ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅಸಮಾಧಾನ ಹೊರಹಾಕಿದ್ದ ಚುನಾವಣಾ ಆಯೋಗ ಆಯುಕ್ತ ಅಶೋಕ್ ಲಾವಾಸ ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ನವದೆಹಲಿ(ಆ.18): ಚುನಾವಣಾ ಆಯುಕ್ತ ಅಶೋಕ್ ಲಾವಾಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಗಸ್ಟ್ 31ರೊಳಗೆ ತಮ್ಮನ್ನು ಹುದ್ದೆಯಿಂದ ಮುಕ್ತಿಗೊಳಿಸುಂತೆ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ ನೀಡಿದ್ದಾರೆ. ಫಿಲಿಪೈನ್ಸ್ ಮೂಲದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಮುಂದಿನ ತಿಂಗಳು ಅಶೋಕ್ ಲಾವಾಸ ಅಧಿಕಾರ ಸ್ವೀಕರಿಸಿದ್ದಾರೆ. ಹೀಗಾಗಿ ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ: H D ರೇವಣ್ಣ
ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಕಳೆದ ತಿಂಗಳು ಅಶೋಕ್ ಲಾವಾಸ ಅವರನ್ನು ಬ್ಯಾಂಕ್‌ನ ನೂತನ ಉಪಾಧ್ಯಕ್ಷ ಎಂದು ಘೋಷಿಸಿತ್ತು. ಖಾಸಗಿ ಹಾಗೂ ಸರ್ಕಾರ ಸಹಭಾಗಿತ್ವದ ಯೋಜನೆಗಳಲ್ಲಿ ಸಾಕಷ್ಟು ಅನುಭವ ಹೊಂದಿರುವ ಅಶೋಕ್ ಲಾವಾಸ ಅವರನ್ನು ಬ್ಯಾಂಕ್ ಉಪಾಧ್ಯಕ್ಷರಾಗಿ ನೇಮಕ ಮಾಡುತ್ತಿರುವುದಾಗಿ ADB ಹೇಳಿತ್ತು.
ಗ್ರಾಪಂ ಚುನಾವಣೆ: ಮತದಾರ ಪಟ್ಟಿ ಸಿದ್ಧತೆಗೆ ಆಯೋಗ ಸೂಚನೆ
ಚುನಾವಣಾ ಆಯುಕ್ತರಾಗಿ ಅಶೋಕ್ ಲಾವಾಸ ಅವಧಿ ಇನ್ನೂ 2 ವರ್ಷ ಬಾಕಿ ಇತ್ತು. ಹಿರಿತನ ಹಾಗೂ ಅನುಭವದ ಆಧಾರದ ಮೇಲೆ ಅಶೋಕ ಲಾವಾಸಾ 2022ರಲ್ಲಿ ಎಲೆಕ್ಷನ್ ಕಮಿಷನರ್ ಆಗಿ ನಿವೃತ್ತಿ ಹೊಂದಬೇಕಿತ್ತು. ಆದರೆ ಅಶೋಕ್ ಲಾವಾಸ ಇದೀಗ ರಾಜೀನಾಮೆ ನೀಡೋ ಮೂಲಕ, ಕೆಲ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.
2019ರ ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಚುನಾವಣಾ ನೀತಿ ಉಲ್ಲಂಘನೆ ಕುರಿತು ಮೋದಿ ಹಾಗೂ ಶಾ ವಿರುದ್ಧ 11 ದೂರುಗಳು ದಾಖಲಾಗಿತ್ತು. ದೂರುಗಳನ್ನು ಆಲಿಸಿದ ಚುನಾವಣಾ ಆಯೋಗ ಮೋದಿ ಹಾಗೂ ಅಮಿತ್ ಶಾ ಕ್ಲೀನ್ ಚಿಟ್ ನೀಡಿತ್ತು. ಆದರೆ ಇದಕ್ಕೆ ಅಶೋಕ್ ಲಾವಾಸ ಅಸಮಾಧಾನ ವ್ಯಕ್ತಪಡಿಸಿದ್ದರು.
