಾದ ಎಲ್ಲರಿಗೂ ಸೊಂಡಿಲ ಎತ್ತಿ ಧನ್ಯವಾದ ಹೇಳಿದ ಆನೆ

ಬೆಂಗಳೂರು(ಜೂ.03): ಕಾಡಾನೆಯನ್ನು ಭಯಪಡಿಸುವ, ತೊಂದರೆ ಪಡಿಸುವ ಗೋಜಿಗೆ ಹೋಗದಿದ್ದರೆ, ಆನೆ ಏನೂ ಮಾಡುವುದಿಲ್ಲ ಅನ್ನೋ ಮಾತಿದೆ. ಈ ಮಾತನ್ನು ಸಾಬೀತು ಪಡಿಸುವ ಹಾಗೂ ಅಚ್ಚರಿಪಡಿಸುವ ಘಟನೆಯೊಂದು ನಡೆದಿದೆ. ಹೌದು, ರಸ್ತೆ ದಾಟಲು ನೆರವು ನೀಡಿದ ವಾಹನ ಸವಾರರಿಗೆ ಕಾಡಾನೆಯೊಂದು ಕೊನೆಯ ಧನ್ಯವಾದ ಹೇಳಿದ ಅಪರೂಪದ ಘಟನೆ ನಡೆದಿದೆ.

 ಕಾಡಿನ ನಡುವಿನ, ಕಾಡಂಚಿನ ರಸ್ತೆಗಳಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗುವುದು ಸಾಮಾನ್ಯ. ದಿಢೀರ್ ಆಗಿ ಕಾಡಾನೆ ಪ್ರತ್ಯಕ್ಷವಾಗುವುದು, ಕಾಡಾನೆಗಳ ಹಿಂಡು ರಸ್ತೆ ದಾಟುವುದು ಹೊಸದೇನಲ್ಲ. ಆದರೆ ಹೀಗೆ ಕಾಡಾನೆಗಳು ರಸ್ತೆ ದಾಟುವಾಗ ಸಾಹಸ ಪ್ರದರ್ಶನಕ್ಕೆ ಮುಂದಾದರೆ, ಕಾಡನೆಗಳನ್ನು ಭಯಭೀತಿಗೊಳಿಸಲು, ಹಿಂಸಿಸಲು ಮುಂದಾದರೆ ತಿರುಗಿ ಬೀಳುವುದು ಖಚಿತ. ಇಲ್ಲಿ ಮರಿಗಳು, ತಾಯಿ ಆನೆ ಸೇರಿದಂತೆ ಹಿಂಡು ಹಿಂಡಾಗಿ ಕಾಡಾನೆಗಳು ರಸ್ತೆ ದಾಟಲು ಆರಂಭಿಸಿದೆ.

ಮೃತ ಮರಿಯನ್ನು ಹೋದಲೆಲ್ಲಾ ಎತ್ತಿಕೊಂಡು ಹೋಗುತ್ತಿರುವ ತಾಯಿ ಆನೆ: ವಿಡಿಯೋ

ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕಾಡನೆಗಳ ಹಿಂಡು ಗಮನಿಸಿ ದೂರದಲ್ಲಿ ವಾಹನ ನಿಲ್ಲಿಸಿದ್ದಾರೆ. ಕಾಡನೆಗಳು ರಸ್ತೆ ದಾಡುವ ಸ್ಥಳದಿಂದ ದೂರದಲ್ಲಿ ರಸ್ತೆ ನಿಲ್ಲಿಸಿ ಕಾಡಾನೆಗಳು ಸರಾಗವಾಗಿ ರಸ್ತೆ ದಾಟಲು ಅನುವು ಮಾಡಿಕೊಟ್ಟಿದ್ದಾರೆ.

ಒಂದೇ ಸಮನೆ ಮರಿ ಆನೆಗಳು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಆನೆಗಳು ರಸ್ತೆ ದಾಟಿದೆ. ಕೊನೆಯಲ್ಲಿ ಬಂದ ಆನೆಯೊಂದು ರಸ್ತೆ ದಾಟಿದ ಬಳಿಕ ಒಂದು ಕ್ಷಣ ನಿಂತು ಸೊಂಡಿಲನ್ನು ಎತ್ತಿ ದೂರದಲ್ಲಿ ನಿಲ್ಲಿಸಿದ್ದ ವಾಹನ ಸವಾರರಿಗೆ ಧನ್ಯವಾದ ಹೇಳಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

View post on Instagram

ಈ ವಿಡಿಯೋ ಎಂಥವರನ್ನೂ ಒಂದು ಕ್ಷಣ ಸೆಳೆದು ಬಿಡುತ್ತದೆ. ಮೂಕ ಪ್ರಾಣಿಗಳು ಕೂಡ ಮಾನವನ ಸಣ್ಣ ಸಹಕಾರವನ್ನು ಹೇಗೆ ಸ್ಮರಿಸಿದೆ ಅನ್ನೋದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಆನೆಯ ಧನ್ಯವಾದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. 

ಹಾಸಿಗೆಗಾಗಿ ಮಾವುತನೊಂದಿಗೆ ಆನೆ ಮರಿಯ ಕಿತ್ತಾಟ: ವಿಡಿಯೋ ವೈರಲ್

ಇದು ಎಲ್ಲಿಯ ವಿಡಿಯೋ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಲೈಕ್ಸ್, ಕಮೆಂಟ್ ಮಾತ್ರ ಭರ್ಜರಿಯಾಗಿದೆ. ಇನ್‌ಸ್ಟಾಗ್ರಾಂ ಮಾತ್ರವಲ್ಲ, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಎಲ್ಲಾ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಮಾದಪ್ಪನ ಬೆಟ್ಟದ ರಸ್ತೆ ಮಧ್ಯೆ ಬಂದು ನಿಂತ ಸಲಗ; ವಾಹನ ಸಂಚಾರ ಅಸ್ತವ್ಯಸ್ತ
ಪ್ರಸಿದ್ಧ ಯಾತ್ರಾಸ್ಥಳ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಸಲಗವೊಂದು ಬಂದು ನಿಂತು ಸಂಚಾರ ಅಸ್ತವ್ಯಸ್ತ ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ. ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಸಿಗುವ ಕೋಣನಕೆರೆ ಕ್ರಾಸ್‌ ನಲ್ಲಿ ಕಾಡಾನೆಯೊಂದು ಮುಖ್ಯರಸ್ತೆಗೆ ಬಂದ ಪರಿಣಾಮ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಳ್ಳುವ ಜೊತೆಗೆ ವಾಹನ ಸವಾರರಲ್ಲಿ ಭೀತಿಯನ್ನೂ ಹುಟ್ಟಿಸಿತು. ರಸ್ತೆ ಬದಿಯಲ್ಲಿರುವ ಕುರುಚಲು ( ಸುಜ್ಜಲು) ಮರ ಮುರಿದು ಹಾಕುವ ದೃಶ್ಯ ಪ್ರಯಾಣಿಕರಿಗೆ ಕಂಡು ಬಂದಿತ್ತು. ಈ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್‌ ಮೂಲಕ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಕಾಡಾನೆ ಪ್ರಯಾಣಿಕರಿಗೆ ಯಾವುದೇ ತೊಂದರೆ ನೀಡಿಲ್ಲ. ಕಾಡಾನೆ ಕಾಡಿಗೆ ತೆರಳಿದ ಬಳಿಕ ವಾಹನ ಸವಾರರು ನಿರ್ಭೀತಿಯಿಂದ ಪ್ರಯಾಣ ಬೆಳೆಸಿದರು.