ಗೇಮ್ ಆಡುವಾಗ ಮೊಬೈಲ್ ಕೊಡದ್ದಕ್ಕೆ ಸಿಟ್ಟು, ಬೆಂಗಳೂರಿನಲ್ಲಿ ಅಣ್ಣನಿಂದಲೇ ತಮ್ಮನ ಕೊಲೆ!
ಮೊಬೈಲ್ ಗೇಮ್ ವಿಚಾರಕ್ಕಾಗಿ ಹುಡುಗ ತನ್ನ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ 18 ವರ್ಷದ ಯುವಕ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದಾಗ ಜಗಳಕ್ಕೆ ತನ್ನ ಕಿರಿಯ ಸಹೋದರನನ್ನು ಕೊಂದಿದ್ದಾನೆ.
ಬೆಂಗಳೂರು: ಮೊಬೈಲ್ ಗೇಮ್ ವಿಚಾರಕ್ಕಾಗಿ ಹುಡುಗ ತನ್ನ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ 18 ವರ್ಷದ ಯುವಕ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದಾಗ ಜಗಳಕ್ಕೆ ತನ್ನ ಕಿರಿಯ ಸಹೋದರನನ್ನು ಕೊಂದಿದ್ದಾನೆ. ಪೊಲೀಸರು ಯುವಕನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ವರದಿಯ ಪ್ರಕಾರ, ಮೃತರು ಮತ್ತು ಆರೋಪಿಗಳನ್ನು ಪ್ರಣೀಶ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ.
ಇವರಿಬ್ಬರೂ ನೆರಿಗಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಶಾಲೆ ಬಿಟ್ಟ ಶಿವಕುಮಾರ್, ತನ್ನ ಸಹೋದರ ಪ್ರಣೀಶ್‌ಗೆ ಫೋನ್ ಹಿಂತಿರುಗಿಸುವಂತೆ ಕೇಳಿದ್ದಾನೆ. ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ ಪ್ರಣೀಶ್ ಅದನ್ನು ಹಿಂದಿರುಗಿಸಲು ನಿರಾಕರಿಸಿದ್ದು, ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಆಗ ಶಿವಕುಮಾರ್ ಸುತ್ತಿಗೆ ಹಿಡಿದು ಪ್ರಣೀಶ್‌ಗೆ ಮೊಬೈಲ್ ವಾಪಸ್ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಪ್ರಣೀಶ್ ವಾಪಸ್ ನೀಡದಿದ್ದಾಗ ಸುತ್ತಿಗೆಯಿಂದ ಪ್ರಣೀಶ್ ಗೆ ಹೊಡೆಯಲು ಆರಂಭಿಸಿದ್ದಾನೆ. ಅಣ್ಣನಿಂದ ಸತತವಾಗಿ ಪೆಟ್ಟು ತಿಂದ ಪ್ರಣೀಶ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾನೆ.
ಐದು ಮಕ್ಕಳಿದ್ದಾರೆಂದು ಚಿಂತೆ ಮಾಡುತ್ತಿದ್ದ ತಂದೆ, ಇಬ್ಬರು ತಂಗಿಯರನ್ನು ಕತ್ತು ಹಿಸುಕಿ ಕೊಂದ ಅಕ್ಕ!
ಘಟನೆ ನಡೆದಾಗ ಪೋಷಕರು ಮನೆಯಲ್ಲಿ ಇರಲ್ಲಿಲ್ಲ. ಆದರೆ, ಪೊಲೀಸರಿಗೆ ಸಾವಿನ ವಿಷಯ ತಿಳಿದಾಗ ಶಿವಕುಮಾರ್ ತನ್ನ ಸಹೋದರನನ್ನು ಕೊಂದಿರುವುದಾಗಿ ಬಹಿರಂಗಪಡಿಸಿರಲಿಲ್ಲ. ವಿಚಾರಣೆಗೆ ಒಳಪಡಿಸಿದಾಗ, ಶಿವಕುಮಾರ್ ಘಟನೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಶಿವಕುಮಾರ್ ಮತ್ತು ಪ್ರಣೀಶ್ ಅವರ ಕುಟುಂಬ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ಮೂಲದವರು. ಮೇ 15ರಂದು ಘಟನೆ ಸಂಭವಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೆಂಗಳೂರು: ಜಗಳದ ವೇಳೆ ತಳ್ಳಾಟ, ವಿದ್ಯುತ್ ತಾಗಿ ಪೋಕ್ಸೋ ಆರೋಪಿ ಸಾವು