Asianet Suvarna News Asianet Suvarna News

Breaking: ಜಗನ್ನಾಥನ ಹೊತ್ತೊಯ್ದ ರಥಕ್ಕೆ ತಗುಲಿದ ಹೈಟೆನ್ಷನ್‌ ತಂತಿ, ಸುಟ್ಟುಕರಕಲಾದ 7 ಮಂದಿ!

ರಥವು ವಿದ್ಯುತ್ ತಂತಿಗೆ ತಗುಲಿದಾಗ ವಿದ್ಯುತ್ ಪ್ರವಹಿಸಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತ್ರಿಪುರ ರಾಜ್ಯದ ಅಗರ್ತಲಾದಲ್ಲಿ ಭೀಕರ ಘಟನೆ ನಡೆದಿದೆ. 

Electrocution Tripura Jagannath Rath Yatra Contact With High Tension Wire san
Author
First Published Jun 28, 2023, 9:53 PM IST

ನವದೆಹಲಿ (ಜೂ.28):  ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ಭೀಕರ ಘಟನೆ ಸಂಭವಿಸಿದೆ.  ಇಲ್ಲಿನ ಇಸ್ಕಾನ್‌ ದೇವಸ್ಥಾನದಿಂದ ಹೊರ ಬರುತ್ತಿದ್ದ ಜಗನ್ನಾಥ ಯಾತ್ರೆಯ ರಥ ಬುಧವಾರ ಸಂಜೆ ಹೈ ಟೆನ್ಷನ್ ತಂತಿಗೆ ತಗುಲಿತು. ಇದರ ಪರಿಣಾಮವಾಗಿ ಇಬ್ಬರು ಮಕ್ಕಳು ಸೇರಿ ಏಳು ಮಂದಿ ನಿಂತಲ್ಲಿಯೇ ಸುಟ್ಟು ಕರಕಲಾಗಿದ್ದಾರೆ. 18 ಮಂದಿಗೆ ಗಂಭೀರವಾಗಿ ಗಾಯಗಳಾಗಿದ್ದ ಅವರುನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವೊಂದು ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ 22 ಜನರ ಸಾವು ಕಂಡಿದ್ದಾರೆ ಎನ್ನಲಾಗಿದೆಯಾದರೂ, ಅದಿನ್ನೂ ಖಚಿತವಾಗಿಲ್ಲ.ಪೊಲೀಸ್ ಪ್ರಕಾರ, 'ಉಲ್ಟಾ ರಥ ಯಾತ್ರೆ' ಉತ್ಸವದ ಸಂದರ್ಭದಲ್ಲಿ ಕುಮಾರ್‌ಘಾಟ್ ಪ್ರದೇಶದಲ್ಲಿ ಸಂಜೆ 4:30 ಕ್ಕೆ ಅಪಘಾತ ಸಂಭವಿಸಿದೆ. ಕಬ್ಬಿಣದಿಂದ ಮಾಡಿದ ರಥವನ್ನು ಭಕ್ತರು ಎಳೆಯುತ್ತಿದ್ದರು. ಅಷ್ಟರಲ್ಲಿ ರಥವು 133 ಕೆವಿ ಓವರ್ ಹೆಡ್ ಕೇಬಲ್‌ಗೆ ತಗುಲಿದೆ, ಇದರ ಬೆನ್ನಲ್ಲಿಯೇ ರಥವನ್ನು ಹಿಡಿದಿದ್ದ ಹಲವರು ಶಾಕ್‌ಗೆ ಒಳಗಾದರೆ, 7 ಮಂದಿ ಸಂಪೂರ್ಣವಾಗಿ ಸುಟ್ಟು ಸ್ಥಳದಲ್ಲೇ ಸಾವು ಕಮಡಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಥವು ವಿದ್ಯುತ್ ತಂತಿಗೆ ಹೇಗೆ ಸ್ಪರ್ಶಿಸಿತು ಎಂಬುದನ್ನು ತಂಡವು ಪರಿಶೀಲಿಸಲು ಪ್ರಯತ್ನಿಸುತ್ತಿದೆ.

ನಂಬಿಕೆಗಳ ಪ್ರಕಾರ, ತ್ರಿಪುರಾದಲ್ಲಿ ಜಗನ್ನಾಥನ ರಥಯಾತ್ರೆಯ ಒಂದು ವಾರದ ನಂತರ ಉಲ್ಟಿ ರಥ ಯಾತ್ರೆ ನಡೆಯುತ್ತದೆ. ಇದರಲ್ಲಿ ದೇವರ ರಥವನ್ನು ಹಿಂದಿನಿಂದ ಎಳೆಯಲಾಗುತ್ತದೆ. ಇದನ್ನು ಘೂರ್ತಿ ರಥ ಯಾತ್ರೆ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಭಗವಾನ್ ಬಲಭದ್ರ ಮತ್ತು ಸಹೋದರಿ ಸುಭದ್ರಾ ಭಗವಾನ್ ಜಗನ್ನಾಥನೊಂದಿಗೆ ರಥದ ಮೇಲೆ ಸವಾರಿ ಮಾಡುತ್ತಾರೆ.

ಅಪಘಾತದ ಬಗ್ಗೆ ಮುಖ್ಯಮಂತ್ರಿ ಮಾಣಿಕ್ ಸಹಾ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಅನೇಕ ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ನನಗೆ ಬೇಸರವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪ ಮತ್ತು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಸಂತ್ರಸ್ತರ ಜೊತೆಗೆ ನಿಂತಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಘಟನೆ ನಡೆದ ಸ್ಥಳಕ್ಕೆ ಮಾಣಿಕ್‌ ಸಹಾ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಜಗನ್ನಾಥಯಾತ್ರೆ ವೇಳೆ ಅವಘಡ, ರಥಯಾತ್ರೆ ಸಾಗುತ್ತಿದ್ದಂತೆ ಕುಸಿದ ಕಟ್ಟಡ, ವಿಡಿಯೋ ವೈರಲ್!

ತನಿಖೆಗೆ ಆದೇಶ ನೀಡಿದ ಇಂಧನ ಸಚಿವ: ಮಾಧ್ಯಮಗಳೊಂದಿಗೆ ಮಾತನಾಡಿದ ಇಂಧನ ಸಚಿವ ರತನ್ ಲಾಲ್ ನಾಥ್ , ನಾನು ಸ್ಥಳೀಯ ಶಾಸಕ ಭಗವಾನ್ ದಾಸ್ ಮತ್ತು ತ್ರಿಪುರಾ ರಾಜ್ಯ ವಿದ್ಯುತ್ ನಿಗಮದ ಡಿಜಿಎಂ ಜೊತೆ ಮಾತನಾಡಿದ್ದೇನೆ. ತನಿಖೆಗೆ ಆದೇಶಿಸಿ ಶೀಘ್ರವೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.

ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಯಾವಾಗ? ಈ ಯಾತ್ರೆಯ ಮಹತ್ವವೇನು?

Follow Us:
Download App:
  • android
  • ios