ಲಖನೌ (ಅ. 30): ಉತ್ತರ ಪ್ರದೇಶದ ಸಚಿವರು, ಶಾಸಕರು ಮತ್ತು ಸರ್ಕಾರದ ಇಲಾಖೆ ಅಧಿಕಾರಿಗಳೇ 13 ಸಾವಿರ ಕೋಟಿ ರು. ಮೌಲ್ಯದ ವಿದ್ಯುತ್‌ ಬಿಲ್‌ ಪಾವತಿಯನ್ನು ಬಾಕಿ ಉಳಿಸಿಕೊಂಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಸಚಿವರು, ಶಾಸಕರು ಮತ್ತು ಸರ್ಕಾರದ ಇಲಾಖೆಗಳ ಕಚೇರಿಗಳು ಮತ್ತು ನಿವಾಸಗಳಿಗೆ ಪ್ರೀ-ಪೇಡ್‌(ಮೊದಲೇ ಪಾವತಿ ಮಾಡಬೇಕಾದ) ಮೀಟರ್‌ಗಳನ್ನು ಅಳವಡಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ನಿರ್ಧರಿಸಿದೆ.

ಜಾತಿ, ಧರ್ಮದ ಸ್ಟಿಕ್ಕರ್ ಅಂಟಿಸಿದ 250 ಕ್ಕೂ ಹೆಚ್ಚು ವಾಹನಕ್ಕೆ ದಂಡ!

ಈ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಇಂಧನ ಸಚಿವ ಶ್ರೀಕಾಂತ್‌ ಶರ್ಮಾ, ಸಚಿವರ ನಿವಾಸಗಳು ಮತ್ತು ಸರ್ಕಾರಿ ಇಲಾಖೆಗಳು ಇಂಧನ ಇಲಾಖೆಯ 13 ಸಾವಿರ ಕೋಟಿ ರು. ಬಾಕಿ ಉಳಿಸಿಕೊಂಡಿವೆ. ಅಲ್ಲದೆ, ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳೇ ಮುಂಚೂಣಿಯಲ್ಲಿದ್ದಾರೆ.

ಅಯೋಧ್ಯೆಯಲ್ಲಿ 5.4 ಲಕ್ಷ ದೀಪ ಹಚ್ಚಿ ಗಿನ್ನೆಸ್ ದಾಖಲೆ

ಹೀಗಾಗಿ, ಮುಂದಿನ ದಿನಗಳಲ್ಲಿ ವಿದ್ಯುತ್‌ ಬಿಲ್‌ ಪಾವತಿ ಪರಿಶೀಲನೆಗಾಗಿ ಎಲ್ಲ ಕಚೇರಿ ಮತ್ತು ಶಾಸಕರು ಹಾಗೂ ಸಚಿವರ ನಿವಾಸಗಳಿಗೆ ಪ್ರೀ-ಪೇಡ್‌ ಮೀಟರ್‌ಗಳನ್ನು ಅಳವಡಿಸಲಾಗುತ್ತದೆ. ಅಲ್ಲದೆ, ಹಿಂದಿನ ಬಾಕಿ ಪಾವತಿಗಾಗಿ ಇಲಾಖೆಗಳು, ಸಚಿವರು ಮತ್ತು ಶಾಸಕರಿಗೆ ಕಂತಿನ ಅವಕಾಶವನ್ನು ನೀಡಲಾಗುತ್ತದೆ. ಅಲ್ಲದೆ, ಪ್ರೀ-ಪೇಡ್‌ ಮೀಟರ್‌ ಅನ್ನು ಮೊದಲಿಗೆ ನನ್ನ ನಿವಾಸಕ್ಕೆ ಅಳವಡಿಸಿಕೊಳ್ಳುತ್ತೇನೆ ಎಂದಿದ್ದಾರೆ.