Asianet Suvarna News Asianet Suvarna News

ಅಜ್ಜಿಯ ಅದ್ಭುತ ಕಂಠಸಿರಿ... ಲತಾ ಮಂಗೇಶ್ಕರ್ ನೆನಪಿಸ್ತಾರೆ ಈ ವೃದ್ಧೆ

ವೃದ್ಧರೊಬ್ಬರು ಲತಾ ಮಂಗೇಶ್ಕರ್ ನೆನಪಿಸುವ ರೀತಿ ಸುಮಧುರವಾಗಿ ಹಾಡೊಂದನ್ನು ಹಾಡುತ್ತಿದ್ದು, ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

elederly woman sings like lata mangeshkar watch viral video akb
Author
First Published Dec 13, 2022, 10:29 PM IST

ಮುಂಬೈ: ವೃದ್ಧರೊಬ್ಬರು ಲತಾ ಮಂಗೇಶ್ಕರ್ ನೆನಪಿಸುವ ರೀತಿ ಸುಮಧುರವಾಗಿ ಹಾಡೊಂದನ್ನು ಹಾಡುತ್ತಿದ್ದು, ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಲ್ಮಾನ್ ಸಯ್ಯದ್ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಸಾವಿರಾರು ಜನ ವೃದ್ಧೆಯ ಕಂಠಸಿರಿಗೆ ಮನಸೋತಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆ ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ಹಾಡಿರುವ ಸುನೋ ಸಜ್ನಾ ಪಪಿನೇ ಎಂಬ ಹಾಡನ್ನು ಸುಮಧುರವಾಗಿ ಹಾಡುತ್ತಿದ್ದಾರೆ. ಇದು 1996ರ ಆಯೆ ದಿನ್ ಬಾಹರ್ ಕೆ ಎಂಬ ಸಿನಿಮಾದ ಹಾಡಾಗಿದ್ದು, ಇದನ್ನು ಲತಾ ಮಂಗೇಶ್ಕರ್ ಈ ಸಿನಿಮಾಗಾಗಿ ಹಾಡಿದ್ದರು. ಮಹಾರಾಷ್ಟ್ರದ ಮಹಾಬಲೇಶ್ವರ (Mahabaleshwar)  ಸಮೀಪವಿರುವ ಪಂಚಗನಿ (Panchgani) ಬಳಿಯ ಪಾರ್ಸಿ ಪಾಯಿಂಟ್ (Parsi Point) ಬಳಿ ನಿಂತುಕೊಂಡು ಈ ಹಾಡು ಹಾಡುತ್ತಿದ್ದಾರೆ. ಈ ವಿಡಿಯೋವನ್ನು ಆರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ಆಕೆಯ ಸುಮಧುರ ಕಂಡಕ್ಕೆ ಮನಸೋತಿದ್ದಾರೆ. 

ನಮ್ಮ ದೇಶದಲ್ಲಿ ಪ್ರತಿಭೆಗೆ ಯಾವುದೇ ಕೊರತೆ ಇಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಜನ ಸಾಮಾನ್ಯರು ಕೂಡ ತಮ್ಮ ಪ್ರತಿಭೆಗಳನ್ನು ಹೊರ ಹಾಕುತ್ತಿದ್ದಾರೆ. ಅದೊಂದು ಕಾಲವಿತ್ತು ಪ್ರತಿಭೆ ಇದ್ದರೂ ಪ್ರದರ್ಶಿಸುವ ವೇದಿಕೆಗಳಿರಲಿಲ್ಲ. ಆದರೆ ಕಾಲ ಬದಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ನಮಗೆ ನಾವೇ ವೇದಿಕೆ ಒದಗಿಸಿಕೊಳ್ಳಬಹುದಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆ ಇಲ್ಲದಾಗಿದೆ. ಹಾಗೆಯೇ ಇಲ್ಲಿ ವೃದ್ಧೆಯೊಬ್ಬರ ಪ್ರತಿಭೆಯನ್ನು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಇನ್ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. 

ಕೆಲ ದಿನಗಳ ಹಿಂದೆ ಮುಂಬೈ ರೈಲಿನಲ್ಲಿ ಸಂಚರಿಸುತ್ತಿದ್ದ ವೃದ್ಧರೊಬ್ಬರು ತಮ್ಮಷ್ಟಕ್ಕೆ ಸುಮಧುರವಾಗಿ ಹಾಡುತ್ತಿದ್ದ ವಿಡಿಯೋವೊಂದು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 
 

 

ರೈಲಿನಲ್ಲಿ ಬಾಲಿವುಡ್‌ ಹಾಡು ಗುನುಗಿದ ವೃದ್ಧ: ನೆಟ್ಟಿಗರ ಮನಗೆದ್ದ ವಿಡಿಯೋ..!

Instagram Reels 2022: ಈ ವರ್ಷ ಟ್ರೆಂಡ್ ಕ್ರಿಯೆಟ್ ಮಾಡಿದ ಇನ್ಸ್ಟಾ ರೀಲ್ಸ್‌

 

Follow Us:
Download App:
  • android
  • ios