Asianet Suvarna News Asianet Suvarna News

ಅಕ್ರಮ ಸಂಬಂಧ ಶಂಕೆ, ಪತ್ನಿಯ ಗುಪ್ತಾಂಗಕ್ಕೆ ಕಬ್ಬಿಣ ಚೈನ್‌ನಿಂದ ಬೀಗ ಹಾಕಿದ ಪತಿ!

ಪತ್ನಿಯ ಮೇಲೆ ಅನುಮಾನ ಹೆಚ್ಚಾಗಿದೆ. ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಪತಿ, ಆಕೆಯ ಮೇಲೆ ಹಲ್ಲೆ ನಡೆಸಿ ಕೈಕಾಲು ಕಟ್ಟಿ ಹಾಕಿದ್ದಾನೆ. ಬಳಿಕ ಆಕೆಯ ಗುಪ್ತಾಂಪಕ್ಕೆ ಬೀಗ ಹಾಕಿದ ವಿಚಿತ್ರ ಘಟನೆ ನಡೆದಿದೆ.
 

Man Arrested after assault wife and insert nails lock into private part for affair suspect ckm
Author
First Published May 19, 2024, 5:06 PM IST

ಪಿಂಪ್ರಿ ಚಿಂಚಿವಾಡ್(ಮೇ.19) ಪತಿಗೆ ಪತ್ನಿಯ ಮೇಲೆ ಅನುಮಾನ, ಪತ್ನಿಗೆ ಪತಿಯ ಮೇಲೆ ಅನುಮಾನಗಳಿಂದ ಹಲ್ಲೆ, ಹತ್ಯೆ ಸೇರಿದಂತೆ ಹಲವು ಭೀಕರ ಘಟನೆಗಳು ನಡೆದಿದೆ. ಇದೀಗ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡ ಪತಿ, ಪತ್ನಿಯ ಗುಪ್ತಾಂಗಕ್ಕೆ ಬೀಗ ಹಾಕಿದ ವಿಚಿತ್ರ  ಘಟನೆ ಮಹಾರಾಷ್ಟ್ರದ ಪಿಂಪ್ರಿ ಚಿಂಚಿವಾಡ್‌ನಲ್ಲಿ ನಡೆದಿದೆ.

ಮೂಲತಹ ನೇಪಾಳಿಯ ದಂಪತಿಗಳು ಮಹಾರಾಷ್ಟ್ರದ ಚಿಂಚಿವಾಡ್‌ನಲ್ಲಿ ನೆಲೆಸಿದ್ದಾರೆ. 30 ವರ್ಷ ಆತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರೆ, 28 ವರ್ಷದ ಪತ್ನಿ ಗೃಹಿಣಿ. ಮನೆಯಲ್ಲಿರುವ ಪತ್ನಿ ಮೇಲೆ ಈತನಿಗೆ ಎಲ್ಲಿಲ್ಲದ ಅನುಮಾನ ಶುರುವಾಗಿದೆ. ಪದೇ ಪದೇ ಇದೇ ವಿಚಾರಕ್ಕೆ ಜಗಳವಾಗಿದೆ. ಅದೆಷ್ಟೇ ಸ್ಪಷ್ಟನೆ, ಸಾಕ್ಷಿ ನೀಡಿದರೂ ಪತಿಯ ಅನುಮಾನ ಮಾತ್ರ ಕಡಿಮೆಯಾಗಿಲ್ಲ.

ನೀಟ್‌ ವಿದ್ಯಾರ್ಥಿಯನ್ನು ಬೆತ್ತಲು ಮಾಡಿ, ಖಾಸಗಿ ಅಂಗಕ್ಕೆ ಇಟ್ಟಿಗೆ ಕಟ್ಟಿ ಬರ್ಬರ ಕೃತ್ಯ!

ಮೇ.11ರಂದು ಸೆಕ್ಯೂರಿಟಿ ಕೆಲಸ ಮುಗಿಸಿಕೊಂಡು ಮನಗೆ ಬಂದ ಪತಿ ರಂಪಾಟ ಶುರುಮಾಡಿದ್ದಾನೆ. ಅಕ್ರಮ ಸಂಬಂದ ಇದೆ ಎಂದು ಆಕೆಯ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ಆಕೆಯ ಎರಡೂ ಕೈ,ಕಾಲು ಕಟ್ಟಿ ಹಾಕಿದ್ದಾರೆ. ಪತ್ನಿಯನ್ನು ವಿವಸ್ತ್ರಗೊಳಿಸಿ ಪತಿ ಕ್ರೌರ್ಯ ಮೆರೆದಿದ್ದಾನೆ. ಪತ್ನಿಯ ಗುಪ್ತಾಂಗವನ್ನು ಬ್ಲೇಡ್ ಮೂಲಕ ಕೊಯ್ದಿದ್ದಾನೆ. ಬಳಿಕ ಕಬ್ಬಿಣ ಚೈನ್ ಮೂಲಕ ಗುಪ್ತಾಂಗಕ್ಕೆ ಲಾಕ್ ಹಾಕಿದ್ದಾನೆ.

ಇತ್ತ ಪತ್ನಿ ತೀವ್ರ ನೋವಿನಿಂದ ಚೀರಿಕೊಂಡಿದ್ದಾಳೆ. ಕಾಪಾಡಲು ಬೇಡಿಕೊಂಡಿದ್ದಾಳೆ. ಈಕೆಯ ಚೀರಾಟ ಕೇಳಿ ಸ್ಥಳೀಯರು ಆಗಮಿಸಿದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಭಯಭೀತಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ಆಸ್ಪತ್ರೆ ದಾಖಲಿದ್ದಾರೆ.

ಗಂಭೀರವಾಗಿ ಗಾಯಗೊಂಡು, ರಕ್ತಸ್ರಾವವಾಗಿರುವ ಕಾರಣ ಮಹಿಳೆ ಚೇತರಿಸಿಕೊಳ್ಳಲು ಕೆಲ ದಿನಗಳೇ ಹಿಡಿಯಲಿದೆ ಎಂದು ವೈದ್ಯರುಹೇಳಿದ್ದಾರೆ. ಇತ್ತ ಪತಿ ವಿರುದ್ಧ ದೂರು ನೀಡಿದ್ದಾಳೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ. ಇದೀಗ ಈತನ ವಿರುದ್ದ ಸೆಕ್ಷನ್ 326, 506(2), 323 ಅಡಿಯಲ್ಲಿ ದೂರು ದಾಖಲಿಸಿದ್ದಾರೆ.  

ಪತಿಯ ಖಾಸಗಿ ಅಂಗ ಸಿಗರೇಟ್‌ನಿಂದ ಸುಟ್ಟು ಕತ್ತರಿಸಲು ಹೋದ ಪತ್ನಿ ಬಂಧನ; ಹೆಂಡತಿಯ ಚಿತ್ರಹಿಂಸೆ ಸಿಸಿ ಕ್ಯಾಮೆರಾದಲ್ಲಿ ಸೆರೆ

ಪೊಲೀಸರು ನೇಪಾಳಿಯಲ್ಲಿರುವ ಮಹಿಳೆಯ ಕುಟುಂಸ್ಥರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ನೇಪಾಳದ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಗೆ ಆರ್ಥಿಕ ಸಂಕಷ್ಟವೂ ಎದುರಾಗಿದೆ. ಪತಿ ಪೊಲೀಸ್ ವಶದಲ್ಲಿದ್ದರೆ, ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 

Latest Videos
Follow Us:
Download App:
  • android
  • ios