ಪಂಚರಾಜ್ಯ ಚುನಾವಣೆ ಮುಗಿದ ನಂತರ, ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಯ ಮೂರನೇ ಹಂತಕ್ಕೆ ಸಿದ್ಧತೆ ನಡೆಸಿದೆ. ಕರ್ನಾಟಕ ಸೇರಿದಂತೆ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಸುಮಾರು 40 ಕೋಟಿ ಮತದಾರರ ವಿವರಗಳನ್ನು ಪರಿಷ್ಕರಿಸಲಾಗುವುದು.

ನವದೆಹಲಿ (ಮೇ.12): ಪಂಚರಾಜ್ಯ ಚುನಾವಣೆ ಮುಕ್ತಾಯ ಬೆನ್ನಲ್ಲೇ ಚುನಾವಣಾ ಆಯೋಗ ಮೂರನೇ ಹಂತದ ಮತಪಟ್ಟಿ ಪರಿಷ್ಕರಣೆಗೆ ಸಜ್ಜಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

22 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಪಟ್ಟಿ ಪರಿಷ್ಕರಣೆ

ಕರ್ನಾಟಕ ಸೇರಿದಂತೆ ಬಾಕಿ ಉಳಿದಿರುವ 22 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಪಟ್ಟಿ ಪರಿಷ್ಕರಣೆಗೆ ಆಯೋಗ ಸಿದ್ಧತೆ ನಡೆಸಿದೆ. ಇತ್ತೀಚಿಗೆ ಚುನಾವಣೆ ಎದುರಿಸಿದ ಅಸ್ಸಾಂ, ತಮಿಳುನಾಡು, ಕೇರಳ, ಪುದುಚೇರಿ, ಪಶ್ಚಿಮ ಬಂಗಾಳ ಸೇರಿ 10 ರಾಜ್ಯಗಳಲ್ಲಿ ಮೊದಲೆರೆಡು ಹಂತಗಳಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಸಿತ್ತು.

40 ಕೋಟಿ ಮತದಾರರು ಪರಿಷ್ಕರಣೆಗೆ

ಈಗ ಮೂರನೇ ಹಂತವಾಗಿ ಕರ್ನಾಟಕ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಜಮ್ಮುಕಾಶ್ಮೀರ, ಹರ್ಯಾಣ, ತೆಲಂಗಾಣ ಸೇರಿ 22 ರಾಜ್ಯಗಳಿಗೆ ನಡೆಯಲಿದೆ. ಇಲ್ಲಿ 40 ಕೋಟಿ ಮತದಾರರು ಪರಿಷ್ಕರಣೆಗೆ ಒಳಪಡಲಿದ್ದಾರೆ.

ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ 

ಬಂಗಾಳದಲ್ಲಿ SIR ಗೆ ಸೋತ ಮೇಡಂ; ರಾಜ್ಯದಲ್ಲಿ 'ಕೈ' ಅಲರ್ಟ್!

ರಾಜ್ಯದಲ್ಲಿ ಎಸ್‌ಐಆರ್ ಯಾವಾಗ ಶುರು? ಮತಪಟ್ಟಿ ವಿಶೇಷ ಪರಿಷ್ಕರಣೆಗೆ ಆಯೋಗ ಸಜ್ಜು