Asianet Suvarna News Asianet Suvarna News

ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ: H D ರೇವಣ್ಣ

ನಗರಸಭೆ ಹಾಗೂ ಪುರಸಭೆಗಳ ಚುನಾವಣೆ ನಡೆದು ಎರಡು ವರ್ಷಗಳು ಮುಗಿದಿವೆ| ಚುನಾವಣೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಆಡಳಿತ ನಡೆಸಬೇಕು ಆದರೆ ಅಧಿಕಾರಿಗಳ ಆಡಳಿತವೆ ಹೆಚ್ಚಾಗಿದೆ| ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಿನ್ನಡೆಯಾಗಿದೆ: ರೇವಣ್ಣ| 

Former Minister H D Revanna Talks Over Election Commission
Author
Bengaluru, First Published Jun 19, 2020, 3:21 PM IST

ಹಾಸನ(ಜೂ.19): ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಚುನಾವಣಾ ಆಯುಕ್ತರು ಇಲಾಖೆಗೆ ಧಕ್ಕೆ ತರುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ. 

ಇಂದು(ಶುಕ್ರವಾರ) ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ನಗರಸಭೆ ಹಾಗೂ ಪುರಸಭೆಗಳ ಚುನಾವಣೆ ನಡೆದು ಎರಡು ವರ್ಷಗಳು ಮುಗಿದಿವೆ. ಚುನಾವಣೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಆಡಳಿತ ನಡೆಸಬೇಕು ಆದರೆ ಅಧಿಕಾರಿಗಳ ಆಡಳಿತವೆ ಹೆಚ್ಚಾಗಿದೆ ಇದರಿಂದ ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಿನ್ನಡೆಯಾಗಿದೆ ಎಂದು ದೂರಿದರು. ಅಲ್ಲದೆ ಗ್ರಾಪಂ ಚುನಾವಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಚುನಾವಣೆ ಪ್ರಕ್ರಿಯೆ ಮುಂದೂಡದಂತೆ ಸರ್ಕಾರ ಹಾಗೂ ಚುನಾವಣಾ ಆಯೋಗ ಸೂಕ್ತ ಕ್ರಮವಹಿಸಬೇಕಿದೆ. ಇಲ್ಲವಾದರೆ ಜನರೆ ನ್ಯಾಯಾಲಯಕ್ಕೆ ಪ್ರತಿದೂರು ನೀಡಲಿದ್ದಾರೆ‌ ಎಂದರು.

'ಮುಂದಿನ ವರ್ಷ ಎತ್ತಿನಹೊಳೆ ಯೋಜನೆ ಪೂರ್ಣ'..!

ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡಬೇಕು

ನಗರ ಪ್ರದೇಶದ ಆಡಳಿತ ಅಧಿಕಾರಿಗಳಿಂದ ನಡೆಸುತ್ತಿದೆ. ಗ್ರಾಮ ಪಂಚಾಯಿತಿಗೂ ಅಡಳಿತಾಧಿಕಾರಿ‌‌ ನೇಮಿಸಿದೆ. ಇದರಿಂದ‌ ಅಡಳಿತ‌ ಯಂತ್ರ ಕುಸಿಯಲಿದೆ ಎಂದರು. ಚುನಾವಣಾ ಆಯೋಗ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ ಆಯೋಗವು ಯಾವುದೇ ಸರ್ಕಾರದ ಅಧೀನದಲಿಲ್ಲಾ.. ಗ್ರಾ.ಪಂ.ಮಿಸಲಾತಿ 6 ತಿಂಗಳ‌ ಮುಂಚೆಯೇ ನಿಗದಿ‌ ಮಾಡಬೆಕಿತ್ತು. ಆದರೆ ಆಯೋಗ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಚುನಾವಣೆ ಆಯೋಗ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಯಾವುದೇ ಚುನಾವಣೆ‌ ಮುಂಚೆ ಮೀಸಲಾತಿ ನಿಗದಿ ಮಾಡಿಕೊಳ್ಳಲಿ. ಆಯೋಗ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಹಾಗೂ ಅಡ್ಕೋಕೇಟ್ ಜನರಲ್ ಜನರ ಹಿತಾಸಕ್ತಿ ಕಾಪಾಡಬೇಕು‌ ಎಂದರು.

ರಾಜ್ಯದಲ್ಲಿ ಹೋಟೆಲ್‌,‌ಬಾರ್,ರೆಸ್ಟೋರೆಂಟ್‌ಗಳಿಗೆ ಅವಕಾಶ ನೀಡಲಾಗಿದೆ ಹಾಗೂ ಎಲ್ಲಾ ವಲಯದಲ್ಲಿ‌ ಕೆಲಸ ಕಾರ್ಯಗಳು‌‌ ನಡೆಯುತ್ತಿದೆ ಆದರೆ ಚುನಾವಣೆ ಪ್ರಕ್ರಿಯೆ ಮುಗಿಸಲು ಎಷ್ಟುದಿನ‌ ಬೇಕು?? ಎಂದು ಪ್ರಸ್ನಿಸಿದ್ದಾರೆ.  
ಚುನಾವಣೆ ಆಯೋಗ ಮುಂದಿನ ದಿನ ಜನರಿಗೆ ನ್ಯಾಯಯುತ ಆಡಳಿತ ನೀಡದಿದ್ದರೆ ಜನರ ಮೂಲಕ ನ್ಯಾಯಾಲಯದ. ಮೊರೆ ಹೋಗಲಾಗುವುದು ಕೂಡಲೇ ಗ್ರಾ. ಪಂ. ಚುನಾವಣೆ ನಡೆಸಲು ಮುಂದಾಗಬೇಕು. ನಗರಸಭೆ ಪುರಸಭೆ ಆಡಳಿತ‌ ನಡೆಸಲು ಜನಪ್ರತಿನಿಧಿಗಳಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ದೇವೇಗೌಡರು‌ ಹಾಗೂ ಜನತೆ ಆಶೀರ್ವಾದದಿಂದಲೇ ನಾನು ಇಂದು ರಾಜಕೀಯದಲ್ಲಿ ಇದ್ದೇನೆ....!!!

ರೇವಣ್ಣ ಅವರು ಎಚ್ ಡಿ ದೇವೇಗೌಡ ಹೆಸರಿನಲ್ಲಿ ಇಂದಿಗೂ ರಾಜಕೀಯದಲ್ಲಿ ಉನ್ನತ ಸ್ಥಾನ ಗಳಿಸಿದ್ದಾರೆ ಎಂಬ ಕೆಲ‌ ನಾಯಕರ ಹೇಳಿಕೆಗೆ ಉತ್ತರಿಸಿದ ರೇವಣ್ಣ ಅವರು ಹೌದು, ನಾನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಹೆಸರಿನಲ್ಲಿ ಹಾಗೂ ಜಿಲ್ಲೆಯ ಜನತೆಯ ಆಶೀರ್ವಾದದಿಂದ ಇಂದು ಈ ಸ್ಥಾನವನ್ನು ಅಲಂಕರಿಸಿದ್ದೇನೆ ಎಂದರು.

ದೇವೆಗೌಡರು ಮಾಜಿ ಪ್ರಧಾನಿ ಹಾಗೂ ರಾಜಕೀಯ ಹಿರಿಯ ನಾಯಕರು ಆದ್ದರಿಂದ ಇಂದು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಹಿಂಬಾಗಿಲ‌ ರಾಜಕಾರಣ ಮಾಡುವ ಪ್ರಮೇಯೇ ಅವರಿಗಿಲ್ಲ ಅವರ ರಾಜಕೀಯ ಜೀವನದಲ್ಲಿ ಎಷ್ಟು ಚುನಾವಣೆ ಎದುರಿಸಿ‌ಗೆದ್ದಿದ್ದಾರೆ ರಾಜ್ಯದ ಜನತೆಗೆ ಗೊತ್ತಿದೆ‌ ಈ ಬಗ್ಗೆ ಬೇರೆ ಪಕ್ಷದ ಟೀಕೆಗೆ ನಾ ಉತ್ತರಿಸೊಲ್ಲ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios