ಜಾತಿ, ಧರ್ಮದ ಸ್ಟಿಕ್ಕರ್ ಅಂಟಿಸಿದ 250ಕ್ಕೂ ಹೆಚ್ಚು ವಾಹನಕ್ಕೆ ದಂಡ!

ಜಾತಿ, ಧರ್ಮ, ಪ್ರೆಸ್, ಸೇರಿದಂತೆ ಯಾವುದೇ ಸ್ಟಿಕ್ಕರ್ ಅಂಟಿಸಿದರೆ ದಂಡ ತಪ್ಪಿದ್ದಲ್ಲ. ಹೀಗೆ ನಿಯಮ ಉಲ್ಲಂಘಿಸಿದ 250ಕ್ಕೂ ಹೆಚ್ಚು ವಾಹನಗಳಿಗೆ ಒಂದೇ ದಿನದಲ್ಲಿ ದಂಡ ಹಾಕಲಾಗಿದೆ.

Uttar pradesh police fined for cast religious sticker on number plate

ನೋಯ್ಡಾ(ಅ.28): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ, ಸಣ್ಣ ತಪ್ಪು ಮಾಡಿದರೂ ದುಬಾರಿ ದಂಡ ಕಟ್ಟಬೇಕಾಗುತ್ತೆ. ಹೀಗಾಗಿ ದಂಡಕ್ಕೆ ಬೆದರಿ ಸಾರ್ವಜನಿಕರು ನಿಯಮ ಪಾಲಿಸುತ್ತಿದ್ದಾರೆ. ಇದೀಗ ಉತ್ತರ ಪ್ರದೇಶ ಪೊಲೀಸರು ವಾಹನದ ನಂಬರ್ ಪ್ಲೇಟ್ ಮೇಲೆ, ಜಾತಿ, ಧರ್ಮದ ಸ್ಟಿಕ್ಕರ್ ಅಂಟಿಸಿದ ವಿರುದ್ದ ಕಾರ್ಯಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಪ್ರವಾಹ ಸಂತ್ರಸ್ತರನ್ನು ಕಾಪಾಡಿದ ಜೀಪ್‌ಗೆ ಹಾಕಿದ್ರು ದಂಡ!

ನಂಬರ್ ಪ್ಲೇಟ್ ಮೇಲೆ ಜಾತಿ, ಧರ್ಮ ಸೇರಿದಂತೆ ಯಾವುದೇ ಸ್ಟಿಕ್ಕರ್ ಅಂಟಿಸಿದ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು ದುಬಾರಿ ದಂಡ ಹಾಕಿದ್ದಾರೆ. ಒಂದೇ ದಿನ ಸುಮಾರು 250ಕ್ಕೂ ಹೆಚ್ಚು ವಾಹನಗಳಿಗೆ ದಂಡ ಹಾಕಲಾಗಿದೆ. ಈ ಮೂಲಕ ವಾಹನ ಸವಾರರಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಇದನ್ನೂ ಓದಿ: ಜೀನ್ಸ್ ಧರಿಸಿದ ಮಹಿಳೆಯರಿಗೆ ಡ್ರೈವಿಂಗ್ ಟೆಸ್ಟ್‌ಗೆ ಅವಕಾಶವಿಲ್ಲ!

ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದಲ್ಲಿ ತಪಾಸಣೆ ಮಾಡಿದ ಪೊಲೀಸರು ನಂಬರ್ ಪ್ಲೇಟ್ ಮೇಲೆ ವಾಹನ ರಿಜಿಸ್ಟ್ರೇಶನ್ ನಂಬರ್ ಹೊರತು ಪಡಿಸಿ, ಇತರ ಬರಹಗಳಿದ್ದ ವಾಹನಗಳಿಗೆ ದಂಡ ಹಾಕಲಾಗಿದೆ. ನಿಯಮದ ಪ್ರಕಾರ ನಂಬರ್ ಪ್ಲೇಟ್ ಮೇಲೆ ನೋಂದಾವಣಿ ನಂಬರ್ ಹೊರತು ಪಡಿಸಿ ಇತರ ಯಾವುದೇ ರೀತಿಯ ಸ್ಟಿಕ್ಕರ್, ಬರಹ ದಾಖಲಿಸುವಂತಿಲ್ಲ. 

ಇದನ್ನೂ ಓದಿ: ಎಪಿ ಸಿಎಂ ಜಗನ್ ಕಾರು ನಿಲ್ಲಿಸಿ, ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್!

ಓರ್ವ ಬಾಲಿವುಡ್ ಚಿತ್ರ ದಬಾಂಗ್ ಎಂದು ನಂಬರ್ ಪ್ಲೇಟ್ ಮೇಲೆ ಬರೆದುಕೊಂಡಿದ್ದ. ಈತನಿಗೂ ದುಬಾರಿ ದಂಡ ಹಾಕಲಾಗಿದೆ. ಹೀಗಾಗಿ ವಾಹನ ಸವಾರರು ನಂಬರ್ ಪ್ಲೇಟ್ ನಿಯಮ ಉಲ್ಲಂಘಿಸದಂತೆ ಎಚ್ಚರ ವಹಿಸುವುದು ಉತ್ತಮ.
 

Latest Videos
Follow Us:
Download App:
  • android
  • ios